ರಾಮಮಂದಿರ ನಿರ್ಮಿಸದಿದ್ದರೆ ಬಿಜೆಪಿ ವಿರುದ್ಧ ಮತ: ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಬೆಂಗಳೂರು, ನವೆಂಬರ್ 12: ಸಾರ್ವತ್ರಿಕ ಚುನಾವಣೆಗೆ ಮೊದಲು ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡದೇ ಇದ್ದರೆ ಬಿಜೆಪಿಗೆ ವಿರುದ್ಧವಾಗಿ ಮತಚಲಾಯಿಸುವಂತೆ ಶ್ರೀರಾಮಸೇನೆ ಕರೆ ನೀಡಲಿದೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿಯ ಗೋಣಿಕೊಪ್ಪದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನರು ಅಭಿವೃದ್ಧಿ ಮತ್ತು ಹಿಂದುತ್ವದ ಕಾರಣದಿಂದ ಬಿಜೆಪಿಗೆ ಮತ ನೀಡಿದ್ದಾರೆ, ಈ ಬಾರಿಯೂ ಗೆಲ್ಲಬೇಕು ಎಂದರೆ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದರು.
ಸಮಸ್ತ ಹಿಂದೂಗಳ ಭಾವನೆಯ ಪ್ರತೀಕವಾದ ರಾಮಮಂದಿರವನ್ನು ಬಿಜೆಪಿ ನಿರ್ಮಾಣ ಮಾಡಲೇ ಬೇಕು ಎಂದು ಒತ್ತಾಯಿಸಿದ ಅವರು, ಶಬರಿಮಲೆ ವಿವಾದದ ಬಗ್ಗೆ ಮಾತನಾಡಿ, ತೀರ್ಪು ನೀಡುವಾಗಿ ಸುಪ್ರಿಂಕೋರ್ಟ್ ಧರ್ಮದ ಹಿರಿಯರ ಪಡೆಯಬೇಕಿತ್ತು ಎಂದರು.

ಟಿಪ್ಪು ಜಯಂತಿ ಆಚರಣೆಗೆ ಗೈರಾಗಿರುವ ಸಿಎಂ ಕುಮಾರಸ್ವಾಮಿ ಹಾಗೂ ಪರಮೇಶ್ವರ್‌ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಜಯಂತಿಯನ್ನು ಸ್ವತಃ ಮುಸ್ಲಿಮರೇ ವಿರೋಧಿಸುತ್ತಿದ್ದಾರೆ, ವರ್ಷದಿಂದ ವರ್ಷಕ್ಕೆ ಜಯಂತಿ ಕಳೆ ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.











Click it and Unblock the Notifications