ಸಿಎಂ ಪಟ್ಟಕ್ಕಾಗಿ ಜಟಾಪಟಿ: ದಲಿತ ಸಿಎಂ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ಹುಬ್ಬಳ್ಳಿ, ಫೆಬ್ರವರಿ 15: ರಾಜ್ಯ ಕಾಂಗ್ರೆಸ್‌ ನಲ್ಲಿ ಅಧಿಕಾರ ಹಂಚಿಕೆ ಕುರಿತು ಪದೇ ಪದೇ ಚರ್ಚೆಯಾಗುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಇಲ್ಲ ಎಂದು ಹೇಳುವ ಮೂಲಕ ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ತಿರುಗೇಟು ನೀಡಿದ್ದಾರೆ. ಇತ್ತ ದಲಿತ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ನಾಯಕರ ಮುಂದೆ ಹಲವು ಬೇಡಿಕೆಗಳನ್ನ ಇಟ್ಟಿದ್ದು, ಇದೀಗ ದಲಿತ ಸಿಎಂ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ದಲಿತ ಸಿಎಂ ಮಾಡಿದರೆ ಬಹಳ ಸಂತೋಷ. ಆದರೆ ಇದನ್ನು ಹಾದಿ ಬೀದಿಯಲ್ಲಿ ಮಾತನಾಡಿರುವುದು ಸರಿಯಲ್ಲ ಕಾಂಗ್ರೆಸ್ ನಲ್ಲಿ ಬಹಳ ಗೊಂದಲ ಇದೆ ಇದೊಂದು ರಾಜ್ಯ ಹೋಗುತೆಂದು ಮ್ಯಾನೇಜ್ ಮಾಡುತ್ತಿದ್ದಾರೆ. ದಲಿತ ಸಿಎಂ ಆಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು. ಕೆಲವರು ಅಧಿಕಾರ ಹಂಚಿಕೆ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ. ಪ್ರತಿಭಟನೆ ಮಾಡೋದು ನಂತರ ವಿದೇಶಕ್ಕೆ ಹೋಗೋದು. ರಾಹುಲ್ ಬರೀ ಅದಾನಿ, ಅಂಬಾನಿ ಬಗ್ಗೆ ಮಾತನಾಡುವುದೇ ಆಗಿದೆ ಇನ್ನು ಎಷ್ಟು ವರ್ಷ ಅವರ ಬಗ್ಗೆ ಮಾತಾಡುತ್ತೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

Will Be Happy If Dalit Becomes CM says Pralhad Joshi

ಸಿದ್ದರಾಮಯ್ಯ ಬೇಕೊ ಬೇಡವೋ ಎಂದು ಅವರ ಪಕ್ಷ ತೀರ್ಮಾನಿಸಲಿ. ಆದರೆ ಸರಿಯಾದ ರೀತಿ ಆಡಳಿತ ಕೊಡಲಿ. ಈಗ ಯಾಕೆ ಸಿದ್ದರಾಮಯ್ಯ ನಿವೃತ್ತಿಯ ಬಗ್ಗೆ ಚರ್ಚೆ? ಸಿದ್ದರಾಮಯ್ಯ ನಿವೃತ್ತಿ ಆಗುತ್ತಾರೋ ಅಥವಾ ಇರುತ್ತಾರೋ ಡಿಕೆ ಸಿಎಂ ಆಗುತ್ತಾರೋ ಇದೆಲ್ಲ ಇವಾಗ ಯಾಕೆ ಚರ್ಚೆ? ದಲಿತ ಸಿಎಂ ಕೂಗು ಎದ್ದಿದೆ ಆಡಳಿತದಲ್ಲಿ ಗೊಂದಲ ಇದೆ ಮೊದಲು ಗೊಂದಲ ಸರಿಪಡಿಸಿ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ‌ಮತಾಂಧ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿವೆ. ಮೈಸೂರಿನ ಘಟನೆ ಪೂರ್ವ ತಯಾರಿಯಿಂದ ಆಗಿದೆ, ಇದು ಸಂಪೂರ್ಣ ತನಿಖೆಯಾಗಬೇಕು. ಇದು ಅತ್ಯಂತ ಗಂಭೀರವಾದ ವಿಷಯ ಆಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಿಎಫ್ ಐ, ಎಸ್ ಡಿಪಿಐ, ಕೇಸ್ ವಾಪಸು ಪಡೆದ್ರು. ಹಳೇ ಹುಬ್ಬಳ್ಳಿ ಕೇಸ್ ವಾಪಸಾತಿಯಿಂದ ಅವರಿಗೆ ದೊಡ್ಡ ಕುಮ್ಮಕ್ಕು ಬಂದಿದ್ದು, ಇಸ್ಲಾಂ ಮತಾಂಧ ಶಕ್ತಿಗಳು ಕಾಂಗ್ರೆಸ್ ಬೆಂಬಲದಿಂದ ಈ‌ ರೀತಿಯಲ್ಲಿ ‌ವರ್ತನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಎಡಬಿಡಂಗಿತನದಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಇಲ್ಲ‌ ನಮ್ಮ ರಾಜ್ಯದಲ್ಲಿ ಸಹ ನಿಮ್ಮನ್ನು ಕಿತ್ತೊಗೆಯುತ್ತಾರಕಾಂಗ್ರೆಸ್ ನವರಿಗೆ ಮುಸ್ಲಿಂ ಅವರು ಮಾತ್ರ ಬೇಕಾ?.
ಈ‌ ಘಟನೆಯನ್ನು ಸಹ ಕಾಂಗ್ರೆಸ್ ಇದನ್ನು ತುಷ್ಟಿಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಗೃಹ ಸಚಿವರು ತಮ್ಮ ಐಡಿಯಾಲಜಿ ತಕ್ಕಂತೆ ಮಾತನಾಡನಾಡುತ್ತಾರೆ. ಸಾರ್ವಜನಿಕರ ಆಸ್ತಿ ನಷ್ಟ ಬರಿಸೋರು ಯಾರು ಅತೀ ಹೆಚ್ಚು ಹಿಂದೂಗಳು ತೆರಿಗೆ ನೀಡುತ್ತಾರೆ. ಗಲಭೆಕೋರರಿಂದ ಆಸ್ತಿ ನಷ್ಟವನ್ನು ಒದ್ದು ವಸೂಲಿ ಮಾಡಬೇಕು. ಸರ್ಕಾರಕ್ಕೆ ತಾಕತ್ತು ಇದ್ದರೆ ಇದನ್ನು ಮಾಡಲಿ ಎಂದು ಸವಾಲು ಹಾಕಿದರು.

ಇದು ಕಮ್ಯುನಿಸ್ಟ್, ಕೇರಳ ಬೆಂಬಲ ಇಲ್ಲದ ಈ ರೀತಿ ನಡೆಯೊಲ್ಲಾ.ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ಆರ್ ಎಸ್ ಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ಮತಾಂಧ ಶಕ್ತಿ ವ್ಯವಸ್ಥಿತ ಪ್ಲಾನ್ ಮಾಡಿಕೊಂಡು ಈ ರೀತಿಯಲ್ಲಿ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಪಾರ್ಟಿ ಪರಸ್ಪರ ಭಿನ್ನಾಭಿಪ್ರಾಯದಿಂದ ಆಡಳಿತದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ತಿಳಿಸಿದರು.

ಅದಾನಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮರೆಮಾಚುವ ಕೆಲಸ ಮಾಡತಾ ಇದ್ದಾರೆ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿ ಸಿರಿಯಸ್‌ ರಾಜಕಾರಣಿ ಅಲ್ಲ. ಅವರ ಬಗ್ಗೆ ಹೆಚ್ಚು ಮಾತನಾಡೋ ಅವಶ್ಯಕತೆ ಇಲ್ಲ. ಇದೆ ಅದಾನಿ, ಅಂಬಾನಿ ಅಂತ ಎಷ್ಟು ವರ್ಷ ತೆಗೆದುಕೊಂಡು ಹೋಗುತ್ತಿದ್ದಿರಿ. ಕೃಷಿ, ಸಣ್ಣ, ದೊಡ್ಡ ವ್ಯಾಪಾರ ದೇಶಕ್ಕೆ ‌ಬೇಕು ಇದನ್ನು ಬಿಟ್ಟು ಅಂಬಾನಿ, ಅದಾನಿಗೆ ಏನು ವಿಶೇಷ ಸವಲತ್ತು ನೀಡಿದೆ‌ ಹೇಳಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+