Get Updates
Get notified of breaking news, exclusive insights, and must-see stories!

ಒಕ್ಕಲಿಗರ ಮನವೊಲಿಸಲು ಬಿಜೆಪಿ ಪ್ರಯತ್ನ; ಒಕ್ಕಲಿಗರ ಮತಕ್ಕೆ ಯಾಕಿಷ್ಟು ಪ್ರಾಮುಖ್ಯತೆ ಗೊತ್ತೆ?

ಬೆಂಗಳೂರು, ಏಪ್ರಿಲ್. 11: ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಸಮುದಾಯಗಳ ಮತಬೇಟೆಗೆ ರಾಜಕೀಯ ಪಕ್ಷಗಳು ಭರ್ಜರಿಯಾಗಿ ತಯಾತಿ ನಡೆಸುತ್ತಿವೆ. ರಾಜ್ಯದ ಜನಸಂಖ್ಯೆಯ ಶೇ 15 ರಷ್ಟಿರುವ ಎರಡನೇ ಪ್ರಮುಖ ಸಮುದಾಯವೆಂದು ಪರಿಗಣಿಸಲ್ಪಟ್ಟಿರುವ ಒಕ್ಕಲಿಗ ಸಮುದಾಯದ ಮತಗಳಿಗಾಗಿ ಎಲ್ಲ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಶೇ 17 ರಷ್ಟು ಲಿಂಗಾಯತರಿದ್ದಾರೆ.

ಮೇ ಹತ್ತರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಆಡಳಿತಾರೂಢ ಬಿಜೆಪಿಯು ಒಕ್ಕಲಿಗರನ್ನು ಓಲೈಸಲು ಪ್ರಯತ್ನಿಸುತ್ತಿರುವುದರಿಂದ ಅವರ ಮತದಾನದ ನಿಲುವು ಹೇಗೆ ಬದಲಾಗಲಿದೆ ಎಂಬುದರ ಮೇಲೆ ಫಲಿತಾಂಶ ಕೂಡ ಕೇಂದ್ರೀಕೃತವಾಗಿದೆ. ಸ್ವಾತಂತ್ರ್ಯದ ನಂತರ ಕರ್ನಾಟಕಕ್ಕೆ ಏಳು ಮುಖ್ಯಮಂತ್ರಿಗಳನ್ನು ಮತ್ತು ಪ್ರಧಾನ ಮಂತ್ರಿಯನ್ನು ನೀಡಿಡುವ ಒಕ್ಕಲಿಗ ಸಮುದಾಯ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

Why Political Parties Fight for Vokkaliga Vote In State

ಕರ್ನಾಟಕದ 17 ಮುಖ್ಯಮಂತ್ರಿಗಳ ಪೈಕಿ ಏಳು ಮಂದಿ ಒಕ್ಕಲಿಗ ಸಮುದಾಯದವರು. ರಾಜ್ಯದ ಮೊದಲ ಮೂರು ಮುಖ್ಯಮಂತ್ರಿಗಳಾದ ಕೆ ಚೆಂಗಲರಾಯ ರೆಡ್ಡಿ, ಕೆಂಗಲ್ ಹನುಮಂತಯ್ಯ ಮತ್ತು ಕಡಿದಾಳ್ ಮಂಜಪ್ಪ ಅವರು ಒಕ್ಕಲಿಗ ಸಮುದಾಯದವರು. ಒಕ್ಕಲಿಗರಾದ ಎಚ್ ಡಿ ದೇವೇಗೌಡರು ಕರ್ನಾಟಕದಿಂದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕ್ತಿ.

ಸಮುದಾಯದ ಭದ್ರಕೋಟೆಯಾದ ಹಳೆಯ ಮೈಸೂರು ಪ್ರದೇಶವು ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಕೋಲಾರ, ತುಮಕೂರು ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿದೆ. ಈ ಪ್ರದೇಶವು 58 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇದು 224 ಸದಸ್ಯರ ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು.

Why Political Parties Fight for Vokkaliga Vote In State

ಪ್ರಸ್ತುತ ವಿಧಾನಸಭೆಯಲ್ಲಿ ಈ ಪ್ರದೇಶದಲ್ಲಿ ಜೆಡಿಎಸ್ 24, ಕಾಂಗ್ರೆಸ್ 18 ಮತ್ತು ಬಿಜೆಪಿ 15 ಸ್ಥಾನಗಳನ್ನು ಪ್ರತಿನಿಧಿಸಿದೆ. ಇದನ್ನು ಹೊರತುಪಡಿಸಿ, 28 ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ (ನಾಲ್ಕು ಕ್ಷೇತ್ರಗಳು), ಮತ್ತು ಚಿಕ್ಕಬಳ್ಳಾಪುರ (ಎಂಟು ಕ್ಷೇತ್ರಗಳು) ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವು ಗಣನೀಯ ಸಂಖ್ಯೆಯಲ್ಲಿದೆ.

ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಆನೇಕಲ್ ಹೊರತುಪಡಿಸಿ ಎಲ್ಲಾ 27 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರದಲ್ಲಿಯೂ ಈ ಸಮುದಾಯದವರು ಹಿಡಿತ ಸಾಧಿಸಿದ್ದಾರೆ. ಈ ಸಮುದಾಯ ಇತರ ಕೆಲವು ಸಮುದಾಯಗಳಂತೆ ಸಾಮೂಹಿಕವಾಗಿ ಒಂದೇ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಇದು ಇದರ ದೌರ್ಬಲ್ಯ ಮತ್ತ ಶಕ್ತಿಯೂ ಹೌದು.

ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಹಳೆಯ ಮೈಸೂರು ಪ್ರದೇಶದಲ್ಲಿ ಒಕ್ಕಲಿಗರನ್ನು ತನ್ನ ಮುಖ್ಯ ಮತಬ್ಯಾಂಕ್ ಅಗಿ ಪರಿಗಣಿಸುತ್ತದೆ, ಅಲ್ಲಿ ಅದರ ಪ್ರಮುಖ ವಿರೋಧಿ ಕಾಂಗ್ರೆಸ್‌. ಆದರೂ ತಡವಾಗಿ ಬಿಜೆಪಿ ಸ್ವಲ್ಪಮಟ್ಟಿಗೆ ಈ ಪ್ರದೇಶವನ್ನು ಪ್ರವೇಶಿಸಿದೆ.

ಈ ಸಮುದಾಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಬಿಜೆಪಿ ಸರ್ಕಾರವು ತನ್ನ 'ಮೀಸಲಾತಿ' ಅನುಮೋದನೆಯನ್ನು ತಂದಿದೆ. 2B ವರ್ಗದ ನಾಲ್ಕು ಶೇಕಡಾ ಮೀಸಲಾತಿಯನ್ನು ವಿಶೇಷವಾಗಿ 'ಇತರ ಹಿಂದುಳಿದ ಮುಸ್ಲಿಮರಿಗೆ ನೀಡಲಾಗಿತ್ತು. ಅದನ್ನು ರದ್ದುಗೊಳಿಸಿ ಮಿಸಲಾತಿಯನ್ನು ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಶೇಕಡಾ ಎರಡರಷ್ಟನ್ನು ಸಮಾನವಾಗಿ ಹಂಚಿದೆ. ಇದರಿಂದ ಒಕ್ಕಲಿಗರಿಗೆ ಮೀಸಲಾತಿ ನಾಲ್ಕರಿಂದ ಶೇ.6ಕ್ಕೆ ಏರಿದೆ.

ಇದರಿಂದ ಒಕ್ಕಲಿಗ ಸಮುದಾಯದ ಪೂಜ್ಯ ಆದಿಚುಂಚನಗಿರಿ ಮಠದ ಮಠಾಧೀಶ ಸ್ವಾಮಿ ನಿರ್ಮಲಾನಂದನಾಥ, ಬಿಜೆಪಿ ಸರ್ಕಾರವನ್ನು ಹೊಗಳಿದ್ದಾರೆ. ತನ್ನ ಒಕ್ಕಲಿಗ ಮತಬೇಟೆಯ ಭಾಗವಾಗಿ, ಬಿಜೆಪಿಯು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೆಂಗಳೂರಿನ ಸ್ಥಾಪಕ ಮತ್ತು ವಿಜಯನಗರ ಸಾಮ್ರಾಜ್ಯದ 16 ನೇ ಶತಮಾನದ ಮುಖ್ಯಸ್ಥ ನಾಡ ಪ್ರಭು ಕೆಂಪೇಗೌಡರ ಅವರ 108 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿದೆ.

ಇತ್ತೀಚೆಗಷ್ಟೇ ಚಿತ್ರ ನಿರ್ಮಾಪಕರೂ ಆಗಿರುವ ಸಚಿವ ಮುನಿರತ್ನ ಅವರು ಜಾನಪದ ಕಥೆಯನ್ನು ಆಧರಿಸಿ 'ಉರಿಗೌಡ-ನಂಜೇಗೌಡ' ಸಿನಿಮಾ ಮಾಡುವ ಪ್ಲಾನ್ ಮಾಡಿದ್ದರು. ಆದರೆ, ಕಥೆಯ ಹಿಂದೆ ಯಾವುದೇ ಐತಿಹಾಸಿಕ ಆಧಾರವಿಲ್ಲ ಮತ್ತು ಇದು ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ ಎಂದು ಸ್ವಾಮಿ ನಿರ್ಮಲಾನಂದನಾಥ ಅವರು ಯೋಜನೆಯನ್ನು ಮುಂದುವರಿಸದಂತೆ ಕೋರಿದ ನಂತರ ಮುನಿರತ್ನ ಸಿನಿಮಾ ನಿಲ್ಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+