Siddaramaiah VS DK Shivakumar: ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೈ ತಪ್ಪುವ ಆತಂಕ: 135 ಜನ ಶಾಸಕರಲ್ಲಿ ಯಾರಿಗೆ ಯಾರ ಬಲ!
ಬೆಂಗಳೂರು, ಮೇ 15: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರವೇ ಕಾಂಗ್ರೆಸ್ ಹೈಕಮಾಂಡ್ ಗೆ ಸವಾಲಗಿದೆ. ಈಗಾಗಲೇ ಹೈಕಮಾಂಡ್ ನಾಯಕ ಬುಲಾವ್ ಮೇರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ತೆರಳಲಿದ್ದು, ಡಿ ಕೆ ಶಿವಕುಮಾರ್ ಗೆ ಆತಂಕ ಶುರುವಾಗಿದೆ.
ಇನ್ನೂ ಭಾನುವಾರ ನಡೆದ ಸಿಎಲ್ಪಿ ಸಭೆಯಲ್ಲಿ 135 ಶಾಸಕರ ಅಭಿಪ್ರಾಯವಪನ್ನ ಸಂಗ್ರಹಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಮೂವರು ವೀಕ್ಷಕರನ್ನು ಕಳುಹಿಸಿದೆ. ಈ ವೀಕ್ಷಕರು ಎಲ್ಲಾ ನೂತನ ಶಾಸಕರ ಅಭಿಪ್ರಾಯ ಪಡೆದುಕೊಂಡು ಹೈಕಮಾಂಡ್ಗೆ ನೀಡಿದ್ದಾರೆ. ವೀಕ್ಷಕರಿಂದ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಲುಪಿಸಿದ್ದಾರೆ.

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ ನೀಡಿದೆ. ಸೋಮವಾರ ಮಧ್ಯಾನ್ಹ ಸಿದ್ದರಾಮಯ್ಯ ಹೈಕಮಾಂಡ್ ನತ್ತ ತಮ್ಮ ಆಪ್ತ ಶಾಸಕರ ಜೊತೆಗೆ ದೆಹಲಿಗೆ ತಲುಪಿದ್ದು, ಡಿ ಕೆ ಶಿವಕುಮಾರ್ ಅಜ್ಜಯ್ಯನ ಮೊರೆ ಹೋಗಿದ್ದಾರೆ. ಇಂದು(ಸೋಮವಾರ) ರಾತ್ರಿ ಡಿ ಕೆ ಶಿವಕುಮಾರ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಆಸೆಯನ್ನ ಇಟ್ಟುಕೊಂಡಿದ್ದ ಡಿ ಕೆ ಶಿವಕುಮಾರ್ ಈಗಾಗಲೇ ಹೈಕಮಾಂಡ್ ನಾಯಕರ ಬಳಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಹೈಕಮಾಂಡ್ ನೇಮಿಸಿದ ವೀಕ್ಷಕರು ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನ ಸಂಗ್ರಹಿಸಲಿದ್ದಾರೆ, ಆದರೆ ಈ ಅಭಿಪ್ರಾಯಗಳಿಂದ ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲಿದೆ ಎಂಬ ಆತಂಕ ಡಿ ಕೆ ಶಿವಕುಮಾರ್ ಗೆ ಶುರುವಾಗಿದೆ. ಏಕೆಂದರೆ ಕಳೆದ ಒಂದು ವರ್ಷಗಳಿಂದ ಸಿದ್ದರಾಮಯ್ಯ ಪರ ಹಲವು ನಾಯಕರು ಬಹಿರಂಗವಾಗಿ ಬ್ಯಾಟಿಂಗ್ ಬೀಸಿದ್ದು, ಈ ಬಾರೀಯೂ ಸಹ ವೀಕ್ಷಕರ ಬಳಿ ಹಲವು ಶಾಸಕರು ಸಿದ್ದರಾಮಯ್ಯ ಗೆ ಜೈ ಎನ್ನುವ ಸಾಧ್ಯತೆ ಇದೆ ಎಂಬ ನಡುಕ ಡಿ ಕೆ ಶಿವಕುಮಾರ್ ಅವರಿಗೂ ಶುರುವಾಗಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿಕ್ಕೆ ಸಿಗುತ್ತೆ ಎನ್ನುವ ಭರವಸೆಯನ್ನ ಇಟ್ಟುಕೊಂಡಿದ್ದ ಡಿ ಕೆ ಶಿವಕುಮಾರ್ ಇಂದು ಸುದ್ದಿಗೋಷ್ಠಿ ನಡೆಸುವ ಮೂಲಕ ನಾನು ಒಬ್ಬಂಟಿ, ಒಬ್ಬಂಟಿಯಾಗಿ ಹೋರಾಡಿದ್ದೇನೆ ಯಾವುದಕ್ಕೂ ಹೆದರಲ್ಲ ಎಂದು ಹೇಳಿದ್ದು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನನಗೆ ಧೈರ್ಯ ತುಂಬಿದ್ದು, ಈ ವಿಚಾರವನ್ನು ಅವರಿಗೆ ಬಿಡುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದು, ಸಿಎಂ ಸ್ಥಾನ ಕೈ ತಪ್ಪುವ ಆತಂಕವನ್ನ ವ್ಯಕ್ತಪಡಿಸಿದ್ದಾರೆ.

2024 ರ ಲೋಕಸಭಾ ಚುನಾವಣೆ ಹಿನ್ನಲೆ ಕರ್ನಾಟಕದಲ್ಲೂ ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನ ಗೆಲ್ಲಬೇಕು ಎಂದರೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ನ ಹಲವು ನಾಯಕರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಬ್ಯಾಂಕ್ ನಿರ್ವಹಣೆ ಮಾಡಬೇಕು. ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಬರೀ ಹಳೇ ಮೈಸೂರಿಗಷ್ಟೇ ಸೀಮಿತವಾಗಿರುವ ನಾಯಕ. ಉತ್ತರ ಕರ್ನಾಟಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪರ ಜನರು ಒಲವಿದೆ. ಅಲ್ಲದೇ ಈಗಾಗಲೇ 5 ವರ್ಷಗಳ ಕಾಲ ಆಡಳಿತ ನಡೆಸಿದ ಅನುಭವ ಮತ್ತು ಕ್ಲೀನ್ ಇಮೇಜ್ ಇರುವ ನಾಯಕ ಎಂದು ಕಾಂಗ್ರೆಸ್ ನ ಕೆಲವು ನಾಯಕರು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿರುವ ಹೈಕಮಾಂಡ್ ಸಿದ್ದರಾಮಯ್ಯ ಪರ ಒಲುವು ವ್ಯಕ್ತವಾಗಿದ್ದು, ಡಿ ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೈ ತಪ್ಪುವ ಆತಂಕ ಶುರುವಾಗಿದೆ.












Click it and Unblock the Notifications