ರೋಚಕ ಕಥೆಗೆ ಎಂಥ ತಿರುವು?! ಅಂದಹಾಗೆ, ಯಾರೀ ಅನುಪಮ?

Posted By:
Subscribe to Oneindia Kannada

ಬೆಂಗಳೂರು, ಜೂನ್ 08: ಅನುಪಮಾ ಶೆಣೈ ಎಂದರೆ ಯಾರು? ಎಲ್ಲೆಲ್ಲಿ ಕಾರ್ಯ ನಿರ್ವಹಿಸಿದ್ದಾರೆ? ಶೆಣೈ ಖಡಕ್ ಆಫೀಸರ್ ಆಗಲು ಏನು ಕಾರಣ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಒಂದು ಕಾಲದಲ್ಲಿ 'ರಿಪಬ್ಲಿಕ್ ಆಫ್ ಬಳ್ಳಾರಿ' ಎಂಬ ಹೆಸರಿನಿಂದ ರಾಷ್ಟ್ರೀಯ ಸುದ್ದಿವಾಹಿನಿಗಳ ಕಣ್ಣರಳಿಸಿದ್ದ ಬಳ್ಳಾರಿ ಜಿಲ್ಲೆ ಮತ್ತೊಮ್ಮೆ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಮೂಲಕ ಸುದ್ದಿಯಾಗುತ್ತಿದೆ.

ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರಾದ ಅನುಪಮಾ ಅವರ ತಂದೆ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರೆ, ತಾಯಿ ನಳಿನಿ ಬಿಡಿ ಕಟ್ಟುವ ಮೂಲಕ ಜೀವನೋಪಾಯ ಸಾಗಿಸುತ್ತಿದ್ದಾರೆ. ಅವರ ವೃತ್ತಿ ಹಾಗೂ ಬದುಕಿನ ಪ್ರಮುಖ ಘಟ್ಟಗಳು ಇಲ್ಲಿವೆ:[ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

* ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸಬ್ ವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಕಣ್ಮರೆಯಾಗಿದ್ದಾರೆ.

* ಅನುಪಮಾ ಅವರು ಫೇಸ್ ಬುಕ್ ನಲ್ಲಿ ಪ್ರತ್ಯಕ್ಷವಾಗಿ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಸಾರ್ವಜನಿಕರ ಬೆಂಬಲ ಪಡೆದುಕೊಂಡಿದ್ದಾರೆ.

* ಲಿಕ್ಕರ್ ಲಾಬಿಗೆ ಸಿದ್ದರಾಮಯ್ಯ ಅವರ ಸರ್ಕಾರದ ಮಣಿದಿದೆ. 'ರಮ್' ರಾಜ್ಯ ಎಂದು ಟೀಕಿಸಿದ್ದಾರೆ.

* ಈ ನಡುವೆ ಅನುಪಮಾ ಶೆಣೈ ಅವರಿಗೆ ನ್ಯಾಯ ಸಿಗಬೇಕಿದೆ ಎಂದು ಆನ್ ಲೈನ್ ಅಭಿಯಾನ ಆರಂಭವಾಗಿದೆ. ಅಭಿಮಾನಿಗಳು ಅನುಪಮಾ ಅವರ ಹೆಸರಿನಲ್ಲಿ ಫೇಸ್ ಬುಕ್ ಪುಟ ಆರಂಭಿಸಿದ್ದಾರೆ. ಮಿಕ್ಕ ವಿವರಗಳನ್ನು ಶೆಣೈ vs ಪರಮೇಶ್ವರ್ ನಾಯ್ಕ್ ಕಥೆ ಬಗ್ಗೆ ಸ್ವಲ್ಪ ಓದಿಕೊಂಡು ನಂತರ ಈ ಪುಟ ಓದಿ...

ರಾಧಾಕೃಷ್ಣ ಶೆಣೈ ಅವರದ್ದು ಬಡ ಕುಟುಂಬ

ರಾಧಾಕೃಷ್ಣ ಶೆಣೈ ಅವರದ್ದು ಬಡ ಕುಟುಂಬ

ಉಚ್ಚಿಲದಲ್ಲಿ ರಾಧಾಕೃಷ್ಣ ಶೆಣೈ ಅವರು ಈಗಲೂ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇವರಿಗೆ ಅನುಪಮಾ ಶೆಣೈ, ಅರವಿಂದ್ ಶೆಣೈ, ಅಚ್ಯುತ ಶೆಣೈ ಎಂಬ ಮೂವರು ಮಕ್ಕಳು. ಅನುಪಮಾ ಸಹೋದರರಾದ ಅರವಿಂದ್ ಶೆಣೈ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಎಲೆಕ್ಟ್ರಿಕಲ್ ಇಂಜಿನಿಯರ್ ಅಚ್ಯುತ ಶೆಣೈ ದುಬೈನಲ್ಲಿ ನೆಲೆಸಿದ್ದಾರೆ. ಅನುಪಮಾ ಅವರ ತಂದೆ ತಾಯಿ ಉಡುಪಿ, ಉಚ್ಚಿಲ, ಪಣಿಯೂರು ರಸ್ತೆಯಲ್ಲಿರುವ 'ಸೌಗಂಧಿಕ' ಹೆಸರಿನ ಮನೆಯಲ್ಲೇ ವಾಸವಾಗಿದ್ದಾರೆ.

ಮಂಗಳೂರಿನ ಅಜ್ಜಿ ಮನೆಯಲ್ಲಿದ್ದ ಅನುಪಮಾ

ಮಂಗಳೂರಿನ ಅಜ್ಜಿ ಮನೆಯಲ್ಲಿದ್ದ ಅನುಪಮಾ

ರಾಧಾಕೃಷ್ಣ ಶೆಣೈ ಅವರ ಮೊದಲ ಮಗಳಾದ ಅನುಪಮಾ ಶೆಣೈ ಜನವರಿ 11,1981ರಲ್ಲಿ ಜನಿಸಿದರು. ಮಂಗಳೂರಿನ ಅಜ್ಜಿ ಮನೆಯಲ್ಲಿ ಓದಿ ಬೆಳೆದವರು. ಕುಲಶೇಖರದ ಸೈಂಟ್ ಜೋಸೆಫ್ ಶಾಲೆ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ ಸಿ, ಎಂಎಸ್ ಡಬ್ಲ್ಯೂ ವ್ಯಾಸಂಗ ಮಾಡಿದವರು. ಕೆಲ ಕಾಲ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಪೊಲೀಸ್ ಆಗುವ ಕನಸು

ಪೊಲೀಸ್ ಆಗುವ ಕನಸು

ಚಿಕ್ಕಂದಿನಿಂದ ಪೊಲೀಸ್ ಇಲಾಖೆ ಸೇರುವ ಕನಸು ಹೊತ್ತಿದ್ದ ಅನುಪಮಾ ಅವರು ದೆಹಲಿಗೆ ತೆರಳಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಕರ್ನಾಟಕ ಆಡಳಿತಾತ್ಮಕ ಸೇವೆ (ಕೆಎಎಸ್) ಪರೀಕ್ಷೆಯನ್ನು ಬರೆದಿದ್ದರು. ಐಪಿಎಸ್ ಪರೀಕ್ಷೆ ಕ್ಲಿಯರ್ ಮಾಡಲು ಆಗದ ಕಾರಣ ರಾಜ್ಯ ಮಟ್ಟದ ಪರೀಕ್ಷೆಯನ್ನು 2012ರಲ್ಲಿ ತೆಗೆದುಕೊಂಡು ಕೆಪಿಎಸ್ ಕೆಡರ್ ಅಧಿಕಾರಿಯಾದರು.

ಮೈಸೂರಿನಲ್ಲಿ ತರಬೇತಿ

ಮೈಸೂರಿನಲ್ಲಿ ತರಬೇತಿ

ಮೈಸೂರಿನಲ್ಲಿ ಮೊದಲಿಗೆ ಪೊಲೀಸ್ ತರಬೇತಿ ಪಡೆದ ಅನುಪಮಾ ಅವರು ಶ್ರೇಷ್ಠ ರೈಫಲ್ ಶೂಟಿಂಗ್ ಹಾಗೂ ಮಹಿಳಾ ಕೆಡೆಟ್ ಎನಿಸಿಕೊಂಡರು. ಒಂದು ವರ್ಷದ ಕಾಲದ ತರಬೇತಿ ಬಳಿಕ ಮಡಿಕೇರಿಯ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿ 18 ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿದರು. ನಂತರ ಅವರನ್ನು ಬಳ್ಳಾರಿ ಜಿಲ್ಲೆ ಕೂಡ್ಲಿಗಿಗೆ ವರ್ಗಾಯಿಸಲಾಯಿತು.

ಎಲ್ಲೆಡೆಯಿಂದ ಬೆಂಬಲ

ಎಲ್ಲೆಡೆಯಿಂದ ಬೆಂಬಲ

ಪರಮೇಶ್ವರ್ ವಿರುದ್ಧ ನಿಂತ ಅನುಪಮಾ ಅವರಿಗೆ ಆನ್ ಲೈನಲ್ಲಿ ಮಾತ್ರವಲ್ಲದೆ, ಗೌಡ ಸಾರಸ್ವರ ಬ್ರಾಹ್ಮಣ (ಜಿಎಸ್ ಬಿ) ಸಮಾಜದ ಮುಖಂಡರಿಂದ (ವಿವೇಕಾನಂದ ಶೆಣೈ ಹಾಗೂ ನರಸಿಂಹ ಕಾಮತ್) ಬೆಂಬಲ ಸಿಕ್ಕಿದೆ. ಉದ್ಯೋಗದಲ್ಲಿ ಸಮಸ್ಯೆಯಿದ್ದರೆ ಕರ್ನಾಟಕ ಆಡಳಿತಾತ್ಮಕ ಪ್ರಾಧಿಕಾರ(ಕೆಎಟಿ)ಗೆ ದೂರು ನೀಡುವಂತೆ ಹಿತನುಡಿಗಳು ಸಿಕ್ಕಿವೆ. ಅನುಪಮಾ ಅವರ ಮುಂದಿನ ನಡೆಯೇನು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Who is Anumapa Shenoy : Here is a quick profile of resigned and Jobless DySP of Kudligi, Ballari district in Karnataka. Anupama a KPS cadre officer is a native of Udupi district
Please Wait while comments are loading...