Gold: ಮೈಸೂರು "ಚಿನ್ನದ ಅಂಬಾರಿ" ವಾಪಸ್ ಕೊಡುವಾಗ ಆಯ್ತಾ ಆ ತಪ್ಪು !
ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬೆನ್ನಲ್ಲೇ ವಿವಾದವೊಂದು ಸೃಷ್ಟಿಯಾಗಿದೆ. ಕರ್ನಾಟಕದ ಹೆಮ್ಮೆಯ ಮೈಸೂರು ದಸರಾ ಮುಕ್ತಾಯವಾಗಿದ್ದು, ಗಜಪಡೆ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದೆ. ಕೆಲವು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಇನ್ನೂ ಭೇಟಿ ನೀಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಅದ್ಧೂರಿಯಾಗಿ ನಡೆಸಿದ್ದು, ಮುಕ್ತಾಯವೂ ಆಗಿದೆ. ಈ ನಡುವೆ ಚಿನ್ನದ ಅಂಬಾರಿ ವಿಚಾರವಾಗಿ ವಿವಾದವೊಂದು ಸೃಷ್ಟಿಯಾಗಿದೆ.
ಮೈಸೂರು ದಸರಾದ ಕೇಂದ್ರ ಬಿಂದುವೇ ಬಂಗಾರದ ಅಂಬಾರಿ. ಈ ಬಾರ ಅಂಬಾರಿ ವಿಚಾರವಾಗಿ ಸಣ್ಣ ವಿವಾದವೊಂದು ಸೃಷ್ಟಿಯಾಗಿದೆ. ಇದಕ್ಕೆ ಪ್ರಮೋದಾದೇವಿ ಒಡೆಯರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನ ವಿಶ್ವವಿಖ್ಯಾತ ದಸರಾ ಹಾಗೂ ಜಂಬೂಸವಾರಿಯೂ ಮುಕ್ತಾಯವಾಗಿದೆ. ಆದರೆ, ಇದೀಗ ಚಿನ್ನದ ಅಂಬಾರಿಯನ್ನು ಹಿಂದಿರುಗಿಸಲು ವಿಳಂಬವಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರಮೋದಾದೇವಿ ಒಡೆಯರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ದಸರಾ ಹಾಗೂ ಚಿನ್ನದ ಅಂಬಾರಿಗೆ ಹಲವು ವಿಶೇಷತೆಗಳಿವೆ. ದಸರಾದಲ್ಲಿ ಬಂಗಾರದ ಅಂಬಾರಿಯನ್ನು ಕಣ್ತುಂಬಿಕೊಳ್ಳುವುದಕ್ಕೆ ಲಕ್ಷಾಂತರ ಜನ ಬರುತ್ತಾರೆ. ಆದರೆ, ಈ ಬಾರಿ ದಸರಾ ಸಂಭ್ರಮಾಚರಣೆಯ ನಂತರ, ಚಿನ್ನದ ಅಂಬಾರಿಯನ್ನು ವಾಪಸ್ ನೀಡುವುದು ತಡವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರಮೋದಾದೇವಿ ಒಡೆಯರ್ ಅವರೇ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ದಸರಾ - 2024ರ ವಿಜೃಂಭಣೆಯಿಂದ ನಡೆದಿದೆ. ಆದರೆ, ಈ ಬಾರಿಯೂ ಸಹ ಯುವ ದಸರಾ ಹಾಗೂ ಸ್ತಬ್ಧಚಿತ್ರ ಮೆರವಣಿಗೆ ಸೇರಿದಂತೆ ಕೆಲವು ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಅಂಬಾರಿಯ ವಿಷಯದಲ್ಲೂ ಗೊಂದಲವಾಗಿರುವುದು ಅಚ್ಚರಿ ಮೂಡಿಸಿದೆ. ಚಿನ್ನದ ಅಂಬಾರಿಯನ್ನು ವರ್ಷಪೂರ್ತಿ ಪೂರ್ತಿ ಭದ್ರತೆಯಲ್ಲಿ ನೋಡಿಕೊಳ್ಳಲಾಗುತ್ತದೆ. ಕರ್ನಾಟಕದ ಇತಿಹಾಸದಲ್ಲೂ ಬಂಗಾರದ ಅಂಬಾರಿಗೆ ವಿಶೇಷವಾದ ಸ್ಥಾನವಿದೆ. ಆದರೆ, ಈ ಬಾರಿ ದಸರಾ ಸಂಭ್ರಮದ ನಂತರ ಬಂಗಾರದ ಅಂಬಾರಿಯನ್ನು ತಡವಾಗಿ ನೀಡಲಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಅದಕ್ಕೆ ಪ್ರಮೋದಾದೇವಿ ಒಡೆಯರ್ ಅವರೇ ಪತ್ರದ ಮೂಲಕ ಉತ್ತರಿಸಿದ್ದಾರೆ.
ಅಂಬಾರಿಯನ್ನು ತಡವಾಗಿ ನೀಡಲಾಗಿದೆ ಎನ್ನುವ ಹೇಳಿಕೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ. ಅಂಬಾರಿಯನ್ನು ಮಧ್ಯಾಹ್ನ 2. 2 (ಎರಡು ಗಂಟೆ 2 ನಿಮಿಷಕ್ಕೆ) ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಮಗೂ ಆತಂಕವಾಗಿದೆ ಎಂದು ಹೇಳಿದ್ದಾರೆ.
ಅಂಬಾರಿ ಸುಗಮವಾಗಿ ಸಾಗಲಿಲ್ಲ: ಅಂಬಾರಿ ಸ್ಥಳಾಂತರಿಸಲು ಹೇಗೆ ಸಮಸ್ಯೆ ಆಗಿದೆ ಎನ್ನುವುದನ್ನೂ ಪ್ರಮೋದಾದೇವಿ ಒಡೆಯರ್ ಅವರು ವಿವರಿಸಿದ್ದಾರೆ. ನಾವು ಎಲ್ಲಾ ಕಾರ್ಯಕ್ರಮಗಳನ್ನೂ ಸುಗಮವಾಗಿ ನಡೆಸಲು ನಾವು ಪ್ರಯತ್ನಿಸಿದ್ದೇವೆ. ಆದರೆ, ನಿರ್ವಹಣೆ ಕೊರತೆಯಿಂದ ಈ ರೀತಿ ಆಗಿದೆ. ಅಂಬಾರಿ ಹಿಂದಿರುಗಿಸಲು ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವು. ಆದರೆ, ಅಂಬಾರಿಯನ್ನು ತೆಗೆದುಕೊಂಡು ಹೋಗುವ ಸಿಬ್ಬಂದಿ ಲೋಪವೆಸಗಿದ್ದಾರೆ. ಈ ಭಾಗದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆದರೆ, ಜನಸಂದಣಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಅಲ್ಲದೇ ಸರ್ಕಾರಿ ಕಾರುಗಳನ್ನು ಮಾರ್ಗಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಇದರಿಂದ ಅಂಬಾರಿಯನ್ನು ಸ್ಥಳಾಂತರ ಮಾಡುವುದಕ್ಕೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಅಂಬಾರಿ ಹಸ್ತಾಂತರದ ವಿಷಯದಲ್ಲಿ ಉಂಟಾಗಿರುವ ಗೊಂದಲವನ್ನು ತಪ್ಪಿಸುವ ಉದ್ದೇಶದಿಂದ ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ ಎಂದೂ ಅನಗತ್ಯ ಆತಂಕ ಬೇಡ ಎಂದು ಸಹ ಅವರು ಹೇಳಿದ್ದಾರೆ. ಅಲ್ಲದೇ ಈ ರೀತಿ ಪತ್ರ ಬರೆದು ವಿವರಣೆ ನೀಡಿರುವುದರ ಹಿಂದೆ ಬೇರೆ ಉದ್ದೇಶವಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಬಂಗಾರದ ಅಂಬಾರಿ ವಿಚಾರದಲ್ಲಿ ಸಮಸ್ಯೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications