ಅಡಿಕೆ ಧಾರಣೆ ಕುಸಿತಕ್ಕೆ ಸಾರ್ಕ್‌ ಒಕ್ಕೂಟ ಕಾರಣ ಅಂದ್ರೆ ನಂಬ್ತೀರಾ?

Written By:
Subscribe to Oneindia Kannada

ಬೆಂಗಳೂರು, ಜೂನ್ 27: ಕೇಂದ್ರ ಸರ್ಕಾರ ಅಡಿಕೆ ಮೇಲಿನ ಆಮದು ಸುಂಕ ಹೆಚ್ಚಳ ಮಾಡಬೇಕು, ಇಲ್ಲವೇ ಅಡಿಕೆ ಆಮದನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ರೈತ ಸಂಘಟನೆಗಳು, ಅಡಿಕೆ ಬೆಳೆಯುವ ಜಿಲ್ಲೆಗಳು ಹೋರಾಟಕ್ಕೆ ಮುಂದಾಗಿವೆ.

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಅಡಿಕೆ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಿಯೂ ದರ ಕುಸಿತವಾಗಿದೆ. ಇದಕ್ಕೆ ಕಾರಣ ಮಾತ್ರ ವಿಚಿತ್ರ. ಕೆಜಿಗೆ 52 ರು. ಇದ್ದ ಆಮದು ಸುಂಕವನ್ನು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆ ಕಳೆದ ವರ್ಷದ ಜೂನ್ ನಲ್ಲಿ 110 ರು . ಹೆಚ್ಚಳ ಮಾಡಿತ್ತು. ಅಂದರೆ ವಿದೇಶಗಳಿಂದ ಅಡಕೆ ಆಮದು ಮಾಡಿಕೊಳ್ಳಬೇಕಾದರೆ ವ್ಯಾಪಾರಿಗಳು ಕೆಜಿಗೆ 162 ರು. ನೀಡಬೇಕು.[ಅಡಿಕೆ ಧಾರಣೆ ಕುಸಿತ: 13 ಜಿಲ್ಲೆಗಳ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ]

ಇತರೆ ತೆರಿಗೆ ಎಲ್ಲ ಸೇರಿದರೆ ಈ ಮೊತ್ತ 175-180 ರ ಸಮೀಪಕ್ಕೂ ಸುಳಿದಾಡುತ್ತದೆ. ಆದರೂ ಸಹ ಅಡಿಕೆ ಧಾರಣೆ ಕುಸಿತ ಆರಂಭವಾಗಿದೆ. ಕ್ಚಿಂಟಾಲ್ ಗೆ 30-40ದ ಸಾವಿರ ರು. ಆಸುಪಾಸಿನಲ್ಲಿದ್ದ ಧಾರಣೆ ಕುಸಿದು 20 ಸಾವಿರ ರು. ಕ್ಕಿಂತ ಕೆಳಗೆ ಬಂದು ತಲುಪಿದೆ.

ಬರಗಾಲ

ಬರಗಾಲ

ಮಹಾರಾಷ್ಟ್ರ ಮತ್ತು ಉಳಿದ ಅತಿ ಹೆಚ್ಚು ಅಡಿಕೆ ಬಳಕೆ ಮಾಡುವ ರಾಜ್ಯಗಳಲ್ಲಿ ಈ ಬಾರಿ ಕಂಡಿದ್ದು ಬರ. ಇದು ನಮ್ಮ ಉತ್ತರ ಕರ್ನಾಟಕಕ್ಕೂ ಹೊರತಾಗಿಲ್ಲ. ಜನರ ಕೈಯಲ್ಲಿ ಹಣ ಇಲ್ಲ. ಆಹಾರವನ್ನು ಹೊಂದಿಸಿಕೊಳ್ಳುವುದೇ ದುಸ್ತರ ಇನ್ನು ಅಡಿಕೆ ಖರೀದಿ ಮಾಡಿ ತಿನ್ನುವುದೇ?

ಮಾರಕವಾದ ಸಾರ್ಕ್

ಮಾರಕವಾದ ಸಾರ್ಕ್

ಅಡಿಕೆ ಬೆಳೆಗಾರರ ವಿಷಯಕ್ಕೆ ಬಂದರೆ ಸಾರ್ಕ್ ಒಪ್ಪಂದದ ದುರ್ಬಳಕೆಯಾಗುತ್ತಿದೆ. ‘ಸಾರ್ಕ್' ರಾಷ್ಟ್ರಗಳು ಸುಂಕರಹಿತವಾಗಿ ಭಾರತಕ್ಕೆ ಅಡಿಕೆ ತರುತ್ತಿವೆ. ಇದೇ ದೇಶದ ಅಡಿಕೆ ದರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.

ತೆರಿಗೆ ಟೋಪಿ

ತೆರಿಗೆ ಟೋಪಿ

ಪ್ರಮುಖವಾಗಿ ಕೋಲ್ಕತಾ ಬಂದರಿನ ಮೂಲಕ ಅಪಾರ ಪ್ರಮಾಣದ ವಿದೇಶಿ ಅಡಿಕೆ ದೇಶದ ಒಳಕ್ಕೆ ಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳನ್ನು ದುರ್ಬಳಕೆ ಮಾಡಿಕೊಂಡು ಬಂದರುಗಳ ಮೂಲಕ ಒಳತರಲಾಗುತ್ತಿದೆ ಎಂಬ ಮಾತು ಇದೆ

 ಶ್ರೀಲಂಕಾ ಮತ್ತು ಬಾಂಗ್ಲಾ

ಶ್ರೀಲಂಕಾ ಮತ್ತು ಬಾಂಗ್ಲಾ

‘ಮಲೇಷಿಯಾ, ಫಿಲಿಪೈನ್ಸ್‌, ಇಂಡೋನೇಷಿಯಾ ರಾಷ್ಟ್ರಗಳಿಂದಲೂ ಭಾರತಕ್ಕೆ ಅಡಿಕೆ ಬರುತ್ತಿದೆ. ಆದರೆ ಇವರು ಬಳಸಿಕೊಳ್ಳುತ್ತಿರುವುದು ಶ್ರೀಲಂಕಾ ಮತ್ತು ಬಾಂಗ್ಲಾ ದಾರಿಯನ್ನು. ಅಂದರೆ ಮಲೇಷಿಯಾ, ಫಿಲಿಫೈನ್ಸ್‌, ಇಂಡೋನೇಷಿಯಾ ಅಡಿಕೆ ಶ್ರೀಲಂಕಾ ಮತ್ತು ಬಾಂಗ್ಲಾ ತಲುಪಿ ಅಲ್ಲಿಂದ ಭಾರತಕ್ಕೆ ಬರುತ್ತದೆ. ಶ್ರೀಲಂಕಾ ಮತ್ತು ಬಾಂಗ್ಲಾ ಸಾರ್ಕ್ ಒಕ್ಕೂಟದಲ್ಲಿ ಇರುವುದರಿಂದ ಅವಕ್ಕೆ ತೆರಿಗೆ ಕಡಿತ ಸಿಗುತ್ತದೆ

ಇದು ಸೇರಿಕೊಳ್ಳುತ್ತೆ

ಇದು ಸೇರಿಕೊಳ್ಳುತ್ತೆ

ಸರ್ಕಾರಗಳ ನಿರ್ಲಜ್ಜ ಸ್ಥಿತಿ, ಬೆಳೆಗಾರರು ದಾಸ್ತಾನು ಮಾಡಿದ್ದು, ಗುಟ್ಕಾ ನಿಷೇಧದ ಗುಮ್ಮ ಅಡಿಕೆ ಧಾರಣೆ ಕುಸಿತಕ್ಕೆ ಕಾರಣ ಎಂಬ ಅಂಶಗಳಿಗಿಂತ ಸಾರ್ಕ್ ಒಕ್ಕೂಟದ ದುರ್ಬಳಕೆಯೇ ಪ್ರಮುಖವಾಗಿ ನಿಲ್ಲುತ್ತದೆ

ತಡೆ ಬೀಳಲ್ಲ

ತಡೆ ಬೀಳಲ್ಲ

ಒಂದು ವೇಳೆ ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಳ ಮಾಡಿದರೆ ಭಾರತಕ್ಕೆ ಬರುವ ಅಡಿಕೆ ನಿಲ್ಲಲ್ಲ. ಬದಲಾಗಿ ಆಮದನ್ನು ಸಂಪೂರ್ಣ ನಿಷೇಧ ಮಾಡಿದರೆ ಮಾತ್ರ ಬೆಳಗಾರರ ಹಿತ ಕಾಪಾಡಲು ಸಾಧ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Whre is Arecanut Price? Where id SAARC nations Group? But, These two have a relationship. Vendors using South Asian Association for Regional Cooperation (SAARC) for a Way of importing Areca nut . Here is the full details.
Please Wait while comments are loading...