BC Patil: ಬಿ.ಸಿ. ಪಾಟೀಲ್ ಅಳಿಯನ ಆತ್ಮ**ಗೆ ಕಾರಣ ಏನು?
ಬಿ.ಸಿ. ಪಾಟೀಲ್ ಅವರ ಕುಟುಂಬಕ್ಕೆ ಇಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹೀಗೆಲ್ಲ ದಿಢೀರ್, ಹಿರಿಯ ಅಳಿಯನನ್ನೇ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕುಟುಂಬ ಕಳೆದುಕೊಂಡಿದೆ. ಅದ್ರಲ್ಲೂ ಬಿ.ಸಿ. ಪಾಟೀಲ್ ಅವರ ಹಿರಿಯ ಮಗಳನ್ನೇ ಮದುವೆಯಾಗಿ, ಬಿ.ಸಿ. ಪಾಟೀಲ್ ಮನೆಯಲ್ಲೇ ಇದ್ದ ಪ್ರತಾಪ್ ಕುಮಾರ್ ಕೆ.ಜಿ. ಸಾವಿಗೆ ಕಾರಣ ಏನು? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಬಿ.ಸಿ. ಪಾಟೀಲ್ ಅವರ ಹಿರಿಯ ಮಗಳಾದ ಸೌಮ್ಯಾ ಅವರನ್ನು ಮೃತ ಪ್ರತಾಪ್ ಕುಮಾರ್ ಕೆ.ಜಿ. ಮದುವೆ ಆಗಿದ್ದರು. ಹೀಗಿದ್ದಾಗ ಬಿ.ಸಿ. ಪಾಟೀಲ್ ಅವರ ಗಂಡು ಮಗನ ರೀತಿಯೇ ಮಾಜಿ ಸಚಿವರ ಪ್ರತಿಯೊಂದು ರಾಜಕೀಯ ವ್ಯವಹಾರಗಳನ್ನು ಇದೇ ಪ್ರತಾಪ್ ಕುಮಾರ್ ಕೆ.ಜಿ ನೋಡಿಕೊಳ್ತಾ ಇದ್ದರಂತೆ. ಹೀಗಿದ್ದಾಗಲೇ ದಿಢೀರ್ ಬಿಸಿ ಪಾಟೀಲ್ ಅವರಿಗೆ ಇಂದು ಮಧ್ಯಾಹ್ನ 1.45ರ ಸುಮಾರಿಗೆ ಒಂದು ಫೋನ್ ಕಾಲ್ ಬಂದಿತ್ತು, ಆ ಕಾಲ್ ಬಳಿಕ ಮಾಜಿ ಸಚಿವರಾದ ಬಿಸಿ ಪಾಟೀಲ್ ಅವರು ನಡುಗಿ ಹೋಗಿದ್ದರಂತೆ! ಹಾಗಾದ್ರೆ ಬಿಸಿ ಪಾಟೀಲ್ ಅಳಿಯನ ಸಾವಿಗೆ ಅಸಲಿ ಕಾರಣ ಏನು? ಮುಂದೆ ಓದಿ.

ದಿಢೀರ್ ವಿಷ ಸೇವಿಸಿದ್ದು ಯಾಕೆ?
ಬಿಸಿ ಪಾಟೀಲ್ ಅವರಿಗೆ ಸಹೋದರ ಕಾಲ್ ಮಾಡಿ, ಇಂದು ಮಧ್ಯಾಹ್ನ 1.45ರ ಸುಮಾರಿಗೆ ಆಘಾತಕಾರಿ ವಿಚಾರವನ್ನ ತಿಳಿಸಿದ್ದಾರೆ. ಪ್ರತಾಪ್ ಕಾಣೆ ಆಗಿದ್ದಾರೆ ಎಂಬುದು ಆಗಲೇ ಮಾಜಿ ಸಚಿವ ಬಿಸಿ ಪಾಟೀಲ್ ಅವರಿಗೆ ತಿಳಿದಿದ್ದು. ಕೂಡಲೇ ಪೊಲೀಸರಿಗೆ ಕೂಡ ಮಾಹಿತಿಯನ್ನು ನೀಡಿದ್ದಾರೆ. ಹೀಗಿದ್ದಾಗ, ಹೊನ್ನಾಳಿ ಬಳಿ ಮಲೆಬೆನ್ನೂರು ರಸ್ತೆಯಲ್ಲಿ ಇರುವುದಾಗಿ ಮೃತ ಪ್ರತಾಪ್ ಒಂದು ಬಾರಿ ಫೋನ್ ರಿಸೀವ್ ಮಾಡಿ ಹೇಳಿದ್ದಾರಂತೆ. ಆದರೆ ಜೋಳಕ್ಕೆ ಹಾಕುವ ಔಷಧ ತೆಗೆದುಕೊಂಡು ಹೋಗಿ ಅದನ್ನೇ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪ ಇದೀಗ ಸಂಚಲನ ಸೃಷ್ಟಿ ಮಾಡಿದೆ.
ವಿಜಯೇಂದ್ರ & ರೇಣುಕಾಚಾರ್ಯ ಭೇಟಿ
ಮತ್ತೊಂದು ಕಡೆ ಅಳಿಯನ ಸಾವಿನ ಸುದ್ದಿ ತಿಳಿದು, ಶಿವಮೊಗ್ಗಕ್ಕೆ ತೆರಳಿದ ಬಿ.ಸಿ. ಪಾಟೀಲ್ ಅವರಿಗೆ ಈಗ ಕುಟುಂಬದ ಸದಸ್ಯರು ಜೊತೆಯಾಗಿದ್ದಾರೆ. ಹಿರೇಕೆರೂರಿನ ಬಿ.ಸಿ. ಪಾಟೀಲ್ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಸ್ಥಳೀಯ ನಾಯಕರು ಕೂಡ ಸಾಂತ್ವನ ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ, ರೇಣುಕಾಚಾರ್ಯ & ಸ್ಥಳೀಯ ಬಿಜೆಪಿ ನಾಯಕರು ಹಾಗೂ ಮುಖಂಡರು ಇದೀಗ ಬಿಸಿ ಪಾಟೀಲ್ ಅವರಿಗೆ ಸಾಂತ್ವನ ಹೇಳಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು












Click it and Unblock the Notifications