ಸ್ತ್ರೀ ರಕ್ಷಣೆ ಕಾನೂನು ದುರ್ಬಳಕೆ, ವೆಡ್ಡಿಂಗ್ ಗಿಫ್ಟ್ ಚಿತ್ರದ ಟ್ರೈಲರ್
ಬೆಂಗಳೂರು, ಜೂನ್ 17: ಪ್ರಸ್ತುತ ಸಮಾಜದ ವಾಸ್ತವಿಕ ಸ್ಥಿತಿಯ ಅನೇಕ ಅಂಶಗಳೇ ಈಗ ಬರುವ ಸಿನಿಮಾಗಳ ಮುಖ್ಯ ಕಥಾವಸ್ತುವಾಗಿರುತ್ತೆ. ಅಂತಹದ್ದೇ ಒಂದು ಗಂಭೀರ ಅಂಶವನ್ನಿಟ್ಕೊಂಡು ಮೂಡಿಬರ್ತಿರುವ ಬಹುನಿರೀಕ್ಷಿತ ಸಿನಿಮಾ ವೆಡ್ಡಿಂಗ್ ಗಿಫ್ಟ್.
ಟೈಟಲ್‌ನಿಂದಲೇ ಒಂದು ರೀತಿ ಕುತೂಹಲ ಹುಟ್ಟು ಹಾಕಿದ್ದ ಚಿತ್ರತಂಡ ನಂತ್ರ ಟೀಸರ್ ರಿವೀಲ್ ಮಾಡಿ ಸಿನಿಮಾ ಕಥೆ ಬಗ್ಗೆ ಕೊಂಚ ಬೆಳಕು ಚೆಲ್ಲಿತ್ತು. ಈಗಾಗಲೇ ಚಿತ್ರದ ಕೆಲ ಹಾಡುಗಳು ಕೂಡ ಹೊರಬಂದಿದ್ದು ಜನಮನ ಗೆದ್ದಿವೆ. ಸದ್ಯ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಟ್ರೈಲರ್ ಕೂಡ ಹೊರಬಂದಿದೆ.
ಮಹಿಳೆಯರ ಮೇಲಿನ ಹಿಂಸೆ, ಶೋಷಣೆಯ ಬಗ್ಗೆ ಬಹಳಷ್ಟು ಸಿನಿಮಾಗಳು ಬಂದಿವೆ. ಕೆಲ ವರ್ಷಗಳ ಹಿಂದೆ ಮೀ ಟೂ ವಿವಾದ ಹೆಚ್ಚು ಸುದ್ದಿಯಾಗಿತ್ತು. ಅದೇ ರೀತಿ ಇದೀಗ ಮೆನ್ ಟೂ ಪ್ರಕರಣಗಳೂ ಸಹ ಬೆಳಕಿಗೆ ಬರ್ತಿವೆ.
ಸಮಾಜದಲ್ಲಿ ಹಲವಾರು ಪುರುಷರೂ ಕೂಡ ಮಹಿಳೆಯರಿಂದ ಶೋಷಣೆಗೆ ಒಳಗಾಗ್ತಿದ್ದಾರೆ. ಅಲ್ಲದೆ ಮಹಿಳೆಯರ ರಕ್ಷಣೆಗಾಗಿರುವ ಕಾನೂನನ್ನೇ ಸ್ತ್ರೀಯರು ಅಸ್ತ್ರವನ್ನಾಗಿ ಬಳಸಿಕೊಂಡು ಅದನ್ನು ದುರ್ಬಳಕೆ ಮಾಡಿ ಪುರುಷರನ್ನು ಶೋಷಿಸುವ ಸಾಕಷ್ಟು ಪ್ರಕರಣಗಳಿವೆ.

ಈ ವಿಚಾರವೇ ವೆಡ್ಡಿಂಗ್ ಗಿಫ್ಟ್ ಚಿತ್ರದ ಮುಖ್ಯ ಕಥಾವಸ್ತುವಾಗಿದೆ. ವಿನಾ ಕಾರಣ ಜಿದ್ದಿಗೆ ಬಿದ್ದ ಹೆಣ್ಣೊಬ್ಬಳು ತನ್ನ ಗಂಡನನ್ನು ಕಾನೂನಿನ ಮೂಲಕ ಹೇಗೆಲ್ಲಾ ಹಿಂಸಿಸುತ್ತಾಳೆ ಅನ್ನುವುದರ ಸೂಕ್ಷ್ಮ ನೋಟಗಳು ಈ ಟ್ರೈಲರ್‌ನಲ್ಲಿವೆ.

ನಾಯಕನಾಗಿ ನಿಶಾನ್ ಹಾಗೂ ನಾಯಕಿಯಾಗಿ ಸೋನು ಗೌಡ ಕಾಣಿಸಿಕೊಂಡಿದ್ದಾರೆ. ನಟಿ ಸೋನು ಇಲ್ಲಿ ಬಹಳ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ಪ್ರೇಮ ಲಾಯರ್ ಆಗಿ ಮಿಂಚಿದ್ದು, ಅವರ ಪಾತ್ರ ಎಲ್ಲರ ಗಮನ ಸೆಳೆಯುತ್ತೆ. ಜೊತೆಗೆ ಅಚ್ಯುತ್ ಕುಮಾರ್ ಕೂಡ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಪವಿತ್ರ ಲೋಕೇಶ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ವಿಕ್ರಂಪ್ರಭು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ತಾವೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಬಾಲಚಂದ್ರ ಪ್ರಭು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಉದಯ್ ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಹೊರಬಂದಿರುವ ವೆಡ್ಡಿಂಗ್ ಗಿಫ್ಟ್ ಚಿತ್ರದ ಟ್ರೈಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಜುಲೈ 8ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications