ಮಳೆ ಮುನ್ಸೂಚನೆ: ಈ ವಾರ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಈಗಾಗಲೇ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈ ವಾರದಲ್ಲಿ ನಾಲ್ಕು ದಿನ ಮಳೆ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾತ್ರ ಎರಡು ದಿನ ಮಳೆಯಾಗಲಿದೆ ಎಂದು ವರದಿಯಾಗಿತ್ತು. ಈಗ ನಾಲ್ಕು ದಿನ ಎಂದು ಐಎಂಡಿ ವರದಿ ಹೇಳಿದೆ.

Recommended Video

      ಭಾರಿ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ | Rain Forcast

      ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಎರಡು ದಿನಗಳ ನಂತರ ತಾಪಮಾನ ಏರಿಕೆಯಾಗಲಿದೆ. ರಾಜ್ಯದೆಲ್ಲೆಡೆ ಮೇ ಅಂತ್ಯದವರೆಗೂ ಒಣ ಹವೆ, ಬಿಸಿಲಿನ ಝಳ ಮುಂದುವರೆಯುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

      ಮೇಲ್ಮೈ ಸುಳಿಗಾಳಿ ತೀವ್ರತೆಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಾರ್ಚ್ 18ರಿಂದಲೇ ಹಲವೆಡೆ ಮಳೆ ಮುನ್ಸೂಚನೆ ಸಿಗಲಿದೆ. ಮಾರ್ಚ್ 20 ರಿಂದ 22ರ ವರೆಗೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆಯಾಗಲಿದೆ.

      ಉತ್ತರ ಒಳನಾಡಿನ ಮಳೆಯಾಗಲಿದೆ

      ಉತ್ತರ ಒಳನಾಡಿನ ಮಳೆಯಾಗಲಿದೆ

      ಉತ್ತರ ಒಳನಾಡಿನ ಬೀದರ್,ಧಾರವಾಡ, ಗದಗ, ಕೊಪ್ಪಳ, ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಮುಂತಾದೆಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಂಭವವಿದೆ.

      ಮಳೆ ನಂತರ ತಾಪಮಾನ ಎಂದಿನಂತೆ ಏರಲಿದೆ

      ಮಳೆ ನಂತರ ತಾಪಮಾನ ಎಂದಿನಂತೆ ಏರಲಿದೆ

      ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆ ನಂತರ ತಾಪಮಾನ ಎಂದಿನಂತೆ ಏರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

      ಬೆಂಗಳೂರಿನ ಹವಾಮಾನ ಈ ವಾರ:

      ಬೆಂಗಳೂರಿನ ಹವಾಮಾನ ಈ ವಾರ:

      ಬೆಂಗಳೂರಿನಲ್ಲಿ ಇಂದು ಮೋಡ ಕವಿದ ಆಕಾಶವಿದ್ದು, ಸಂಜೆ ವೇಳೆ ಮಳೆ ಮುನ್ಸೂಚನೆ ಸಿಗಲಿದೆ. ಆದರೆ, ಮಾರ್ಚ್ 20 ರಿಂದ 22ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿಒಂದೆರಡು ಬಾರಿ ಮಳೆಯಾಗಲಿದೆ. ಮಾರ್ಚ್ 21ರಂದು ಸ್ವಲ್ಪ ಜೋರಾಗಿ ಮಳೆ ಸುರಿಯಲಿದೆ. ಗರಿಷ್ಠ 34ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಸರಾಸರಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

      ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಸುರಿಯಲಿದೆ

      ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಸುರಿಯಲಿದೆ

      ಕರ್ನಾಟಕದ ವಿವಿಧ ಪಟ್ಟಣಗಳಲ್ಲಿ ತಾಪಮಾನ ವಿವರ ಇಲ್ಲಿದೆ:(ವಿನ್ಯಾಸ: ಭರತ್ ಎಚ್.ಸಿ)
      ಮಾರ್ಚ್ 18ರಂದು ಕಲಬುರಗಿಯಲ್ಲಿ 37.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+