All Party Meeting: ಕಾವೇರಿಗಾಗಿ ಸರ್ವಪಕ್ಷ ಸಭೆ ಕರೆದ ರಾಜ್ಯ ಸರ್ಕಾರ; ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 23: ನಾಡಿನ ಜನ ಹಿತರಕ್ಷಣೆಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಆದರೆ, ಇಲ್ಲಿ ನಡೆಯುತ್ತಿರುವ ಘಟನೆಗಳು ಹುಡುಗಾಟಿಕೆಯ ಒಂದು ವಾತಾವರಣ ಕಾಣುತ್ತಿದೆ. ಒತ್ತಾಯಕ್ಕಾಗಿ ಸಭೆ ಕರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ನಾನು ಒತ್ತಡವನ್ನ ಹಾಕಿದ ಮೇಲೆ ಸಭೆ ಕರೆದಿದ್ದಾರೆ
ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಿ ಏನ್ ಮಾಡುತ್ತಾರೆ. ರಾಜ್ಯದ ಹಿತರಕ್ಷಣೆಗೆ ತಾಂತ್ರಿಕ ಅಧಿಕಾರಿಗಳು ಇದ್ದಾರೆ. ನೀರಾವರಿ ಬಗ್ಗೆ ಜ್ಞಾನ ಹೊಂದಿರಯವವರು, ಕಾನೂನು ತಜ್ಞರು ಇದ್ದಾರೆ.

ಅಣ್ಣ ತಮ್ಮಂದಿರ ಪ್ರಶ್ನೆ ಅಲ್ಲ ಇದು ರೈತರ ಹಿತ ಮುಖ್ಯ. ನಾನು ನೀರು ಬಿಡಿ ಅಂತಾ ಹೇಳಿದ್ನಾ. ನಮ್ಮ ಸಂಕಷ್ಟ ಪರಿಸ್ಥಿತಿ ಮನವರಿಕೆ ಮಾಡಿ ಅಂತಾ ಹೇಳಿದ್ದೆ. ಕೊರ್ಟ್ ಮುಂದೆ ಇಗ ಸಲಹೆ ಪಡೆದು ಹೋಗವರೆ. ಕೋರ್ಟ್ ಮುಂದೆ ಹೋದ್ರಾ ಅಂತಾ ಪ್ರಶ್ನೆ ಮಾಡಿದ್ದೆ ಈಗ ಹೋಗಿದ್ದಾರೆ. ರೈತರಿಗೆ ನೀರು ಬೇಕು ಅಂದ್ರೆ ಸುಪ್ರೀಂ ಕೋರ್ಟ್ ಗೆ ಹೋಗಿ ಎಂದು ಮಂತ್ರಿಗಳು ಹೇಳ್ತಾರೆ ಇವರು ಯಾಕೆ ಇರುವುದು ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡ್ರು ಜೊತೆಯಲ್ಲಿ ಪ್ರಧಾನಿ ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರದ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಮಲತಾಯಿ ಧೋರಣೆ, ತಮಿಳುನಾಡುನಲ್ಲಿ ರೈತರ ರಕ್ಷಣೆಗೆ ಅವರಲ್ಲಿ ಇರುವ ಗಾಂಭೀರ್ಯತೆ ನಮ್ಮಲ್ಲಿ ಇದ್ಯಾ ಎಂದು ಪ್ರಶ್ನಿಸಿದ ಅವರು, ಗಾಂಭೀರ್ಯತೆ ಬೇಕು, ದುಷ್ಪರಿಣಾಮ ಗಳನ್ನ ಯಾವ ಹಂತದಲ್ಲಿ ಸರಿಪಡಿಸಬೇಕಂತ ವಿವೇಚನೆ ಬೇಕು ಎಂದು ಹೇಳಿದರು.
ಬರಪೀಡಿತ ಪ್ರದೇಶಗಳ ಘೋಷಣೆ ವಿಚಾರವಾಗಿ ಮಾತನಾಡಿ, ಬರಗಾಲ ಇರುವ ಮಾಹಿತಿ ಪಡೆದಿದ್ದೇವೆ ಎಂದು ಕಂದಾಯ ಸಚಿವರು ಅಂತಾ ಹೇಳಿದ್ದಾರೆ, ಮುಂದಿನ ವಾರದಲ್ಲಿ ಘೊಷಣೆ ಮಾಡ್ತಿವಿ ಅಂತಾ ಹೇಳಿದ್ದಾರೆ.ಗ್ಯಾರಂಟಿ ಸ್ಕೀಮ್ ಇಟ್ಟುಕೊಂಡು ಪ್ರಚಾರ ಮಾಡಿಕೊಂಡು ಜೀವದ ಗ್ಯಾರಂಟಿ ರೈತರ ಬದುಕಿನ ಗ್ಯಾರಂಟಿ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ಹೇಳಿದರು.
ಚಂದ್ರಯಾನ 3 ವಿಚಾರವಾಗಿ ಅಭಿನಂದನೆ ಸಲ್ಲಿಸಿದ ಅವರು, ಇಸ್ರೋ ಬಾಹ್ಯಕಾಶ ಸಂಸ್ಥೆಯ ಹಲವಾರು ವಿಜ್ಞಾನಿಗಳು ಹಲವಾರು ವರ್ಷದ ಅವರ ಪರಿಶ್ರಮದ ಯಶಸ್ಸು ಬರುವಂತ ಸಮಯ.
ವಿಶ್ವದ ಜನತೆ ಅತ್ಯಂತ ಆಸಕ್ತಿಯಿಂದ ಸಂಜೆಯ ನಿಲುಗಡೆ ಆಗುವುದಕ್ಕೆ ಕಾಯುತ್ತಿದ್ದಾರೆ. ನಮ್ಮ ವಿಜ್ಞಾನಿಗಳ ಶ್ರಮಕ್ಕೆ ಯಶಸ್ವು ಸಿಗಲಿ. ಭಾರತ ಮತ್ತೊಂದು ಮಟ್ಟದ ಯಶಸ್ಸು ಪಡೆಯೋದಕ್ಕೆ ಇವತ್ತು ಮಹತ್ವದ ದಿನ ಎಂದು ಶುಭಕೋರಿದರು.












Click it and Unblock the Notifications