BJP President: ಇವರು ಬಿಜೆಪಿ ರಾಜ್ಯಾಧ್ಯಕ್ಷ ಆದ್ರೆ ಯತ್ನಾಳ್‌ಗೆ ಸಮಸ್ಯೆ ಇಲ್ವಂತೆ! ಯಾರವರು?
ಕಲಬುರಗಿ, ಫೆಬ್ರವರಿ 04: ನಮ್ಮ ಬಣದಿಂದ ಯಾರು ಸ್ಪರ್ದೆ ಮಾಡ್ತಿವಿ ಅನ್ನೋದು ಚರ್ಚೆ ಮಾಡಿ ನಿರ್ಣಯ ತಗೋತಿವಿ. ಶ್ರೀ ರಾಮಲು ರಾಜ್ಯಾಧ್ಯಕ್ಷ ಆದರೆ ನಮ್ಮದೇನೂ ತಕರಾರಿಲ್ಲ. ಅವರೂ ನಮ್ಮ ಮನುಷ್ಯರೇ.. ಅವರಾದ್ರೆ ನಮ್ಮ ಬೆಂಬಲ ಇರುತ್ತದೆ ಎಂದು ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಈ ಕುರಿತು ಇಂದು(ಮಂಗಳವಾರ) ಕಲಬುರಗಿಯ ಸೇಡಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೂ ಸಹ ಇಂದು ದೆಹಲಿಗೆ ಹೋಗುತ್ತಿದ್ದೇನೆ. ಒಬ್ಬರಲ್ಲಾ ನಮ್ಮ ಪಕ್ಣದ ಹಲವಾರು ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡುತ್ತೇವೆ ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ನಾವು ವರಿಷ್ಠರೊಂದಿಗೆ ಚರ್ಚೆ ನಡೆಸುತ್ತೆವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ದೆಹಲಿ ಚುನಾವಣೆಯ ಬಹಿರಂಗ ಪ್ರಚಾರ ಮುಗಿದು ಹೋಗಿದೆ. ರಾಜಕೀಯ ಮುಖಂಡರು ಮಕ್ಕಳ ಜೊತೆ ಜಾಲಿ ಮೂಡನಲ್ಲಿದ್ದಾರೆ, ಶರಬತ್ ಕುಡಕೊಂತ ಕೂತಾರೆ, ಹೆಂಡತಿಗೆ ಮುತ್ತು ಕೊಡಕೊಂತ ಕೂತಾರೆ ಅಂತೆಲ್ಲಾ ನೀವೆ ಸುದ್ದಿ ಮಾಡ್ತಿದಿರಲ್ವಾ..? ನಮ್ಮ ನಾಯಕರು ನಮ್ಮ ಭೇಟಿಗೆ ಸಮಯ ಕೊಟ್ಟಿದ್ದಾರೆ. ನಾವು ಭೇಟಿ ಮಾಡುತ್ತೇವೆ ಎನ್ನುವ ಮೂಲಕ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಚುನಾವಣೆ ನಡೆದು ಅವರೇ ರಾಜ್ಯಾಧ್ಯಕ್ಷ ಮತ್ತೊಮ್ಮೆ ಆಗಲಿ.. ಬೇಡ ಅಂದವರಾರು.? ಅಲ್ಲಿವರೆಗೂ ನನಗೆ ಓಟ್ ಹಾಕಿ ನನಗೆ ಓಟ್ ಹಾಕಿ ಅಂತ ಕೈ ಮುಗಿದು ಅವರು ಓಡಾಡಬೇಕಲ್ವಾ.? ಕೆಲವರಿಗೆ ಕೈ ಮುಗಿಯೋದಾದ್ರೂ ನಾವು ಕಲಿಸದಂಗೆ ಆಗುತ್ತೆ ಎಂದು ವ್ಯಂಗ್ಯವಾಡಿದ ಅವರು, ನಮ್ಮ ಬಣದಿಂದ ಯಾರು ಸ್ಪರ್ದೆ ಮಾಡ್ತಿವಿ ಅನ್ನೋದು ಚರ್ಚೆ ಮಾಡಿ ನಿರ್ಣಯ ತಗೋತಿವಿ. ಹೈಕಮಾಂಡನ ಜಾತಿ ಲೆಕ್ಕಾಚಾರ ನೋಡಿಕೊಂಡು ಅದೇ ಜಾತಿಯವರನ್ನು ನಾವು ಕಣಕ್ಕೆ ಇಳಿಸುತ್ತೇವೆ.
ಶ್ರೀ ರಾಮಲು ರಾಜ್ಯಾಧ್ಯಕ್ಷ ಆದರೆ ನಮ್ಮದೇನೂ ತಕರಾರಿಲ್ಲ. ಅವರೂ ನಮ್ಮ ಮನುಷ್ಯರೇ.. ಅವರಾದ್ರೆ ನಮ್ಮ ಬೆಂಬಲ ಇದ್ದೆ ಇರುತ್ತದೆ. ರಾಜ್ಯದ ಎಲ್ಲಾ ಸಂಸದರು ನಮ್ಮ ಜೊತೆಗಿದ್ದಾರೆ. ವಿಜಯೇಂದ್ರ ಸಹೋದರ ಒಬ್ಬರನ್ನು ಬಿಟ್ಟು. ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯಾಧ್ಯಕ್ಷ ಆಗಬೇಕು ಅನ್ನೋರೂ ಇದ್ದಾರೆ. ಏನಾಗುತ್ತೋ ನೋಡೋಣ. ನಾನೇನು ಇವತ್ತು ನಿನ್ನೆಯಿಂದ ರಾಜಕೀಯ ಮಾಡುತ್ತಿಲ್ಲ. ನಾನು ಯಡಿಯೂರಪ್ಪ ಸಮಕಾಲಿನವನು. ಒಂದು ವೇಳೆ ವಿಜಯೇಂದ್ರರನ್ನು ಮತ್ತೆ ರಾಜ್ಯಾಧ್ಯಕ್ಷ ಮಾಡಿದ್ರೆ ನಮ್ಮ ನಿರ್ಣಯ ತಿಳಿಸುತ್ತೇವೆ. ನಮ್ಮ ಹೋರಾಟವಂತೂ ಮುಂದುವರೆಯುತ್ತೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಅಸಮಾಧಾನವನ್ನು ವ್ಯಕ್ತಪಸಿದರು.












Click it and Unblock the Notifications