ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಮುಂಗಾರು, ಕೆಆರ್‌ಎಸ್‌ನಲ್ಲಿ ಎಷ್ಟು ನೀರಿದೆ?

|
Google Oneindia Kannada News

ಮಂಡ್ಯ, ಆಗಸ್ಟ್ 8 : ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಆರ್‌ಎಸ್ ಜಲಾಶಯ ಈ ಬಾರಿ ತುಂಬುವುದೇ?. ಕೆಆರ್‌ಎಸ್‌ನಲ್ಲಿ 105.21 ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದ್ದು, ರೈತರ ಮತ್ತು ಜನರ ಆತಂಕಕ್ಕೆ ಕಾರಣವಾಗಿದೆ.

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು ಜಲಾಶಯಕ್ಕೆ ನೀರಿನ ಒಳ ಹರಿವು ಕಡಿಮೆಯಾಗಿದೆ. 2012ರಲ್ಲಿ ಇದೇ ಸಮುಯದಲ್ಲಿ ಜಲಾಶಯದಲ್ಲಿ 79.3 ಅಡಿ ನೀರು ಸಂಗ್ರಹವಾಗಿತ್ತು. ಅದು ಬಿಟ್ಟರೆ ಕಡಿಮೆ ನೀರು ಸಂಗ್ರಹಣೆಯಾಗಿರುವುದು ಈ ವರ್ಷ ಮಾತ್ರ. [76 ಅಡಿಗೆ ಕುಸಿದ ಕೆಆರ್ ಎಸ್ ನೀರಿನ ಮಟ್ಟ]

krs

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ಗರಿಷ್ಟ ಮಟ್ಟ 124 ಅಡಿ. 2013, 2014ರಲ್ಲಿ ಆಗಸ್ಟ್ 5ರ ವೇಳೆಗೆ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಆದರೆ, ಈ ಬಾರಿ ಆಗಸ್ಟ್‌ 5ರಂದು 105.21 ಅಡಿಗಳಷ್ಟು ನೀರು ಮಾತ್ರ ಸಂಗ್ರಹವಾಗಿದೆ. [ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ: ಗರಿಷ್ಠ, ಸಂಗ್ರಹಣೆ]

ಕಾವೇರಿ ನದಿ ನೀರು ಹಂಚಿಕೆಯ ತೀರ್ಪಿನ ಅನ್ವಯ ಸೆಪ್ಟೆಂಬರ್‌ನಲ್ಲಿ ಕರ್ನಾಟಕ 40 ಟಎಂಸಿ ನೀರನ್ನು ತಮಿಳುನಾಡಿಗೆ ನೀಡಬೇಕಾಗಿದೆ. ಈಗ ಸಂಗ್ರಹವಾಗಿರುವ ನೀರಿನಲ್ಲಿ 40 ಟಿಎಂಸಿ ನೀರು ಕೊಟ್ಟರೆ ಜಲಾಶಯದ ಮತ್ತಷ್ಟು ಬರಿದಾಗಲಿದೆ. ನೀರು ಬಿಡದಿದ್ದರೆ ತಮಿಳುನಾಡು ಖ್ಯಾತೆ ತೆಗೆಯಲಿದೆ.

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ವಾಡಿಕೆಯಂತೆ ಜುಲೈ ತಿಂಗಳಿನಲ್ಲಿ ಮಂಡ್ಯದಲ್ಲಿ 49.5 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 8.9 ಮಿ.ಮೀ.ಮಳೆಯಾಗಿದೆ. ಕಬ್ಬು ಬೆಳೆಗೆ ಬೆಂಬಲ ಬೆಲೆ ಸಿಕ್ಕಿಲ್ಲ ಎಂದು ಮಂಡ್ಯದಲ್ಲಿ ಇದುವರೆಗೆ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಆರ್‌ಎಸ್ ಭರ್ತಿಯಾಗದಿದ್ದರೆ ಮುಂದೆ ಮಂಡ್ಯದ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

English summary
The water level in the KRS reservoir in Srirangapatna taluk of Mandya district is only 105.21 feet on August 5, 2015. The water crisis in the Cauvery basin is likely to intensify in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X