ಸಿಎಂ ಬದಲಾವಣೆ: 'ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನಲ್ಲಿ ಯುದ್ಧ ಆರಂಭ'

ಶಿವಮೊಗ್ಗ, ಜನವರಿ 04: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್ಸಿನಲ್ಲಿ ಈಗಾಗಲೇ ಯುದ್ಧ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ ನಾನು ಭವಿಷ್ಯ ನುಡಿಯುತ್ತೇನೋ, ನನ್ನ ರಾಜಕೀಯ ಲೆಕ್ಕಾಚಾರವೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಂದಂತೂ ಸತ್ಯ. ರಾಜ್ಯ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದ ಸಿದ್ದರಾಮಯ್ಯ ಪ್ರಾಯೋಜಿತ ಔತಣಕೂಟವೇ ಸಾಕ್ಷಿ ಎಂದರು.

ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ; ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಲು ಅವರ ವಿರೋಧಿ ಬಣಗಳೂ ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಜೆಟ್ ಬಳಿಕ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಮತ್ತು ಆ ಸಂಬಂಧ ಕೇಂದ್ರದಲ್ಲಿ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಹೊರಬರುತ್ತಿದೆ. ಬಜೆಟ್ ನಂತರದಲ್ಲಿÀ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಾಗುವ ಕಾರಣಕ್ಕೆ ಒಂದು ರಾಜಕೀಯ ದಾಳವನ್ನು ಉರುಳಿಸಲು ನಿನ್ನೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.

War Begins In Congress Against Siddaramaiah Says BY Vijayendra

ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಸಂಬಂಧ ಗುಲ್ಬರ್ಗದಲ್ಲಿ ಪ್ರಿಯಾಂಕ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಲಾಗುತ್ತಿದೆ. ಪ್ರಿಯಾಂಕ್ ಆಪ್ತ ಮಿತ್ರ, ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಬೆದರಿಕೆಯಿಂದ ಆತ್ಮಹತ್ಯೆ ನಡೆದಿದೆ. ಮೃತರ ಕುಟುಂಬದ ಕೋರಿಕೆಯಂತೆ ಸಂಪೂರ್ಣ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ ಎಂದುÀ ಅವರು ತಿಳಿಸಿದರು. ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ ಅವರು, ಹಿಂದೂ- ಬಿಜೆಪಿ ಮುಖಂಡರ ಹತ್ಯೆಗೆ ಮಹಾರಾಷ್ಟ್ರದಿಂದ ಸುಪಾರಿ ಕಿಲ್ಲರ್‍ಗಳಿಗೆ ಕುಮ್ಮಕ್ಕು ಕೊಟ್ಟಿದ್ದನ್ನೂ ವಿವರಿಸಿದರು. ಶಾಸಕ ಮಿತ್ರ ಪ್ರಿಯಾಂಕ್ ಖರ್ಗೆಯವರು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ಕೊಡಿಸಲಿ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳನ್ನು ನಂಬಲು ಹೋಗದಿರಿ; ನಿಮಗೆ ನ್ಯಾಯ ಸಿಗುವ ಭರವಸೆ ನನಗಂತೂ ಇಲ್ಲ. ನಿಮ್ಮ ಪಕ್ಷದಲ್ಲೇ ನಿಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆ ಪರವಾಗಿ ಯಾರೂ ಮಾತನಾಡುತ್ತಿಲ್ಲ; ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆ ನೀಡಿದ ಮಾದರಿಯಲ್ಲಿ ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ಎದುರಿಸಿ ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದರು.

ರಾಜ್ಯದಲ್ಲಿ 736ಕ್ಕೂ ಹೆಚ್ಚು ಬಾಣಂತಿಯರ ಸಾವು, ಸಾವಿರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವು ಸಂಭವಿಸಿದೆ. ಈ ಸರಣಿ ಸಾವು ಈಗಲೂ ಮುಂದುವರೆದಿದೆ ಎಂದ ಅವರು, ಕಳಪೆ ಔಷಧಿ, ರಾಜ್ಯ ಸರಕಾರದ ವೈಫಲ್ಯ ಇದಕ್ಕೆ ಕಾರಣ ಎಂದು ಆರೋಪಿಸಿದರು. ಮೃತರ ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ ಎಂದು ಟೀಕಿಸಿದರು. ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಸಂಬಂಧ ರಾಜೀನಾಮೆ ಕೊಡಬೇಕೆಂದು ವಿಜಯೇಂದ್ರ ಅವರು ಆಗ್ರಹಿಸಿದರು.

ಕೇಂದ್ರದ ನರೇಂದ್ರ ಮೋದಿಜೀ ನೇತೃತ್ವದ ಸರಕಾರವು ಬಾಣಂತಿಯರು, ಹಸುಗೂಸುಗಳಿಗೆ ಸಂಬಂಧಿಸಿ ಮಾತೃವಂದನಾ, ಇಂದ್ರಧನುಷ್ ಸೇರಿ ಅನೇಕ ಯೋಜನೆಗಳನ್ನು ನೀಡಿದೆ. ಅಂಥ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಅವಕ್ಕೂ ಕತ್ತರಿ ಹಾಕಲಾಗುತ್ತಿದೆ ಎಂದು ಆಕ್ಷೇಪಿಸಿದರು. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ರಾಜ್ಯ ಸರಕಾರ ಘೋಷಿಸಬೇಕು; ನವಜಾತ ಶಿಶುಗಳ ಸಾವಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ ಅವರು ಬೆಂಗಳೂರಿಗೆ ಬಂದಿದ್ದು, ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದ ಮುಖಂಡ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡರಾದ ಬಳಿಗಾರ್ ಅವರು ನಿಧನರಾಗಿದ್ದು, ಅನಿವಾರ್ಯವಾಗಿ ಶಿಕಾರಿಪುರಕ್ಕೆ ಬರಬೇಕಿತ್ತು. ಆದ್ದರಿಂದ ಇವತ್ತು ಗುಲ್ಬರ್ಗಕ್ಕೆ ತೆರಳಲಾಗಿಲ್ಲ ಎಂದರು. ಮುಡಾದ ಹಗರಣ, 62 ಕೋಟಿ ಕೊಟ್ಟರೆ ಮಾತ್ರ 14 ನಿವೇಶನಗಳನ್ನು ವಾಪಸ್ ಮಾಡುವುದಾಗಿ ಹೇಳಿ ನಿವೇಶನಗಳನ್ನು ಹಣ ಪಡೆಯದೆ ವಾಪಸ್ ಮಾಡಲು ಬಿಜೆಪಿ ತೀವ್ರ ಹೋರಾಟ ಕಾರಣ ಆದುದನ್ನೂ ಅವರು ಪ್ರಸ್ತಾಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+