Vote From Home: ನಾಳೆಯಿಂದ ಮತದಾನ- ಮನೆಗೆ ಬರಲಿದ್ದಾರೆ ಅಧಿಕಾರಿಗಳು, ಯಾರು ಮತ ಚಲಾಯಿಸಬಹುದು ತಿಳಿಯಿರಿ

ಬೆಂಗಳೂರು, ಏಪ್ರಿಲ್‌ 28: ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯಲಿದೆ. ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನವು ಏಪ್ರಿಲ್ 29 ರಿಂದ ಪ್ರಾರಂಭವಾಗಲಿದೆ ಮತ್ತು ಮೇ 6 ರಂದು ಕೊನೆಗೊಳ್ಳಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ಈ ಬಾರಿ ವೋಟ್ ಫ್ರಮ್ ಹೋಮ್ ( Vote From Home ) ಆಯ್ಕೆಯನ್ನು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಚುನಾವಣಾ ಆಯೋಗ ಅನುಮತಿಸಿದೆ. ಚುನಾವಣೆ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಭೇಟಿ ನೀಡಿ ಮತ ಸಂಗ್ರಹಿಸುತ್ತಾರೆ.

ಚುನಾವಣಾ ಆಯೋಗದ ಅಧಿಕಾರಿಗಳು 80 ವರ್ಷ ಮೇಲ್ಪಟ್ಟವರ ಮನೆಗಳಿಗೆ ಪೊಲೀಸ್ ಸಿಬ್ಬಂದಿಯೊಂದಿಗೆ ಹೋಗುತ್ತಾರೆ. ಮತದಾನ ಪ್ರಕ್ರಿಯೆ ಗೌಪ್ಯವಾಗಿ ನಡೆಯಲಿದ್ದು, ವಿಡಿಯೋ ರೆಕಾರ್ಡ್ ಮಾಡಲಾಗುವುದು.

Vote From Home: Citizens Above 80 Years Can Vote From Their Home From Tomorrow

ಮತಪತ್ರಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ಚುನಾವಣಾ ಆಯೋಗ ಗುರುತಿಸಿದ ಸ್ಟ್ರಾಂಗ್ ರೂಮ್‌ಗೆ ಸ್ಥಳಾಂತರಿಸಲಾಗುತ್ತದೆ. ಮೇ 13 ರಂದು ಸಾಮಾನ್ಯ ಮತದಾರ ಮತಗಳೊಂದಿಗೆ ಮತ ಎಣಿಕೆ ನಡೆಯಲಿದೆ.

ಚುನಾವಣಾ ಉದ್ದೇಶಗಳಿಗಾಗಿ ನಿಯೋಜಿಸಲಾದ ಅಧಿಕಾರಿಗಳು ಮತ್ತು ದೇಶದ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ರಾಜ್ಯದ ರಕ್ಷಣಾ ಸಿಬ್ಬಂದಿಗಳು ತಮ್ಮ ಮತಪತ್ರಗಳನ್ನು ಅಂಚೆ ಮೂಲಕ ಸಲ್ಲಿಸಲು ಪ್ರಾರಂಭಿಸಬಹುದು.

ಚುನಾವಣಾ ಆಯೋಗದ ಪ್ರಕಾರ, ರಾಜ್ಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ 80,250 ಜನರಿದ್ದಾರೆ. ಅದರಲ್ಲಿ 9,152 ಮತಗಳು ಬೆಂಗಳೂರಿನಲ್ಲಿವೆ.

Vote From Home: Citizens Above 80 Years Can Vote From Their Home From Tomorrow

ರಾಜ್ಯದಲ್ಲಿ ಒಟ್ಟು 47,488 ಅಂಚೆ ಮತಪತ್ರಗಳಿದ್ದು, ಈಗಾಗಲೇ ಫಲಾನುಭವಿಗಳಿಗೆ ಕಳುಹಿಸಲಾಗಿದೆ. ಅವರು ತಮ್ಮ ಮತಗಳನ್ನು ಚಲಾಯಿಸಲು ಪ್ರಾರಂಭಿಸಬಹುದು ಮತ್ತು ಏಪ್ರಿಲ್ 29 ರಿಂದ ಚುನಾವಣಾ ಆಯೋಗಕ್ಕೆ ಕಳುಹಿಸಬಹುದು.

ಕರ್ನಾಟಕದಲ್ಲಿ 5.30 ಕೋಟಿಗೂ ಹೆಚ್ಚು ಅರ್ಹ ಮತದಾರರಿದ್ದು, ಕಣದಲ್ಲಿರುವ 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಒಟ್ಟು ಮತದಾರರು 5,30,85,566
ಪುರುಷರು 2,66,82,156
ಮಹಿಳೆಯರು 2,63,98,483
ಹೊಸ ಮತದಾರರು 16,04,285
18-19 ವರ್ಷದೊಳಗಿನ ಮತದಾರರು 11,71,558
80 ವರ್ಷ ಮೇಲ್ಪಟ್ಟ ಮತದಾರರು 80,250
ಅಂಚೆ ಮತಪತ್ರ 47,488
ಮತಗಟ್ಟೆಗಳು 58,545
ಇವಿಎಂಗಳು 1,15,709
ವಿವಿಪ್ಯಾಟ್‌ಗಳು 89,379

ಮುಖ್ಯ ಚುನಾವಣಾಧಿಕಾರಿಗಳ ಪ್ರಕಾರ, ರಾಜ್ಯಾದ್ಯಂತ 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಲಭವಾಗಿ ಮತದಾನ ಪ್ರಕ್ರಿಯೆಗೆ ಅನುಕೂಲ ಕಲ್ಪಿಸಲಾಗಿದೆ. ಒಟ್ಟು 1,15,709 ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) ಮತ್ತು 89,379 ಮತದಾರರ-ಪರಿಶೀಲಿಸಿದ ಪೇಪರ್ ಆಡಿಟ್ ಟ್ರೇಲ್‌ಗಳನ್ನು (ವಿವಿಪಿಎಟಿ) ನಿಯೋಜಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ 16,04,285 ಮತದಾರರಿದ್ದಾರೆ. ಅದರಲ್ಲಿ 11,71,558 ಜನರು 18 ರಿಂದ 19 ವರ್ಷದೊಳಗಿನವರು.

ಮಾದರಿ ನೀತಿ ಸಂಹಿತಿ ಜಾರಿಗೆ ಬಂದ ನಂತರ ಚುನಾವಣಾ ಆಯೋಗ 265 ಕೋಟಿ ರೂ. ಮೌಲ್ಯದ ಅಕ್ರಮ ನಗದ ಹಾಗೂ ಸಾಮಾನುಗಳನ್ನು ವಶಪಡಿಸಿಕೊಂಡಿದೆ. ಅಕ್ರಮ ರ್ಯಾಲಿಗಳಿಗಾಗಿ 53 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಚುನಾವಣಾ ಸಂಬಂಧಿತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 15 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ದ್ವೇಷದ ಭಾಷಣದ ಮೇಲೆ ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 673 ಎಫ್‌ಐಆರ್‌ಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+