ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಮೇಲಿನ ಲಾಠಿ ಚಾರ್ಜ್ ಖಂಡಿಸಿದ ಒಕ್ಕಲಿಗರ ಸಂಘ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 07 : ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಆಗಮಿಸಿದ್ದ ನೂರಾರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದನ್ನು ರಾಜ್ಯ ಒಕ್ಕಲಿಗರ ಸಂಘದ ರೈತ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಪ್ರಸನ್ನ ಎನ್.ಗೌಡ ಖಂಡಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರಸನ್ನ ಎನ್.ಗೌಡ ಅವರು, 'ಜೀವ ಜಲದ ಕೊರತೆಯಿಂದ ಅನುಭವಿಸುತ್ತಿರುವ ಕಷ್ಟ ಕೋಟಲೆಗಳನ್ನು ತಿಳಿಸಲು ಬಂದ ರೈತರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ. ರೈತರ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು. [ರೈತರಿಗೆ ಲಾಠಿ ರುಚಿ ತೋರಿಸಿದ ಸರ್ಕಾರಕ್ಕೆ ಪ್ರತಿಪಕ್ಷಗಳ ಚಾರ್ಜ್]

prasanna gowda

'ಈ ನಾಡಿಗೆ ನೂರಾರು ಟನ್ ಚಿನ್ನ, ಸಾವಿರಾರು ಟನ್ ರೇಷ್ಮೆ ಹಾಗೂ ಲಕ್ಷಾಂತರ ಟನ್ ಹಣ್ಣು, ತರಕಾರಿ ನೀಡಿದ ಚಿಕ್ಕಬಳ್ಳಾಪುರದ ಜನತೆ ಇಂದು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ 1500 ಅಡಿ ಬೋರ್ ವೆಲ್ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಆತಂಕ ವ್ಯಕ್ತಪಡಿಸಿದರು. [ಕೋಲಾರ ಸೇರಿ 4 ಜಿಲ್ಲೆಗಳಿಗೆ 24 ಟಿಎಂಸಿ 'ಜಲಭಾಗ್ಯ' : ಸಿದ್ದರಾಮಯ್ಯ]

'ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ. ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ ಪೋಲಿಸರನ್ನು ಅಮಾನತು ಮಾಡಬೇಕು. ಗೃಹಮಂತ್ರಿಗಳು ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರೈತರ ಮೇಲಿರುವ ಕೇಸುಗಳನ್ನು ರದ್ದು ಮಾಡಬೇಕು' ಎಂದು ಒತ್ತಾಯಿಸಿದರು. ["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]

'ಈ ದೇಶದಲ್ಲಿ ಪ್ರತಿಭಟನೆ ನಡೆಸುವುದು ಅಪರಾಧವೇ?. ಹೋರಾಟಗಾರರನ್ನು ಪೊಲೀಸರು ಪಶುಗಳಿಗಿಂತಲೂ ಕಡೆಯಾಗಿ ಥಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸರು ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿ ಕೊಡಿ ಎಂದು ಕೇಳುತ್ತಾರೆ. ಪೊಲೀಸರ ಈ ಧೋರಣೆಯು ರೈತ ವಿರೋಧಿ ಸರ್ಕಾರದ ಮನೋಭಾವ ತೋರಿಸುತ್ತದೆ' ಎಂದು ಆರೋಪಿಸಿದರು. [ಲಾಠಿ ಚಾರ್ಜ್: ರೈತರ ಮೇಲಿನ ಎಲ್ಲ ಪ್ರಕರಣ ಹಿಂದಕ್ಕೆ]

'ಚುನಾವಣೆ ಸಂದರ್ಭದಲ್ಲಿ ನೀರಾವರಿ ಯೋಜನೆಗಳು ಸೇರಿದಂತೆ ಹಲವು ಹತ್ತು ಭರವಸೆಗಳನ್ನು ನೀಡುವವರು ಅಧಿಕಾರಕ್ಕೆ ಬಂದ ನಂತರ ಸರ್ವಾಧಿಕಾರಿಗಳಂತೆ ನಡೆದುಕೊಂಡು ರೈತರ ಮೇಲೆ ದೌರ್ಜನ್ಯ ನಡೆಸುತ್ತಾರೆ. ರೈತರ ಬಗ್ಗೆ ರಾಜಕೀಯ ಪಕ್ಷಗಳು ಆರಂಭದಿಂದಲೂ ಅಸಹಿಷ್ಣತೆ ಹಾಗೂ ಅಸ್ಪೃಶ್ಯತೆಯನ್ನು ಆಚರಿಸಿಕೊಂಡೇ ಬಂದಿವೆ' ಎಂದು ದೂರಿದರು.

English summary
Rajya Vokkaligara Sangha's Raita Hitarakashana Horata Samiti president Prasanna.N.Gowda condemned the lotty charge on farmers who demanding for permanent water solution for Kolar and Chickballapur districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X