ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್

Posted By:
Subscribe to Oneindia Kannada

"ಪರೀಕ್ಷೆ, ಪರೀಕ್ಷೆ , ಪರೀಕ್ಷೆ " ಎಸೆಸ್ಸೆಲ್ಸಿ, ಪಿಯುಸಿ ಎಕ್ಸಾಂ ಟೆನ್ಮನ್ ಜೊತೆಗೆ ಈಗ ಪೇಪರ್ ಲೀಕ್ ಎನ್ನುವ ಭೂತ ಕರ್ನಾಟಕದ ವಿದ್ಯಾರ್ಥಿಗಳು, ಪೋಷಕರನ್ನು ಕಾಡುತ್ತಿದೆ. ಈ ಸಂದರ್ಭಕ್ಕೆ ತಕ್ಕಂತೆ ವಿಡಿಯೋ ಮೂಲಕ ಪರೀಕ್ಷೆ ಬರೆಯುವ ಕೊಠಡಿಯಲ್ಲಿ ಏನು ನಡೆಯಬಹುದು ಎಂಬುದನ್ನು ನಮ್ದುಕೆ ತಂಡ ತಿಳಿಸುತ್ತಿದೆ.

ಪರೀಕ್ಷೆಗೂ ಹಾಗೂ ಕನ್ನಡ ಚಿತ್ರರಂಗದ ಹಾಡುಗಳು ಏನ್ ಸಂಬಂಧ ಎಂಬ ಪ್ರಶ್ನೆ ಕೇಳಬಹುದು. ಆದರೆ, ಸಿನಿಪ್ರೇಮಿಗಳಿಗೆ ಹಾಡು ಗುನುಗಲು ಇಂಥ ಸಮಯ, ಸಂದರ್ಭ ಎಂಬುದು ಬೇಕಿಲ್ಲ, ಭಯವಾದರೆ, ಗಾಬರಿಯಾದರೆ, ಖುಷಿಯಾದರೂ ಹಾಡು ತಾನಾಗೇ ಹೊರ ಬರುತ್ತದೆ.[ಏನೇ ಆಗ್ಲಿ ನಾವು ಎಕ್ಸಾಂ ಬರೆಯಲ್ಲ: ವಿದ್ಯಾರ್ಥಿಗಳು ]

Karnataka students tension

ಸದ್ಯಕ್ಕೆ ಈ ವಿಡಿಯೋದಲ್ಲಿ ಇದೇ ರೀತಿ ಸಂದರ್ಭದ ಬಳಸಿಕೊಂಡು ಹಾಡುಗಳ ಮೂಲಕ ಚಿತ್ರಣ ಕಟ್ಟಿಕೊಡಲಾಗುತ್ತಿದೆ. ಪಕ್ಕದಲ್ಲಿ ಕುಳಿತ ಬುದ್ಧಿವಂತ ವಿದ್ಯಾರ್ಥಿ ಹೆಲ್ತ್ ಮಾಡಿದರೆ ಯಾವ ಸಾಂಗ್? ಮತ್ತೆ ಮತ್ತೆ ಅಡಿಷನಲ್ ಶೀಟ್ ಪಡೆಯುವ ವಿದ್ಯಾರ್ಥಿ ಬಗ್ಗೆ ಮಿಕ್ಕವರು ಯಾವ ಹಾಡು ಹಾಡಬಹುದು.? ಸ್ವಲ್ಪ ತೋರಿಸು ಗುರು ಎಂದು ಕೇಳಿದರೆ ಪೂರ್ತಿ ಆನ್ಸರ್ ಶೀಟ್ ನೀಡುವ ಗೆಳೆಯನ ಬಗ್ಗೆ ಯಾವ ಹಾಡಿದೆ?

ಪರೀಕ್ಷೆ ಹಾಲ್ ಟೆನ್ಶನ್ ಸಾಂಗ್ಸ್ ಮೂಲಕ ನೋಡಿ

ಪರೀಕ್ಷೆ ಹಾಲ್ ಟೆನ್ಶನ್ ಸಾಂಗ್ಸ್ ಮೂಲಕ ನೋಡಿ

-
-
-
-
-
-
-
-
-
-

ನೆಚ್ಚಿನ ವಿದ್ಯಾರ್ಥಿಯೊಬ್ಬನಿಗೆ ಮಾತ್ರ ಹೆಲ್ಪ್ ಮಾಡುವ ಟೀಚರ್ ಬಗ್ಗೆ ಯಾವ ಸಾಂಗ್? ಯಾರಿಗೂ ಅರ್ಥವಾಗದ ಪ್ರಶ್ನೆಗಳೇ ತುಂಬಿಕೊಂಡರೆ? ಕ್ಲಾಸ್ ಟಾಪರ್ ಬೇಕು ಎಂದು ಎಲ್ಲರೂ ದುಂಬಾಲು ಬಿದ್ದಾಗ...ಏನು ಹೆಲ್ಪ್ ಮಾಡದ ಅಣ್ತಮ್ಮಂದಿರ ಬಗ್ಗೆ.. [ಪಿಯು ಪೇಪರ್ ಲೀಕ್ ಬಗ್ಗೆ ಸುದ್ದಿ ವಿಡಿಯೋ]

ಕಾಪಿ ಹೊಡೆಯುವವರ ಬಗ್ಗೆ ಏನು ಮಾಡಲಾಗದ ಇನ್ವಿಜಿಲೇಟರ್ ಬಗ್ಗೆ ಕೂಡಾ ಇಲ್ಲಿ ಹಾಡಿದೆ.. ಹಾಡಿನ ಮೂಲಕ ಪರೀಕ್ಷೆ ಹಾಲ್ ಬಗ್ಗೆ ಹೇಳಲು ಸಂದೀಪ್, ಗೌತಮ್ ಶಶಿಧರ್, ಗೌತಮ್ ಅನೀಶ್, ಅರ್ಜುನ್, ಸಚಿನ್, ವಿನುತ್, ಪ್ರವೀಣ್, ಶ್ರವಣ್ ಮುಂದಾಗಿದ್ದಾರೆ. ವಿಡಿಯೋ ಕೆಳಗೆ ನೀಡಲಾಗಿದೆ. ಸ್ಟಿಲ್ಸ್ ಸ್ಲೈಡ್ ಗಳಲ್ಲಿದೆ.. ನೋಡಿ ಆನಂದಿಸಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Short Film on Student's exam tension..Inspired by Our vines team NamduK presents 'Pareekshe' short film which mainly explains students anxiety, exam hall scene through Sandalwood Songs. Check it out
Please Wait while comments are loading...