ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸರ್ಕಾರಕ್ಕೆ ಉರುಳಾಗುತ್ತೆ: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹುಬ್ಬಳ್ಳಿ, ಜೂನ್ 08: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸರ್ಕಾರಕ್ಕೆ ಉರುಳಾಗುತ್ತೆ. ನಿಗಮದ ಹಗರಣದಿಂದ ಸರ್ಕಾರ ಬಿದ್ದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಅಭಿವೃದ್ಧಿ ಹಗರಣ ಸರ್ಕಾರಕ್ಕೆ ಉರುಳುವುದು ಖಚಿತ. ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಭ್ರಷ್ಟಾಚಾರ ಹದ್ದು ಮೀರಿದೆಕೇವಲ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು, ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಹಗರಣ ನಡೆದಿದೆ. ಫೈನಾನ್ಸ್ ಮಿನಿಸ್ಟರ್ ಅವರೇ ಇದಾರೆ,ಅವರ ಗಮನಕ್ಕೆ ಇರಲಾರದೆ ಹಗರಣ ನಡೆಯತ್ತಾ ಎಂದ ಟೆಂಗಿನಕಾಯಿ ಪ್ರಶ್ನಿಸಿದರು.

ನಾಗೇಂದ್ರ ಅವರನ್ನು ಬಲಿ ಕೊಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡೋ ಪರಸ್ಥಿತಿ ಬಂದಿದೆ, ಸರ್ಕಾರದಲ್ಲಿ 40 ಪರ್ಸೆಂಟ್ ಅಲ್ಲ, 60 ಪರ್ಸೆಂಟ್ ಕಮೀಷನ್ ಆಗಿದೆ. ರಾಜೀನಾಮೆ ಕೊಡೋದು ಅಷ್ಟೆ ಅಲ್ಲ, ಇವರೆಲ್ಲ ಒಳಗೆ ಹೋಗ್ತಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ಬಸನಗೌಡ ದದ್ದಲ್ ರಾಜೀನಾಮೆ ವಿಚಾರವಾಗಿ ಟೆಂಗಿನಕಾಯಿ ಪ್ರತಿಕ್ರಿಯಿಸಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಯಾಕೆ ಹೈದ್ರಾಬಾದ್ ಗೆ ಹೋಯ್ತು..? ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆನಾಲ್ಕೈದು ಮಂತ್ರಿಗಳ ಅಲ್ಲ, ಮುಖ್ಯಮಂತ್ರಿಗಳೇ ರಾಜಿನಾಮೆ ಕೊಡೋ ಪ್ರಸಂಗ ಬರುತ್ತದೆ ಎಂದು ಹೇಳಿದರು.
ಮೋದಿ ನಾಳೆ ಮತ್ತೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಮಗೂ ದೆಹಲಿ ಕಚೇರಿಯಿಂದ ಅಹ್ವಾನ ಬಂದಿದೆ, ಮುಂದಿನ ಐದು ವರ್ಷಗಳಲ್ಲಿ ದೇಶಕ್ಕೆ ಹೊಸ ದಿಕ್ಕು ಸಿಗುತ್ತದೆ. ಹುಬ್ಬಳ್ಳಿಯ ಮೂವರಲ್ಲಿ ಮಂತ್ರಿ ಯಾರಾಗಬೇಕು ಅನ್ನೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮೂರು ಜನರ ಮನೆಗಳು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿವೆ, ಮೂವರಲ್ಲಿ ಯಾರ ಮಂತ್ರಿ ಆದರೂ ಸಂತೋಷ. ಕಾಂಗ್ರೆಸ್ ಭ್ರಮಾಲೋಕದಲ್ಲಿದೆ ಬಿಜೆಪಿ ಗೆದ್ದಷ್ಟು ಸೀಟ್ UPA ಗೆದ್ದಿಲ್ಲ. ಮುಂದಿನ ಹದಿನೈದು ವರ್ಷ ಬಿಜೆಪಿ ಸರ್ಕಾರ ಇರತ್ತದೆ ಎಂದು ಹೇಳಿದರು. ಐದು ವರ್ಷ ಮೋದಿ ಅವರೇ ಪ್ರಧಾನಮಂತ್ರಿ ಆಗಿರ್ತಾರೆ. ಮೋದಿ ಅವರ ಹತ್ತು ವರ್ಷದ ಅವಧಿಯಲ್ಲಿ ಒಂದು ಭ್ರಷ್ಟಾಚಾರ ಆರೋಪ ಇಲ್ಲ, ಮುಂದೆಯೂ ಕಳಂಕ ರಹಿತವಾಗಿ ಆಡಳಿತ ಮಾಡಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications