ಪೇದೆಗೆ ನಕಲಿ ಸಿಮ್: ಮೊಬೈಲ್ ಅಂಗಡಿಗೆ ಬೆಂಕಿ

ಗುರುವಾರ ನಡುರಾತ್ರಿ ಬೆಂಕಿ ಬಿದ್ದು ಇಡೀ ಅಂಗಡಿ ಸುಟ್ಟು ಕರಕಲಾಗಿದೆ. ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿದ್ದ ಬಾಲಾಜಿ ಮೊಬೈಲ್ ಅಂಗಡಿಯನ್ನು ಗುಜರಾತಿನ ಶ್ರೀಕಾಂತ್ ಎಂಬುವವರು ನಡೆಸುತ್ತಿದ್ದರು.
ಪೇದೆ ಲಕ್ಷ್ಮೀಶ ಬೇರೊಬ್ಬರ ದಾಖಲೆಗಳನ್ನು ನೀಡಿ ಅಕ್ರಮವಾಗಿ ಮೊಬೈಲ್ ಸಿಮ್ ಪಡೆದಿರುವುದು ಮತ್ತು ಇದೀಗ ಆ ಅಂಗಡಿಯೇ ಸುಟ್ಟು ಕರಕಲಾಗಿರುವುದು ಆಶ್ಚರ್ಯದ ಜತೆಗೆ ಆತಂಕವನ್ನೂ ಮೂಡಿಸಿದೆ.
ಕೆಲವು ದುಷ್ಕರ್ಮಿಗಳು ಅಂಗಡಿಗೆ ಬೆಂಕಿ ಹಚ್ಚಿದ್ದನ್ನು ತಾನು ನೋಡಿದ್ದಾಗಿ ವಾಚ್ ಮನ್ ಒಬ್ಬರು ಹೇಳಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಉದ್ದೇಶಪೂರ್ವಕವಾಗಿಯೇ ಅಂಗಡಿಗೆ ಬೆಂಕಿಯಿಟ್ಟುರುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.
ಇದೇನೂ ಸ್ಥಳೀಯ ಪೊಲೀಸರ ದಿಕ್ಕುತಪ್ಪಿಸಲು ಬೇಕೆಂದೇ ಈ ಕೃತ್ಯವೆಸಗಲಾಗಿದೆಯಾ? ಅಥವಾ ಬೇರೆ ಏನಾದರೂ ಕಾರಣವಿರಬಹುದಾ? ಅಥವಾ ದೇಶದ ಭದ್ರತೆಗೆ ಮಾರಕವಾಗುವ ರೀತಿಯಲ್ಲಿ ನಕಲಿ ಸಿಮ್ ಜಾಲ ಈ ಅಂಗಡಿಯಲ್ಲಿ ಅವ್ಯಾಹತವಾಗಿ ನಡೆದಿತ್ತಾ? ಘಟನೆ ನಡೆದಾಗ ಅಂಗಡಿ ಮಾಲೀಕ ಶ್ರೀಕಾಂತ್ ಊರಲ್ಲಿರಲಿಲ್ಲ ಎಂಬುದು ಮತ್ತಷ್ಟು ಸಂದೇಶಗಳನ್ನು ಸೃಷ್ಟಿಸಿದೆ.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅವರು ಖಡಕ್ ತನಿಖೆ ನಡೆಸುವ ಅಗತ್ಯವಿದೆ. ( ಪಾಸ್ ಪೋರ್ಟಿಗೆ ಕೊಟ್ಟಿದ್ದ ದಾಖಲೆ ಪೇದೆಯಿಂದ ದುರ್ಬಳಕೆ )












Click it and Unblock the Notifications