ಚನ್ನಪಟ್ಟಣ ಟಿಕೆಟ್‌ ಫೈಟ್;‌ ಅಭ್ಯರ್ಥಿ ಆಯ್ಕೆ ಕುರಿತು ಮಹತ್ವದ ಮಾಹಿತಿ ನೀಡಿದ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ, ಆಗಸ್ಟ್‌ 31: ಚನ್ನಪಟ್ಟಣ ಉಪಚುನಾವಣೆ ಇನ್ನೇನು ಎರಡ್ಮೂರು ದಿನಗಳಲ್ಲಿ ದಿನಾಂಕ ಅಂತಿಮವಾಗಲಿದ್ದು, ಆ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು, ಈವರೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮಾತನಾಡಿ, ಭಾರತ ಸರ್ಕಾರ ಉದ್ದು ಮತ್ತು ಸೋಯಾಬಿನ್ ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಯಾವುದು ಪಕ್ಷಯಿದೆ ಎಂಬುದನ್ನು ನೋಡದೇ ನಿರ್ಧಾರ ತಗೆದುಕೊಂಡಿದೆ‌. ರಾಜ್ಯ ಸರ್ಕಾರ ಕಳಿಸಿರುವ ಪ್ರಸ್ತಾವನೆ ಮೇರೆಗೆ ಅನುಮತಿ ನೀಡಿದೆ ಎಂದರು.

Union Minister Pralhad Joshi Reaction On Channapatna NDA Candidate

ರಾಜ್ಯದಲ್ಲಿ ಮಳೆಯಿಂದಾಗಿ ಅಸ್ತವ್ಯಸ್ತತೆ ಉಂಟಾಗಿದ್ದು, ಜನರ ಮೇಲೆ ಯಾವುದೇ ಕಾಳಜಿ ಇಲ್ಲದ ರಾಜ್ಯ ಸರ್ಕಾರ ರಾಜಕೀಯ ಡೊಂಬರಾಟದಲ್ಲಿ ಮುಳಗಿ ಹೋಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟಿಕಿದರು.

ರಾಜ್ಯ ಸರ್ಕಾರ ಮಾತ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ‌ ಜನರು ಕಾಂಗ್ರೆಸ್ ಕಲ್ಯಾಣಕ್ಕಾಗಿ ೧೩೬ ಸೀಟ್ ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವ ರೀತಿಯಾಗಿ ವರ್ತನೆ ಮಾಡುತ್ತಿದೆ ಎಂಬುದನ್ನು ಸ್ವತಃ ಕಾಂಗ್ರೆಸ್ ನವರೇ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದರು.

ಸಿಎಂ ಸಿದ್ದರಾಮಯ್ಯ ಅವರೇ ನೀವು ಏಕೆ ರಾಜಭವನ ಚಲೋ ಮಾಡಿತ್ತೀರಿ, ಮುಡಾ ಚಲೋ ಮಾಡ್ರಿ, ಅಲ್ಲಿ ಹೋಗಿ ಕೈಮುಗಿದು ನಂದು ತಪ್ಪಾಗಿದೆ ಎಂದು ಹೇಳಿ, ರಾಜಭವನ ಚಲೋ ಅಕ್ಷಮ್ಯ ಅಪರಾಧ, ರಾಜಪಾಲರು ತನಿಖೆಗೆ ಸೂಚನೆ ಕೊಟ್ಡಿದ್ದಕ್ಕೆ ಇವರೇಕೆ ಹೆದರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.

ರಾಜೀನಾಮೆ ಕೋಡೋದು ಬಿಡೋದು ಕಾಂಗ್ರೆಸ್ ಸರ್ಕಾರಕ್ಕೆ ಬಿಟ್ಟಿದ್ದು, ನಿಮಗೂ ಕೇಜ್ರಿವಾಲ್ ಅವರಿಗೂ ನಾಚಿಕೆಯಿಲ್ಲ ಎಂದರೆ ರಾಜೀನಾಮೆ ಕೊಡಲು ಹೋಗಬೇಡಿ, ಸಿಎಂ ಸೇರಿದಂತೆ ಅವರ ಕುರ್ಚಿ ಉಳಿಸಲು ಮುಳಗಿದೆ ಹೊರತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+