ʼಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಭಯೋತ್ಪಾದಕʼ

ಹುಬ್ಬಳ್ಳಿ , ಅಕ್ಟೋಬರ್‌ 14: ಹಳೇ ಹುಬ್ಬಳ್ಳಿಯ ಗಲಾಟೆ ಪ್ರಕರಣದಲ್ಲಿ ನಮ್ಮ ಪಕ್ಷ ಸರಿಯಾದ ನಿರ್ಧಾರ ಕೈಗೊಂಡಿದ್ದು ಇದನ್ನ ನಾನು ಸ್ವಾಗತ ಮಾಡ್ತೇನೆ ಎಂದು ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದದನ್ನು ಶಾಸಕ ಅಬ್ಬಯ್ಯಾ ಪ್ರಸಾದ್ ಅವರು ಸಮರ್ಥಿಸಿಕೊಂಡಿರು.

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಭಯೋತ್ಪಾದಕ ಇದ್ದಂತೆ ಎಂದ ಅವರು ಬಿಜೆಪಿ ಅವರೆಲ್ಲ ಭಯೋತ್ಪಾದಕರಿದ್ದಂತೆ ಬಿಜೆಪಿ ಅವರು ಮಾಡುವ ಕೆಲಸವೆಲ್ಲ ಭಯೋತ್ಪಾದಕ ಕೆಲಸವೇ ಆಗಿದೆ. ಈ ರೀತಿ ಬಿಜೆಪಿ ಅವರು ದೇಶ ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಅಬ್ಬಯ್ಯಾ ಪ್ರಸಾದ್‌ ಹೇಳಿದ್ದಾರೆ.

Union Minister Pralhad Joshi is a terrorist Mla Abbayya Prasad controversial statement

ಸಂಪುಟ ನಿರ್ಧಾರ ತೆಗೆದುಕೊಂಡಿದ್ದನ್ನ ಸ್ವಾಗತ ಮಾಡ್ತೇವೆ ಬಹಳಷ್ಟು ಜನಕ್ಕೆ ರಾಜಕೀಯ ಒತ್ತಡದಿಂದ ಅನ್ಯಾಯ ಆಗಿದ್ದು, ಉಪಸಂಪುಟ ರಿಪೋರ್ಟ್ ಆಧಾರದ ಮೇಲೆ ನಿರ್ಧಾರ ಕೈಗೊಂಡಿದೆ. ಬಿಜೆಪಿ ಅವರು ಕೇವಲ ಓಲೈಕೆ ರಾಜಕಾರಣ ಅಂತಾರೆ. 60 ರಲ್ಲಿ 43ರಲ್ಲಿ ವಾಪಸ್ ಪಡೆದಿದ್ದಾರೆ ಅವರು ಚಾರ್ಜ್ ಶೀಟ್ 90 ದಿನಗಳಲ್ಲಿ ಆಗ್ಬೇಕ್ಕಿತ್ತು, ಆಗಿಲ್ಲ ಬೆಲ್ ಆರಾಮಾಗಿ ಆಗುತ್ತೆ ಅನ್ನೋ ದುರುದ್ದೇಶದಿಂದ ಆ ರೀತಿ ನಿರ್ಧಾರ ಕೈಗೊಂಡಿದ್ದಾರೆ.
ನಮ್ಮ ಸರ್ಕಾರ ಅಮಾಯಕರ ಮೇಲೆ ಈ ರೀತಿ ಆಗಿದೆ ಅಂತ ಹಿಂಪಡೆದಿದ್ದಾರೆ ಎಂದು ಹೇಳಿದರು.

ಯಾರು ಅಮಾಯಕರು ಅಂತ ಹೇಳಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದ ಅವರು, ಅಂದಿನ ಪೊಲೀಸ್ ಕಮಿಷನರ್‌ ಲಾಬುರಾಮ್ ಒಳ್ಳೆಯ ಅಧಿಕಾರಿ ಅನ್ಕೊಂಡಿದ್ವಿ. ರಾಜಕೀಯ ಒತ್ತಡದಿಂದ ರಸ್ತೆ ಮೇಲೆ ಹಣ್ಣು ಮಾರೋರನ್ನು ತಂದು ಸೇರಿಸಿದ್ದಾರೆ. ವಿಡಿಯೋ ನೋಡಿ ಮಾಡಿದವರ ಮೇಲೆ ಕೇಸ್ ಹಾಕಿದ್ರು. ಆದರೆ, ಯುಎಪಿಎ ಹಾಕಬೇಕಾ, ಬೇರೆ ಕೇಸ್ ಇರಲಿಲ್ವಾ ಎಂದ ಅವರು, ಗದಗ ನಲ್ಲಿ ಒಂದು ಕೇಸ್ ಆಗಿತ್ತಲ್ಲ, ಆ ಕೇಸನ್ನು ವಿತ್ ಡ್ರಾ ಮಾಡಿಲ್ವಲ್ಲ. ಒಂದು ಸಮಾಜವನ್ನು ಇಟ್ಟುಕೊಂಡು ರಾಜಕಾರಣ ಮಾಡೋದಾ? ಎಂದು ಪ್ರಶ್ನಿಸಿದರು.

ಎಲ್ಲಾ ಜಾತಿ ಧರ್ಮ ಸೇರಿ ಭಾರತೀಯರು ಅನ್ಕೊಂಡು ಹೋಗ್ತಿದೆ. ಜಿ ಎಸ್ ಟಿ ಬಗ್ಗೆ ಮಾತನಾಡುವ ತಾಕತ್ತು ಬಿಜೆಪಿ ಅವರಿಗಿಲ್ಲ, ಎಲ್ಲಾ ವಕೀಲರು ವಿರೋಧ ಮಾಡಲ್ಲ, ಸ್ವಾಗತ ಮಾಡಿದ ವಕೀಲರು ಇದ್ದಾರೆ. ರಾಜಕೀಯ ಪ್ರೇರಿತ ಕುತಂತ್ರ ಎಂದು ಶಾಸಕ ಅಬ್ಬಯ್ಯಾ ಪ್ರಸಾದ್ ಅವರು ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಮಾಡವುದು ತಪ್ಪೇ..?: ಎಚ್ ಕೆ ಪಾಟೀಲ

ಬಿಜೆಪಿ ಅನಾವಶ್ಯಕ ರಾಜಕಾರಣ ಮಾಡುತ್ತಿರುವುದು ಸೂಕ್ತವಲ್ಲ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಈ ಹಿನ್ನೆಲೆ ಸರ್ಕಾರ ಪರಮಾರ್ಶೆ ಮಾಡಿತು. ಈ ವಿಚಾರ ಸಚಿವ ಸಂಪುಟದ ಉಪ ಸಮಿತಿ, ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಹಾಗೂ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವಂತದಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಾವು ಅಲ್ಪಸಂಖ್ಯಾತ ಓಲೈಕೆ ಮಾಡುತ್ತಿಲ್ಲ. ಬಿಜೆಪಿ ಆ ರೀತಿ ಬಿಂಬಿಸುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತ ಕಲ್ಯಾಣ ಮಾಡವುದು ತಪ್ಪಾ ಎಂದು ಪ್ರಶ್ನಿಸಿದರು. ನಮಗೆಲ್ಲರೂ ಭಾರತೀಯರೇ. ಸಮಾಜ ಒಡೆದಾಳುವ ಮಾತುಗಳಿಂದ ರಾಷ್ಟ್ರಕಟ್ಟಲು ಆಗಲ್ಲ.‌ ಬಿಜೆಪಿ ತಮ್ಮ ಕಾಲದಲ್ಲಿ ಎಷ್ಟು ಕೇಸ್ ವಾಪಸ್ಸು ಪಡೆದಿದ್ದಾರೆ. ರಾಜಕೀಯ ಪ್ರೇರಿತ ಕೇಸ್ ದಾಖಲಾಗಿದ್ದರೆ ಅವುಗಳನ್ನು ವಿಮರ್ಶೆ ಮಾಡಿ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ವಾಪಸು ಪಡೆಯುವ ಅವಕಾಶವಿದೆ. ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿರುವುದು ಸೂಕ್ತವಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+