ವಿಧಾನಸಭಾ ಚುನಾವಣೆ: ಫೆ 23 ಸಂಡೂರಿಗೆ ಅಮಿತ್ ಶಾ; ಯಾರಿಗೆ ಒಲಿಯಲಿದೆ ಟಿಕೆಟ್.?
ನಾಳೆ( ಫೆಬ್ರವರಿ23) ರಾಜ್ಯಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಆಗಮಿಸುತ್ತಿದ್ದು, ಚುನಾವಣಾ ತಂತ್ರಗಾರಿಕೆಯ ಕುರಿತು ಸಾಕಷ್ಟು ವಿಚಾರಗಳನ್ನ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಲಿದ್ದಾರೆ.
ಬಳ್ಳಾರಿ,ಫೆಬ್ರವರಿ22: ಮುಂಬರುವ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ನಾಯಕರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುವ ಪ್ರಯತ್ನದಿಂದಾಗಿ ಪದೇ ಪದೇ ರಾಜ್ಯಕ್ಕೆ ಹೈಕಮಾಂಡ್ ನಾಯಕರು ಆಗಮಿಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಿ ಪಿ ನಡ್ಡಾ ರಾಜ್ಯದಲ್ಲಿ ಮೂರು ದಿನಗಳ ಪ್ರವಾಸದ ಬೆನ್ನಲ್ಲೇ, ನಾಳೆ( ಫೆಬ್ರವರಿ23) ರಾಜ್ಯಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಆಗಮಿಸುತ್ತಿದ್ದು, ಚುನಾವಣಾ ತಂತ್ರಗಾರಿಕೆಯ ಕುರಿತು ಸಾಕಷ್ಟು ವಿಚಾರಗಳನ್ನ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಲಿದ್ದಾರೆ.
ನಾಳೆ (ಫೆ. 23) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶಕ್ಕಾಗಿ ಭಾಗವಹಿಸಲಿದ್ದ, ಸಮಾವೇಶಕ್ಕೆ ಈಗಾಗಲೇ ವೇದಿಕೆ ಸಜ್ಜಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರೀ ಶತಾಯ ಗತಾಯ ಗೆಲುವು ಸಾಧಿಸಲೆಬೇಕು ಎಂದು ಪಣ ತೊಟ್ಟಿರುವ ಬಿಜೆಪಿ, ಹೈಕಮಾಂಡ್ ನಾಯಕರು ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಮೂಲಕ ವಿಜಯ ಕಹಳೆಗೆ ತಯಾರಿ ನಡೆಸಿದೆ. ಇನ್ನೂ ಈ ಸಾರ್ವಜನಿಕ ಸಮಾವೇಶದಲ್ಲಿ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕ ಭಾಗದಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ.

ಅಮಿತ್ ಶಾ ಅವರು ನಾಳೆ (ಫೆ. 23)ರಂದು ಮಧ್ಯಾಹ್ನ 1.30ಕ್ಕೆ ಸಂಡೂರಿಗೆ ಬರಲಿದ್ದಾರೆ. ಮಧ್ಯಾಹ್ನ 2ರಿಂದ 3.30ರ ವರೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ. ಇನ್ನೂ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶ್ರೀರಾಮುಲು ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಸ್ಥಳೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇನ್ನೂ ಸಾವರ್ಜನಿಕ ಸಮಾವೇಶ ಮುಗಿದ ಬಳಿಕ ಶಿವಪುರ ಪ್ಯಾಲೇಸ್‌ನಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಕೋರ್ ಕಮಿಟಿ ಸಭೆ ನಡೆಯಲಿದ್ದು, ಚುನಾವಣಾ ತಂತ್ರಗಾರಿಕೆ, ಸರ್ಕಾರ ಕಾರ್ಯಕ್ರಮಗಳ ಬಗ್ಗೆ ಜಾಗೃತಿ, ಟಿಕೆಟ್ ವಿಚಾರದಲ್ಲಿನ ಗೊಂದಲ ಸೇರಿದಂತೆ ಹಲವು ವಿಚಾರಗಳನ್ನ ಚರ್ಚೆ ನಡೆಸಲಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಕಾರ್ತಿಕೇಯ ಘೋರ್ಪಡೆಯರಿಗೆ ಹೆಚ್ಚಿನ ಹಿಡಿತವಿದ್ದು, ಘೋರ್ಪಡೆಯವರು ಯಾರನ್ನು ಸೂಚಿಸುತ್ತಾರೊ ಅವರೇ ಅಭ್ಯರ್ಥಿ ಎನ್ನುವಂತೆ ಈಗಾಗಲೇ ಕ್ಷೇತ್ರದಲ್ಲಿ ಬಿಂಬಿಸಲಾಗಿತ್ತು. ಇನ್ನೂ ಕಾರ್ತಿಕ್ ಘೋರ್ಪಡೆಯವರು ಅಮಿತ್ ಶಾ ಅವರೊಂದಿಗೆ ಉತ್ತಮ್ಮ ಬಾಂಧವ್ಯ ಹೊಂದಿದ್ದಾರೆ .ಅವರೇ ಟಿಕೆಟ್ ನಿರ್ಧರಿಸುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಈ ಕುರಿತು ಹೇಳಿಕೆ ನೀಡಿದ್ದ ಅವರು ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯ ಆಕಾಂಕ್ಷಿಗಳು ಸುಮಾರು 15ರಿಂದ 20 ಜನ ಅರ್ಜಿಗಳನ್ನು ನೀಡಿದ್ದಾರೆ. ಅವರೆಲ್ಲ ಉತ್ಸುಕರಾಗಿದ್ದಾರೆ. ಕೆಲವರು ಚುನಾವಣಾ ವೆಚ್ಚವನ್ನು ಭರಿಸುವಷ್ಟುಸಮರ್ಥರಲ್ಲ. ಅಲ್ಲದೆ ಪಕ್ಷದ ಮುಖಂಡರೊಂದಿಗೆ ಹೈಕಮಾಂಡ್‌ನಲ್ಲಿ ಚರ್ಚಿಸಿ ಟಿಕೆಟ್ ನೀಡುವ ಕುರಿತು ಚಿಂತಿಸುತ್ತೇವೆ ಎಂದಿದ್ದಾರೆ.
ಇದರೊಂದಿಗೂ ಸ್ಥಳೀಯರನ್ನೇ ಅಭ್ಯರ್ಥಿಯಾಗಿಸುವೆ ಎನ್ನುವ ಅವರ ನಿಲುವನ್ನು ಕೊಂಚ ಸಡಿಲಿಕೆ ಮಾಡಿದ್ದಾರೆ. ಇತ್ತ ಸಚಿವ ಶ್ರೀರಾಮುಲು ಕೂಡಾ ಇತ್ತೀಚೆಗೆ ಸಂಡೂರು ಕ್ಷೇತ್ರದತ್ತ ಒಲವು ತೋರುತ್ತಿದ್ದು, ಶ್ರೀರಾಮುಲು ಆಗಮನದ ಹಿನ್ನೆಲೆ ಶ್ರೀರಾಮುಲು ಗೆಲುವಿಗೆ ಪೂರಕವಾಗಿ ಈ ಬೃಹತ್ ಸಮಾವೇಶ ಆಯೋಜನೆಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ












Click it and Unblock the Notifications