ಕರ್ನಾಟಕ ಬಂದ್: ಆಸ್ಪತ್ರೆ, ಕ್ಲಿನಿಕ್ ತೆರೆದಿರುತ್ತದೆ
ಬೆಂಗಳೂರು, ಜನವರಿ 24 : ಮಹಾದಾಯಿ ನದಿನೀರಿನ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಗುರುವಾರ ನಡೆಯಲಿರುವ ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಲು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕ ನಿರ್ಧರಿಸಿದ್ದು, ಕಪ್ಪು ಪಟ್ಟಿ ಧರಿಸಿ ಸೇವೆ ನೀಡಲು ಮುಂದಾಗಿದೆ.
ಮಹಾದಾಯಿ ನದಿ ನೀರಿನ ವಿವಾದ ಇತ್ಯರ್ಥ ಕುರಿತಂತೆ ಜನ.25 ರಂದು ಕನ್ನಡ ಪರ ಸಂಘಟನೆಗಳು, ರೈತರು ಬಂದ್ ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನೈತಿಕ ಬೆಂಬಲ ನೀಡುತ್ತೇವೆ. ರೋಗಿಗಳು ಆತಂಕ ಪಡಬೇಕಿಲ್ಲ ಆಸ್ಪತ್ರೆಗಳು, ಕ್ಲಿನಕ್ ಗಳನ್ನು ಬಂದ್ ಮಾಡುವುದಿಲ್ಲ, ಎಲ್ಲ ಆಸ್ಪತ್ರೆಗಳು ಎಂದಿನಂತೆ ತೆರೆದಿರುತ್ತದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ತಿಳಿಸಿದ್ದಾರೆ.

ಬಂದ್ ನಿಂದ ರೋಗಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ವೈದ್ಯರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಆದರೆ ಕ್ಲಿನಿಕ್, ಆಸ್ಪತ್ರೆಗಳ ಬಾಗಿಲು ತೆರೆದಿರುತ್ತದೆ. ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.












Click it and Unblock the Notifications