ಉಡುಪಿಯ ಎರಡು ಪ್ರಮುಖ ರಸ್ತೆಗಳಿಗೆ ವಿಸ್ತರಣೆ ಭಾಗ್ಯ
ಉಡುಪಿ, ಜುಲೈ 14 : ಉಡುಪಿಯ ಎರಡು ಪ್ರಮುಖ ರಸ್ತೆಗಳನ್ನು ವಿಸ್ತರಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಏಕಪಥದ ರಸ್ತೆಯನ್ನು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಬನ್ನೆಂಜೆ ಸರ್ಕಲ್ ರಸ್ತೆಯಿಂದ ಬ್ರಹ್ಮಗಿರಿ ಸರ್ಕಲ್ ತನಕ ಮತ್ತು ಜಿಲ್ಲಾ ಖಜಾನೆಯಿಂದ ಮಿಷನ್ ಹಾಸ್ಟೆಟಲ್ ಸರ್ಕಲ್ ವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಉಡುಪಿ ನಗರ ಸಭೆಗೆ ಈ ಯೋಜನಾ ವರದಿಯನ್ನು ತಯಾರಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. [ಉಡುಪಿ ಯಾತ್ರಿ ಬರೆದ ಪತ್ರಕ್ಕೆ, ಮೋದಿ ಕೊಟ್ಟ ಉತ್ತರವೇನು?]

ಬನ್ನೆಂಜೆ ಸರ್ಕಲ್ ರಸ್ತೆಯಿಂದ ಬ್ರಹ್ಮಗಿರಿ ಸರ್ಕಲ್ ರಸ್ತೆಯಲ್ಲಿ ಎಸ್ಪಿ ಕಚೇರಿ, ತಾಲೂಕು ಕಚೇರಿ, ಸಬ್ ರಿಜಿಸ್ಟಾರ್ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಿವೆ. ತಾಲೂಕು ಕಚೇರಿ ಆವರಣದಲ್ಲಿಯೇ ಸುಮಾರು 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿದೆ. [ಉಡುಪಿಗೆ ಸಿಕ್ತು ಪೊಲೀಸ್ ತರಬೇತಿ ಕೇಂದ್ರ]
ಜಿಲ್ಲಾ ಖಜಾನೆ ರಸ್ತೆಯಲ್ಲಿ ಲೋಕಾಯುಕ್ತ ಪೊಲೀಸ್, ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ, ಉಡುಪಿ ನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಚೇರಿಗಳಿವೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆದ್ದರಿಂದ ರಸ್ತೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಆರ್.ವಿಶಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಎರಡು ರಸ್ತೆಗಳು ಏಕಪಥ ಹೊಂದಿವೆ. ದಿನದಿಂದದಿನಕ್ಕೆ ಇಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದೆ. ಆದ್ದರಿಂದ ರಸ್ತೆಯನ್ನು ವಿಸ್ತರಣೆ ಮಾಡಲು ಮುಂದಾಗಿದ್ದು, ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications