ಸಂಪುಟ ವಿಸ್ತರಣೆ : ಇಬ್ಬರು ಹೊಸ ಸಚಿವರಿಗೆ ಇನ್ನೂ ಖಾತೆ ಸಿಕ್ಕಿಲ್ಲ

ಬೆಂಗಳೂರು, ಜೂನ್ 18 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಮಾಡಿದ್ದು ಇಬ್ಬರು ಹೊಸ ಸಚಿವರು ಸೇರ್ಪಡೆಗೊಂಡಿದ್ದಾರೆ. ಆದರೆ, ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ.

ಜೂನ್ 14ರ ಶುಕ್ರವಾರ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಮತ್ತು ಮುಳಬಾಗಿಲು ಶಾಸಕ ಎಚ್.ನಾಗೇಶ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದರು. ಆದರೆ, ನಾಲ್ಕು ದಿನ ಕಳೆದರೂ ಇನ್ನೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಲ್ಲ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಪೌರಾಡಳಿತ ಖಾತೆಗಳು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಯಲ್ಲಿವೆ. ಇವುಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನದಿಂದ ಕುಮಾರಸ್ವಾಮಿ ಸ್ವ ಕ್ಷೇತ್ರ ಚನ್ನಪಟ್ಟಣದ ಪ್ರವಾಸದಲ್ಲಿದ್ದಾರೆ.

Two new ministers yet to get portfolios

ಎಚ್.ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, ಆರ್.ಶಂಕರ್ ಅವರಿಗೆ ಪೌರಾಡಳಿತ ಖಾತೆಯನ್ನು ಹಂಚಿಕೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದೆ. ಗುರುವಾರ ಅಥವ ಶುಕ್ರವಾರ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಇಂಧನ, ಅಬಕಾರಿ, ವಿದ್ಯುತ್, ಗುಪ್ತಚರ ಸೇರಿದಂತೆ 5ಕ್ಕೂ ಅಧಿಕ ಖಾತೆಗಳಿವೆ. ಎನ್.ಮಹೇಶ್ ರಾಜೀನಾಮೆ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಿ.ಎಸ್.ಶಿವಳ್ಳಿ ಅವರ ನಿಧನದ ಬಳಿಕ ಪೌರಾಡಳಿತ ಖಾತೆಯೂ ಕುಮಾರಸ್ವಾಮಿ ಕೈ ಸೇರಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಗೆ ತುರ್ತಾಗಿ ಸಚಿವರ ಅಗತ್ಯವಿದೆ. ಆ ಖಾತೆಯನ್ನು ಹಂಚಿಕೆ ಮಾಡಿ ಎಂಬ ಒತ್ತಾಯವೂ ಕೇಳಿಬಂದಿದೆ. ಪೌರಾಡಳಿತ ಮತ್ತು ಶಿಕ್ಷಣ ಖಾತೆಯನ್ನು ಕುಮಾರಸ್ವಾಮಿ ಹಂಚಿಕೆ ಮಾಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+