ಕರ್ನಾಟಕದಲ್ಲಿ ಈ ವರ್ಷ 2 NCC ಶಿಬಿರ ಆಯೋಜನೆ: ಸಿಎಂ ಬೊಮ್ಮಾಯಿ

ಗಣರಾಜ್ಯೋತ್ಸವದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಆಯ್ಕೆಯಾಗಿ ಪರೇಡ್ ನಡೆಸಿ ರಾಜ್ಯವೇ ಹೆಮ್ಮ ಪಡುವಂತೆ ಮಾಡಿವೆ. ಈ ಸಂಬಂಧ ರಾಜ್ಯ ಸರ್ಕಾರ ಎರಡು ಎನ್‌ಸಿಸಿ ಶಿಬಿರ ಏರ್ಪಡಿಸಲಿದೆ.

ಬೆಂಗಳೂರು, ಫೆಬ್ರವರಿ 07: ಈ ಬಾರಿ ಗಣರಾಜ್ಯೋತ್ಸವದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಆಯ್ಕೆಯಾಗಿ ಪರೇಡ್ ನಡೆಸಿ ರಾಜ್ಯವೇ ಹೆಮ್ಮ ಪಡುವಂತೆ ಮಾಡಿದ್ದವು. ಉತ್ತೇಜನಾರ್ಥವಾಗಿ ಈ ವರ್ಷ ಎರಡು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಶಿಬಿರ ಏರ್ಪಡಿಸಿ, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ‌ ಹಾಗೂ ಗೋವಾ ರಾಜ್ಯ ಎನ್ ಸಿ ಸಿ ಕೆಡೆಟ್ ಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ಈ ಸನ್ಮಾನಿತರೆಲ್ಲರೂ ದೆಹಲಿಯಲ್ಲಿ ಪರೇಡ್ ನಡೆಸಿದವರು.

ಎನ್ ಸಿಸಿ ಕೆಡೆಟ್‌ಗಳು ದೆಹಲಿಯಲ್ಲಿ ನಡೆ ಗಣರಾತ್ಯೋತ್ಸವದಲ್ಲಿ ಪಾಲ್ಗೊಂಡು ಎರಡು ರಾಜ್ಯಗಳಿಗೆ ಹೆಮ್ಮೆ ತರವು ಜೊತೆಗೆ ಪ್ರಶಸ್ತಿಗಳನ್ನೂ ಸಹ ಪಡೆದಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವುದು ಅಷ್ಟು ಸುಲಭವಲ್ಲ. 95 ಸಾವಿರ ಕೆಡೆಟ್ ಗಳ ಪೈಕಿ 111 ಮಾತ್ರ ಆಯ್ಕೆಯಾಗಿವೆ. ಇದು ನಿಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಸನ್ಮಾನಿತರನ್ನು ಶ್ಲಾಘಸಿದರು.

ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಲಿ

ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಲಿ

ಎನ್‌ಸಿಸಿ ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಬೇಕು. ಬೆಟಾಲಿಯನ್ ಗಳನ್ನು ರೇಜಿಮೆಂಟ್ ಗಳಾಗಿ ಕಟ್ಟಿದಂತೆಯೇ ಎನ್‌ಸಿಸಿ ಯನ್ನೂ ರೆಜಿಮೆಂಟ್ ಗಳಾಗಿ ಬೆಳೆಸಬೇಕು. ಆಗ ಮಾತ್ರವೇ ಪ್ರಾಮುಖ್ಯತೆ ದೊರೆಯುತ್ತದೆ ಹಾಗೂ ಯುವಕರೂ ಸೇರ್ಪಡೆ ಯಾಗಲು ಉತ್ತೇಜನ ದೊರೆಯುತ್ತದೆ.

ಎನ್‌ಸಿಸಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದು, ರಾಜ್ಯದ ಗ್ರಾಮೀಣ ಸೇರಿದಂತೆ ವಿವಿಧ ಭಾಗಗಳ ಪ್ರತಿಭಾವಂತರು ಸೇರ್ಪಡೆಯಾಗಿದ್ದಾರೆ. ಅವರಲ್ಲಿ ಆತ್ಮವಿಶ್ವಾಸದ ಅಗತ್ಯವಿದ್ದು,ಅದ ಎನ್‌ಸಿಸಿ ಸಿಗುತ್ತದೆ. ಇಲ್ಲಿ ಕಲಿತ ಶಿಸ್ತನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದು ಅವರು ತಿಳಿಸಿದರು.

ಹೊಸ 75 ಯುನಿಟ್ ಗಳ ಪ್ರಾರಂಭ

ಹೊಸ 75 ಯುನಿಟ್ ಗಳ ಪ್ರಾರಂಭ

ಎನ್‌ಸಿಸಿ ಯಲ್ಲಿ ಕಲಿತ ಧೈರ್ಯ, ಆತ್ಮವಿಶ್ವಾಸ ಜೀವನದಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ರಾಜ್ಯ ಸರ್ಕಾರ ಎನ್‌ಸಿಸಿಗೆ ಅಗತ್ಯವಿರುವ ನೆರವು ನೀಡುತ್ತದೆ. ಕಳೆದ ವರ್ಷ ಸುಭಾಸಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ 75 ಹೊಸ ಯುನಿಟ್ ಆರಂಭಿಸುವುದಾಗಿ ಹೇಳಿದ್ದು, ಅದರಂತೆ ಆರಂಭಿಸಲಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಯೂನಿಟ್ ಗಳನ್ನು ಸೇರಿಸಲಾಗುತ್ತಿದೆ. ಎನ್ ಸಿಸಿಯನ್ನು ಪ್ರೌಢ ಶಾಲಾ ಮಟ್ಟಕ್ಕೆ ವಿಸ್ತರಿಸಬೇಕು. ಕರಾವಳಿಯಲ್ಲಿ ಈ ವರ್ಷ 2800 ಕ್ಕೂ ಹೆಚ್ಚು ಹೊಸ ಎನ್‌ಸಿಸಿ ಕೆಡೆಟ್ ಗಳು ಸೇರ್ಪಡೆಯಾಗಿದ್ದಾರೆ ಎಂದು ವಿವರಿಸಿದರು.

ದೇಶದ ಶೇ.46ರಷ್ಟಿರುವ ಯುಕವರಿಗಾಗಿ ಸ್ಕಿಲ್ ಇಂಡಿಯಾ

ದೇಶದ ಶೇ.46ರಷ್ಟಿರುವ ಯುಕವರಿಗಾಗಿ ಸ್ಕಿಲ್ ಇಂಡಿಯಾ

ಪ್ರಧಾನಮಂತ್ರಿಗಳು ದೇಶ ಮೊದಲು ಎಂದು ಆಲೋಚಿಸುತ್ತಾರೆ. ದೇಶ ಆರ್ಥಿಕವಾಗಿ ಬೆಳೆಯಬೇಕೆಂಬುದು ಅವರ ಆಶಯ. ಭಾರತ ವಿಶ್ವದಲ್ಲಿ 5 ನೇ ಸ್ಥಾನದಲ್ಲಿದೆ. ಹತ್ತು ವರ್ಷಗಳಲ್ಲಿ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪುವ ಗುರಿ ನಮ್ಮಲಿದೆ. ಅದಕ್ಕೆ ಯುವಕರ ಪಾತ್ರ ಬಹಳ ಮುಖ್ಯ. ದೇಶದ ಶೇ.46ರಷ್ಟು ಜನಸಂಖ್ಯೆಯ ಯುವಕರು ನಮ್ಮ ದೇಶದ ಆಸ್ತಿ ಎಂದೇ ಪ್ರಧಾನಿಯವರು ಸ್ಕಿಲ್ ಇಂಡಿಯಾ ತರಬೇತಿ ಆರಂಭಿಸಿದರು.

ಬಹುತೇಕರು ಅದೃಷ್ಟದ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಆದರೆ ಪರಿಶ್ರಮಕ್ಕೂ ಮಿಗಿಲಾದುದು ಯಾವುದೂ ಇಲ್ಲ ಎಂಬುದನ್ನು ಅವರಿಯಬೇಕು ಎಂದರು.

ಎನ್‌ಸಿಸಿಗೆ ಸೇರುವವರ ಸಂಖ್ಯೆ ತೀರಾ ಕಡಿಮೆ

ಎನ್‌ಸಿಸಿಗೆ ಸೇರುವವರ ಸಂಖ್ಯೆ ತೀರಾ ಕಡಿಮೆ

ದೇಶದಲ್ಲಿ ಬಲಿಷ್ಠ, ಯುವ ಪರೇಡ್ ನ್ನು ಕಟ್ಟುವ ಉದ್ದೇಶದಿಂದ ಎನ್‌ಸಿಸಿ 1947 ರಿಂದ ಅಸ್ತಿತ್ವಕ್ಕೆ ಬಂತು. ಜೀವನಕ್ಕೆ ಮುಖ್ಯವಾದ ಶಿಸ್ತುನಿಂದ ವ್ಯಕ್ತಿತ್ವ ಬೆಳೆಯುತ್ತದೆ. ದೇಶಕ್ಕೆ ಚರಿತ್ರೆ ಇದ್ದು, ಚಾರಿತ್ರ್ಯ ಬೇಕಿದೆ. ಆಚಾರ್ಯರನ್ನು ಹೊಂದಿದ್ದು, ಆಚರಣೆ ಬೇಕಿದೆ. ಇಂತಹ ಆಚರಣೆ ಎನ್ ಸಿ ಸಿಯಲ್ಲಿದೆ. ಆದರೆ ಅದಕ್ಕೆ ಸೇರುವವರ ಸಂಖ್ಯೆ ಕಡಿಮೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ್, ಬೈರತಿ ಬಸವರಾಜ, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಎನ್.ಸಿ.ಸಿ.ಕಂಟಿಂಜೆಂಟ್ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+