ಅತ್ಯಾಚಾರ ಯತ್ನ : ಮೆಸ್ಕಾಂ ನೌಕರರ ಬಂಧನ

ಉಡುಪಿ, ಜು. 11 : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರು ಲೈನ್ ಮ್ಯಾನ್ ಗಳು ಪೊಲೀಸರ ಅತಿಥಿಗಳಾದ ಘಟನೆ ಉಡುಪಿಯಲ್ಲಿ ನಡೆದಿದೆ. ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಬಂಧಿತ ಆರೋಪಿಗಳನ್ನು ಪಡುಬಿದ್ರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂದಿಕೂರು ನಿವಾಸಿ ಸುರೇಂದ್ರ ದೇವಾಡಿಗ (29) ಮತ್ತು ಬ್ರಹ್ಮಾವರದ ನಿವಾಸಿ ರವಿರಾಜ್ ಕುಲಾಲ್ (32) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕರ್ತವ್ಯ ಮಾಡುತ್ತಿದ್ದ ಇಬ್ಬರು, ಪಡುಬಿದ್ರಿ ಬಳಿ ಶಾಲೆಯಿಂದ ಬರುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದರು.

MESCOM

ಬಂಧಿತ ಆರೋಪಿ ರವಿರಾಜ್‌ ಕುಲಾಲ್‌ ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಸಹ ಹಿಂದೆ ಇಂತಹುದೇ ಕೃತ್ಯಮಾಡಿ ಪಡುಬಿದ್ರಿಗೆ ವರ್ಗಾವಣೆಗೊಂಡಿದ್ದರು. ಆರೋಪಿ ಸುರೇಂದ್ರ ದೇವಾಡಿಗ ಮೊದಲು ಬಾಲಕಿಯನ್ನು ಹಿಂಬಾಲಿಸಿದ. ನಂತರ ಆಕೆಯ ಹೆಸರೇನೆಂದು ಕೇಳುತ್ತಾ ಆಕೆಯನ್ನು ಪೊದೆಯ ಬಳಿ ಹೊತ್ತುಕೊಂಡು ಹೋಗಲು ಯತ್ನಿಸುತ್ತಿದ್ದಾಗ ಸ್ಥಳೀಯರು ಬಾಲಕಿಯನ್ನು ರಕ್ಷಿಸಿದ್ದರು.

ಮನೆಗೆ ಮರಳಿಗೆ ಬಾಲಕಿ ತಂದೆಗೆ ಘಟನೆಯ ವಿವರಗಳನ್ನು ನೀಡಿದ್ದಳು. ಈ ಕುರಿತು ಆರೋಪಿಗಳನ್ನು ವಿಚಾರಿಸಿದಾಗ ಇಬ್ಬರು ಉಡಾಫೆ ಉತ್ತರವನ್ನು ನೀಡಿದ್ದರು. ಪೊಲೀಸರಿಗೆ ಬೇಕಾದರೂ ದೂರು ನೀಡಿ ಎಂದು ಗೇಲಿ ಮಾಡಿದ್ದರು. ಇದರಿಂದ ಕೋಪಗೊಂಡ ಸ್ಥಳೀಯರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿ ಪೋಷಕರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಮಾನಭಂಗ ಯತ್ನ ಮತ್ತು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+