ಟ್ವಿಟ್ಟಿಗರ ಆಕ್ರೋಶಕ್ಕೆ ಆಗುತ್ತಾ ಕೆ.ಜೆ.ಜಾರ್ಜ್ ತಲೆದಂಡ?!

Posted By:
Subscribe to Oneindia Kannada

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕೆಂಬ ಕೂಗು ಮತ್ತೊಮ್ಮೆ ಎದ್ದಿದೆ.

ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆಗ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ಮೇಲೆ ಸಿಬಿಐ ತಂಡ ಎಫ್ ಐಆರ್ ದಾಖಲಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

ಎಂಕೆ ಗಣಪತಿ ಸಾವಿನ ಪ್ರಕರಣ : ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಫ್ ಐಆರ್

ಜುಲೈ 7, 2017 ರಂದು ಮಡಿಕೇರಿಯ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆಗೂ ಮುನ್ನ
ಸ್ಥಳೀಯ ಚಾನೆಲ್ ವೊಂದರ ಮೂಲಕ ವಿಡಿಯೋ ಮಾಡಿ ಗುಪ್ತಚರ ಎಡಿಜಿಪಿ ಎಎಂ ಪ್ರಸಾದ್ ಹಾಗೂ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಹಾಗೂ ಸಚಿವ ಕೆಜೆ ಜಾರ್ಜ್ ವಿರುದ್ಧ ಆರೋಪ ಹೊರಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ತಲ್ಲಣ ಮೂಡಿಸಿತ್ತಲ್ಲದೆ, ಕೆ.ಜೆ.ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ನಾಯಕರು ಮತ್ತು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline

ಕೆಲವು ದಿನಗಳ ನಂತರ ಜಾರ್ಜ್ ರಾಜೀನಾಮೆ ನೀಡಿದರಾದರೂ ಅದು ಬೀಸುವ ದೊಡ್ಡೆಯಿಂದ ತಪ್ಪಿಸಿಕೊಳ್ಳುವ ಸರ್ಕಾರದ ಪ್ರಯತ್ನವಾಗಿತ್ತಷ್ಟೆ. ಆರೋಪ ಹೊತ್ತ ಜಾರ್ಜ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡ ಸಿದ್ದು ಸರ್ಕಾರ ಜನರ ಗೇಲಿಮಾತು ಕೇಳಬೇಕಾಯ್ತು.

ಆದರೆ ಇದೀಗ ಸಿಬಿಐ, ಜಾರ್ಜ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟಿಗರ ಆಕ್ರೋಶಕ್ಕೆ ಜಾರ್ಜ್ ತಲೆತಂಡವಾಗುತ್ತದಾ ಎಂಬುದು ಕಾದು ನೋಡಬೇಕಾದ ವಿಷಯ!

ಅಪರಾಧಿಗಳಿಗೆ ರಕ್ಷಣೆ ನೀಡುವುದನ್ನು ನಿಲ್ಲಿಸಿ!

ಅಪರಾಧಿಗಳು, ಸಮಾಜದ ಸ್ವಾಸ್ಥ್ಯ ಕದಡುವ ಹಗರಣಕಾರರು, ಭ್ರಷ್ಟರಿಗೆ ರಕ್ಷಣೆ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ಅನಿತಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ರಭೇದ!

ಕರ್ನಾಟಕದಲ್ಲಿ ಪ್ರಾಮಾಣಿಕ ಅಧಿಕಾರಿಗಳೆಂದರೆ ಅಳಿವಿನಂಚಿನಲ್ಲಿರುವ ಪ್ರಭೇದಗಳಂತೆ. ಅವರಿಗಿಲ್ಲಿ ರಕ್ಷಣೆಯೇ ಇಲ್ಲ ಎಂದು ಗಿರೀಶ್ ಆರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅವರು ಯಾಕೆ ರಾಜೀನಾಮೆ ನೀಡಬೇಕು?

ಕೆಜೆ ಜಾರ್ಜ್ ಏಕೆ ರಾಜೀನಾಮೆ ನೀಡಬೇಕು? ಅಷ್ಟಕ್ಕೂ ಅವರು ಕಾಂಗ್ರೆಸ್ಸಿಗರಿಗೆ ಎಲ್ಲ ಚುನಾವಣೆಗಳಿಗೂ ಎಟಿಎಂ ಯಂತ್ರವಿದ್ದ ಹಾಗೆ! ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಬೆಂಗಳೂರನ್ನು ಪೂರ್ತಿ ಕೊಳ್ಳೆಹೊಡೆದಿದ್ದಾರೆ ಎಂದು ಜ್ಯೋತಿ ಶೆಟ್ಟಿಗಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಳಪೆ ಕಾಮಗಾರಿ!

ಸಿದ್ರಾಮಯ್ಯ ಎಷ್ಟೇ ಮುಚ್ಚಲು ಪ್ರಯತ್ನಿಸಿದರೂ ರಸ್ತೆಗುಂಡಿ ಮತ್ತು ಜಾರ್ಜ್ ಕೇಸು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತೆ. ಕಾರಣ ಕಳಪೆಕಾಮಗಾರಿ ಎಂದು ಅಲೆಮಾರಿ ಪ್ರಸನ್ನ ಎನ್ನುವವರು ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದಾರೆ.

ಅವರಾಗಿಯೇ ರಾಜೀನಾಮೆ ನೀಡಬೇಕಿತ್ತು!

ಮುಕ್ತ ಮತ್ತು ಪ್ರಾಮಾಣಿಕ ತನಿಖೆಯಾಗಬೇಕೆಂದರೆ ಯಾರೂ ರಾಜೀನಾಮೆ ಕೇಳದಿದ್ದರೂ ಜಾರ್ಜ್ ಅವರೇ ಸ್ವತಃ ರಾಜೀನಾಮೆ ನೀಡಬೇಕು ಎಂದು ಸುಧಾಕರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಎಂದರೆ ಅಪರಾಧಿಗಳ ತಾಣ!

ಕ್ಯಾಬಿನೆಟ್ ಸಚಿವರ ಮೇಲೆ ಎಫ್ಐಆರ್ ದಾಖಲಾಗುತ್ತಿರುವುದು ಕಾಂಗ್ರೆಸ್ ಒಂದು ಅಪರಾಧಿಗಳ ತಾಣ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಅಪರಾಧಿಗಳೂ ಮಂತ್ರಿಯಾಗಬಹುದು!

ಕರ್ನಾಟಕದಲ್ಲಿ ಅಪರಾಧಿಗಳೂ ಮಂತ್ರಿಯಾಗಬಹುದು. ಎಟಿಎಂ ಜಾರ್ಜ್ ಅವರನ್ನು ಮುಖ್ಯಮಂತ್ರಿಗಳು ಸದಾ ಸಮರ್ಥಿಸಿಕೊಳ್ಳುತ್ತಾರೆ ಎಂದು ಡಾ.ಅರುಣ್ ಸೋಮಣ್ಣ ಟ್ವೀಟ್ ಮಾಡಿದ್ದಾರೆ.

ನೈತಿಕತೆಯ ಮರಣ

ಬಹುಶಃ ನ್ಯಾಯಾಲಯವೇ ಜಾರ್ಜ್ ಅವರನ್ನು ಅಪರಾಧಿ ಎಂದು ಸ್ಪಷ್ಟವಾಗಿ ಹೇಳುವವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಯುತ್ತಾರೆ! ಇದು ನಿಜಕ್ಕೂ ನೈತಿಕತೆಯ ಸಾವು ಎಂದು ಗಿರೀಶ್ ಬಿ.ಪುಟ್ಟಣ್ಣ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru-Madikeri-DySP MK Ganapati Suicide Case: Central Bureau of Investigation filed an FIR against Bengaluru Development minister K J George. Twitterians ask his resignation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ