ತುಮಕೂರು: ಜ್ಯುವೆಲ್ಲರಿ ಶಾಪ್‌ನಲ್ಲಿ 10 ಲಕ್ಷ ರೂ. ಬೆಲೆಯ ವಜ್ರ, ಚಿನ್ನಾಭರಣ ಎಗರಿಸಿದ ಇಲಿರಾಯ; ಬಿಲದಲ್ಲಿ ಸಿಕ್ಕಿತು ಖಜಾನೆ

ಸಾಮಾನ್ಯವಾಗಿ ಚಿನ್ನಾಭರಣಗಳ ಅಂಗಡಿಗೆ ಕನ್ನ ಹಾಕಲು ಖದೀಮರು ಅದೆಷ್ಟೋ ಮಾಸ್ಟರ್‌ ಪ್ಲಾನ್‌ಗಳನ್ನ ಮಾಡುತ್ತಾರೆ. ಆದರೆ, ಇಲ್ಲಿ ಅಂಗಡಿಗೆ ಯಾವುದೇ ಕಳ್ಳರು ಎಂಟ್ರಿ ಕೊಡದೆ ರಾತ್ರೋರಾತ್ರಿ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರಗಳು ಹಾಗೂ ಚಿನ್ನದ ಸರಗಳು ನಾಪತ್ತೆಯಾಗಿದೆ. ಚಿನ್ನದಂಗಡಿಯ ಬಾಗಿಲು ಮುರಿದಿರಲಿಲ್ಲ, ಬೀಗವೂ ಹಾಕಿದ ಹಾಗೆಯೇ ಇತ್ತು. ಈ ನಿಗೂಢ ಕಳ್ಳತನದ ಹಿಂದಿನ ರಹಸ್ಯವನ್ನು ಸಿಸಿಟಿವಿ ಬಿಚ್ಚಿಟ್ಟಿದೆ ನೋಡಿ. ಆಭರಣಗಳನ್ನ ಎಗರಿಸಿದ್ದು ಮನುಷ್ಯರಲ್ಲ, ಬದಲಿಗೆ ಒಂದು ಇಲಿ ಎಂಬುದು ಕೊನೆಗೂ ಬಯಲಾಗಿದೆ.

ತುಮಕೂರು ನಗರದ ಕಾಲ್‌ಟ್ಯಾಕ್ಸ್ ಸರ್ಕಲ್ ಬಳಿಯ ಬಿ.ಎಚ್. ರಸ್ತೆಯಲ್ಲಿರುವ ವಿಶ್ವಾಸ್ ಜ್ಯುವೆಲ್ಲರಿ ಶಾಪ್‌ನಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಸದ್ಯ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ.

Tumkur

10 ಲಕ್ಷ ಮೌಲ್ಯದ 50 ಗ್ರಾಂ ಆಭರಣ ನಾಪತ್ತೆ

ವಿಶ್ವಾಸ್ ಜ್ಯುವೆಲ್ಲರಿ ಶಾಪ್‌ನ ಮಾಲೀಕರು ಎಂದಿನಂತೆ ಬೆಳಗ್ಗೆ ಬಂದು ಅಂಗಡಿ ತೆರೆದು ನೋಡಿದಾಗ ಭಾರಿ ಆಘಾತ ಆಗಿತ್ತು. ಅಂಗಡಿಯ ಶೋಕೇಸ್‌ನಲ್ಲಿ ಇಟ್ಟಿದ್ದ ಸುಮಾರು 50 ಗ್ರಾಂ ತೂಕದ 10 ಬೆಲೆಬಾಳುವ ವಜ್ರದ ಉಂಗುರಗಳು ಹಾಗೂ 3 ಚಿನ್ನದ ಸರಗಳು ಕಾಣೆಯಾಗಿದ್ದವು. ಕಳುವಾದ ಆಭರಣಗಳ ಒಟ್ಟು ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು.

ಅಂಗಡಿಯ ಶಟರ್ ಅಥವಾ ಗ್ಲಾಸ್ ಮುರಿಯದೆ ಆಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕರು ಮತ್ತು ಸಿಬ್ಬಂದಿ ಕಂಗಾಲಾಗಿದ್ದರು. ಹೊರಗಿನಿಂದ ಯಾರೂ ಒಳಗೆ ಬಂದಿಲ್ಲ ಎಂದಮೇಲೆ, ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಈ ಕೃತ್ಯ ಮಾಡಿರಬಹುದಾ ಎಂಬ ಅನುಮಾನ ಕೂಡ ಮೂಡಿತ್ತು. ಪೊಲೀಸರಿಗೆ ದೂರು ನೀಡುವ ಮುನ್ನ ಒಮ್ಮೆ ಸಿಸಿಟಿವಿ ಪರಿಶೀಲಿಸೋಣ ಎಂದು ಮಾಲೀಕರು ಮುಂದಾಗಿದ್ದರು.

ಸಿಸಿಟಿವಿ ಕ್ಯಾಮೆರಾದಲ್ಲಿ ಇಲಿರಾಯನ ಕಳ್ಳತನ ಬಯಲು

ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಮಾಲೀಕರು ಹಾಗೂ ಸಿಬ್ಬಂದಿ ಒಂದು ಕ್ಷಣ ದಂಗಾಗಿದ್ದಾರೆ. ರಾತ್ರಿಯ ವೇಳೆ ಅಂಗಡಿಯೊಳಗೆ ನುಗ್ಗಿದ್ದ ಇಲಿಯೊಂದು, ಶೋಕೇಸ್‌ನಲ್ಲಿದ್ದ ವಜ್ರದ ಉಂಗುರ ಹಾಗೂ ಚಿನ್ನದ ಸರಗಳನ್ನ ಒಂದೊಂದಾಗಿಯೇ ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಹೋಗಿ ಬಿಲದೊಳಗೆ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಯಾವುದೇ ಕಳ್ಳರು ಈ ಕೆಲಸ ಮಾಡಿಲ್ಲ, ಇಲಿರಾಯನೇ ಈ ರಾಬರಿ ಮಾಡಿದ್ದಾನೆ ಎಂಬ ಸತ್ಯ ಸಿಸಿಟಿವಿಯಲ್ಲಿ ನೀಟ್‌ ಆಗಿ ಸೆರೆಯಾಗಿದೆ.

ಬಿಲವನ್ನಾ ಅಗೆದ ಸಿಬ್ಬಂದಿಗೆ ಸಿಕ್ಕಿತು ಚಿನ್ನದ ಖಜಾನೆ

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಇಲಿ ಯಾವ ಜಾಗಕ್ಕೆ ಆಭರಣಗಳನ್ನ ತೆಗೆದುಕೊಂಡು ಹೋಗಿದೆ ಎಂಬ ಜಾಡನ್ನು ಸಿಬ್ಬಂದಿ ಹಿಡಿದರು. ಅಂಗಡಿಯ ಮೂಲೆಯಲ್ಲಿದ್ದ ಇಲಿಯ ಬಿಲ ಒಂದನ್ನಾ ಪತ್ತೆಹಚ್ಚಿ, ಅದನ್ನು ಎಚ್ಚರಿಕೆಯಿಂದ ಅಗೆದು ನೋಡಿದರು. ಅಚ್ಚರಿ ಎಂಬಂತೆ, ಮೂಷಿಕರಾಜ ತನ್ನ ಬಿಲದೊಳಗೆ ಭದ್ರವಾಗಿ ಬಚ್ಚಿಟ್ಟಿದ್ದ 10 ವಜ್ರದ ಉಂಗುರಗಳು ಹಾಗೂ 3 ಚಿನ್ನದ ಸರಗಳು ಯಾವುದೇ ಹಾನಿಯಾಗದೆ ಸುರಕ್ಷಿತವಾಗಿ ಸಿಕ್ಕಿದೆ.

ಕಳುವಾಗಿದ್ದ 10 ಲಕ್ಷ ರೂ. ಮೌಲ್ಯದ ಎಲ್ಲಾ ಆಭರಣಗಳು ಬಿಲದಲ್ಲೇ ಸಿಕ್ಕಿದ್ದರಿಂದ ಜ್ಯುವೆಲ್ಲರಿ ಶಾಪ್ ಮಾಲೀಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳತನದ ಆರೋಪದಿಂದ ಸಿಬ್ಬಂದಿಯೂ ಪಾರಾಗಿದ್ದು, ಇಲಿಯ ಈ ಕಳ್ಳತನದ ಈಗ ನಗರದಾದ್ಯಂತ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+