New Railway Line: ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಮತ್ತಷ್ಟು ವೇಗ? ಜಿ. ಪರಮೇಶ್ವರ್ ಸುಳಿವು
ಬೆಂಗಳೂರು: ಕರ್ನಾಟಕ ರೈಲ್ವೆ ಮಟ್ಟಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಈ ಪೈಕಿ ನಿರ್ಮಾಣವಾಗುತ್ತಿರುವ ತುಮಕೂರು-ರಾಯದುರ್ಗ ಮತ್ತು ದಾವಣಗೆರೆವರೆಗಿನ ನೂತನ ಮಾರ್ಗದಲ್ಲಿ ಬ್ರಾಡ್‌ಗೇಜ್ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗ ಪೂರ್ಣಗೊಂಡು ಯಾವಾಗ ಓಪನ್ ಆಗುತ್ತೋ ಎಂದು ಜನ ಕಾಯುತ್ತಿದ್ದಾರೆ. ಇದೀಗ ಕಾಮಗಾರಿಗೆ ಮತ್ತಷ್ಟು ಸಿಗುವ ಸುಳಿವು ಸಿಕ್ಕಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಇಂದು ಗುರುವಾರ ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಏರ್ಪಟ್ಟಿರುವ ಗೊಂದಲ, ಬರ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡರು. ಇದೇ ವೇಳೆ ತುಮಕೂರು-ರಾಯದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕುರಿತು ಮಾತನಾಡಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿರುವ ವಿ. ಸೋಮಣ್ಣ ಅವರನ್ನು ದೆಹಲಿಯಲ್ಲಿ ಭೇಟಿಯಾಗದ್ದೆ. ಈ ವೇಳೆ ತುಮಕೂರಿನಿಂದ ರಾಯದುರ್ಗ ಮತ್ತು ದಾವಣೆಗೆರೆಗೆ ಮಾರ್ಗವಾಗಿ ಚಾಲ್ತಿಯಲ್ಲಿರುವ ರೈಲ್ವೇ ಕಾಮಗಾರಿ ಮತ್ತು ಕೆಲವೆಡೆಗಳಲ್ಲಿ ಉಂಟಾಗಿರುವ ಅಡಚಣೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಇಲ್ಲಿ ಯಾವೊಂದು ಅಡಚರಣೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತುಮಕೂರು-ದಾವಣಗೆರೆ ಮಾರ್ಗ ಕಾಮಗಾರಿ: ವಿವಿಧ ರೈಲುಗಳ ಸೇವೆ ವ್ಯತ್ಯಯ
ಈ ಮೂಲಕ ತುಮಕೂರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆ ವರೆಗೆ ನೇರ ರೈಲ್ವೆ ಲೈನ್ ಸಿದ್ಧವಾಗುತ್ತಿದೆ. ಮೇಲ್ಸೇತುವೆ, ಹಳಿ ಅಳವಡಿಕೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿವೆ. ಆಗಾಗ ಈ ಕಾಮಗಾರಿಯಿಂದ ಸಮಸ್ಯೆ ಆಗುತ್ತಿರುವುದು ವರದಿ ಆಗಿದೆ. ಈ ಸಂಬಂಧ ರೈಲ್ವೆ ಸಚಿವರು ಮತ್ತು ಡಿಸಿಎಂ ಚರ್ಚಿಸಿ ಮುಂದಿನ ಕ್ರಮ ಜರುಗಿಸುವ ಸಾಧ್ಯತೆ ಇದೆ. ಇದೇ ಬ್ರಾಡ್ ಗೇಜ್ ಕಾಮಗಾರಿ ಸುಮಾರು 16 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಮೇಲೆ ಪರಿಣಾಮ ಉಂಟು ಮಾಡಲಿದೆ. ಸೆಪ್ಟೆಂಬರ್ ಅಂತ್ಯದಿಂದ ಅಕ್ಟೋಬರ್ ಮಧ್ಯ ಸಂಚರಿಸುವ ರೈಲಗಳಲ್ಲಿ ಕೆಲವು ಭಾಗಶಃ ರದ್ದಾಗಿದ್ದು, ಒಂದರೆರಡು ರೈಲು ಸಂಪೂರ್ಣ ರದ್ದು, ನಿಯಂತ್ರಿಸಲಾಗುತ್ತಿದೆ ಎಂದು ಇತ್ತೀಚೆಗೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿ
ಎಸ್‌ಐಆರ್ ಸಂಬಂಧಿಸಿದ ಪ್ರಶ್ನೆ ಉತ್ತರಿಸಿದ ಡಿಸಿಎಂ, ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗುತ್ತಿವೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಆಕ್ಷೇಪವನ್ನು ದಾಖಲಿಸಿದೆ.
ಹಲವು ದಿನಗಳಿಂದ ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ. ಎಎಸ್ ಡಿಡಿಓ ವಿಚಾರದಲ್ಲೂ ಗೊಂದಲ ಉಂಟಾಗಿತ್ತು. ಬದುಕಿರುವವರನ್ನು ಕೂಡ ಮೃತರ ಪಟ್ಟಿಗೆ ಸೇರಿಸಲಾಗಿತ್ತು. ಮತದಾರರಿಗೆ ನೋಟೀಸ್ ನೀಡುವುದರಲ್ಲೂ ಗೊಂದಲಗಳಾಗಿವೆ. ಈಗ ಮುಂದುವರಿದು ಯಾರು ಬೇಕಾದರೂ ಚುನಾವಣಾ ಆಯೋಗಕ್ಕೆ ಫಾರ್ಮ್ 7 ಅರ್ಜಿಯನ್ನು ಸಲ್ಲಿಸಿ ಬೇರೋಬ್ಬ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಬಹುದು ಎಂಬಂತಾಗಿದೆ. ಹೀಗಾಗಿ ದೇಶ್ಯಾದ್ಯಂತ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ವಿರೋಧಿಸಿ ನಮ್ಮ ಪಕ್ಷದ ವತಿಯಿಂದ ಈಗಾಗಲೇ ದೂರನ್ನು ಸಲ್ಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುತ್ತವೆ ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು.
ಈ ಕುರಿತಾಗಿ ದೆಹಲಿಯಲ್ಲಿ ಈಗಾಗಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಗಿದೆ. ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಕುರಿತು ಪಕ್ಷ ತೀರ್ಮಾನಿಸಿದೆ. ನಮ್ಮ ವರಿಷ್ಠರ ಸೂಚನೆಯಂತೆ ಮುಂದಿನ ನಡೆಗಳನ್ನು ನಿರ್ಧರಿಸುತ್ತೇವೆ. ನಾನು ಕೂಡ ದೆಹಲಿ ಪ್ರವಾಸದ ವೇಳೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ರಾಜ್ಯದ ಅನೇಕ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ದೆಹಲಿಗೆ ಸರ್ವಪಕ್ಷ ನಿಯೋಗ
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿಗಳನ್ನು ಭೇಟಿಯಾಗಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಕುರಿತಾಗಿ ಮುಖ್ಯಮಂತ್ರಿಗಳು ಪ್ರಧಾನಿಗಳ ಕಛೇರಿಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ದಿನಾಂಕ ನಿಗದಿಯಾದ ಕೂಡಲೇ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದು ರಾಜ್ಯದ ಸ್ಥಿತಿಗತಿಯನ್ನು ಪ್ರಧಾನಿಗಳಿಗೆ ಮನನ ಮಾಡಿಕೊಡಲಿದ್ದೇವೆ ಎಂದು ಹೇಳಿದರು.
ಬರ ಅಧ್ಯಯನ ತಂಡಕ್ಕೆ ರಾಜ್ಯದ ಮಾಹಿತಿ
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಬರ ಅಧ್ಯಯನ ತಂಡಕ್ಕೆ ಕಳೆದ ಜೂನ್‌ನಿಂದ ಈವರೆಗೆ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. ಕಳೆದ ಒಂದೆರೆಡು ದಿನಗಳಿಂದ ರಾಜ್ಯದ ಕೆಲವೆಡೆಗಳಲ್ಲಿ ಸುರಿಯುತ್ತಿದೆಯಾದರೂ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂಬುದನ್ನು ತಿಳಿಸಲಾಗುವುದು ಎಂದರು.


Click it and Unblock the Notifications
