ಟ್ರೋಲ್ ಹೈಕ್ಳಿಗೆ ಆಹಾರವಾದ ಜನಾರ್ದನ ರೆಡ್ಡಿ ಪುತ್ರಿಯ ಮದುವೆ!

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 22: ಮಾಜಿ ಸಚಿವ ಗಣಿ ಧಣಿ ಜನಾರ್ದನ ರೆಡ್ಡಿ ಅವರ ಪುತ್ರಿಯ ಮದುವೆ ಆಮಂತ್ರಣ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೆಡ್ಡಿ ಮನೆ ಮೇಲೆ ದಾಳಿ ನಡೆದ ಮೇಲೂ ಇಷ್ಟೊಂದು ಅದ್ಧೂರಿ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರಲ್ಲಾ! ಇವರಿಗೆ ಎಲ್ಲಿಂದ ಇಷ್ಟೊಂದು ದುಡ್ಡು ಬಂತು ಎಂಬ ಬಗ್ಗೆ ಸಾಕಷ್ಟು ಟ್ರೋಲ್ ಗಳು ವಾಟ್ಸಪ್ , ಫೇಸ್‍ ಬುಕ್ ಗಳಲ್ಲಿ ಹರಿದಾಡುತ್ತಿವೆ. ಹಾಡಿನಲ್ಲಿ ಬರುವ ಬನ್ನಿ...ಬನ್ನಿ...ಬನ್ನಿ..ಎಂಬ ಸಾಲುಗಳಿಗೆ ಸಂದರ್ಭಕ್ಕೆ ತಕ್ಕಂತೆ ಜೋಡಿಸಿ Memes ಗಳನ್ನ ಮಾಡಲಾಗಿದೆ. [ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ!]

ಗಿಫ್ಟ್ ಬಾಕ್ಸ್ ನಂತೆ ಆಮಂತ್ರಣ ಪತ್ರಿಕೆ ತಯಾರಿಸಲಾಗಿದ್ದು, ಅದನ್ನು ತೆರೆದಾಗ ವಿಡಿಯೋ ಪ್ಲೇ ಆಗುತ್ತದೆ. ವಿಡಿಯೋದಲ್ಲಿ ಜನಾರ್ದನ ರೆಡ್ಡಿ ದಂಪತಿ, ಪುತ್ರಿ ಬ್ರಹ್ಮಣಿ ಹಾಗೂ ಅಳಿಯ ರಾಜೀವ್ ರೆಡ್ಡಿ ಸಿನಿಮೀಯ ರೀತಿಯಲ್ಲಿ ಹಾಡಿ, ಕುಣಿದು ಮದುವೆಗೆ ಬನ್ನಿ ಅಂತ ಆಮಂತ್ರಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆ ನವೆಂಬರ್ 16 ರಂದು ಹೈದರಾಬಾದ್ ಮೂಲದ ಉದ್ಯಮಿ ಪುತ್ರ ರಾಜೀವ್ ರೆಡ್ಡಿ ಜೊತೆ ಅದ್ಧೂರಿಯಾಗಿ ನೆರವೇರಲಿದೆ.

ಮದುವೆ ಸಮಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯದ ರಾಜಕೀಯ ಮುಖಂಡರು, ಬಾಲಿವುಡ್- ಸ್ಯಾಂಡಲ್ ವುಡ್‍ ನಟ ನಟಿಯರು ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಇನ್ನು ಈ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಗೆ ಟ್ರೋಲ್ ಹೈಕ್ಳು ಮಾಡಿರುವ ಕೆಲ ಟ್ರೋಲ್ ಗಳು ಇಲ್ಲಿವೆ.

ತಿಥಿ ಚಿತ್ರದ ಗಡ್ಡಪ್ಪನ ಟ್ರೋಲ್

ತಿಥಿ ಚಿತ್ರದ ಗಡ್ಡಪ್ಪನ ಟ್ರೋಲ್

ಜನಾರ್ದನ ರೆಡ್ಡಿ: ಬನ್ನಿ ಬನ್ನಿ ನನ್ನ ಮಗಳ ಮದುವೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.
ಗಡ್ಡಪ್ಪ: ಇದಕ್ಕೆ ನಾನು ಬರೋದು ಇಲ್ಲ ನನ್ ಕೈಲಿ ಆಗೂದು ಇಲ್ಲ... ಎಂದು ತಿಥಿ ಸಿನೀಮಿಯ ರೀತಿಯಲ್ಲಿ ಟ್ರೋಲ್ ಮಾಡಲಾಗಿದೆ. ['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

ಮಾಜಿ ಸಿಎಂ ಕುಮಾರಣ್ಣ-ಜನಾರ್ದನ ರೆಡ್ಡಿ

ಮಾಜಿ ಸಿಎಂ ಕುಮಾರಣ್ಣ-ಜನಾರ್ದನ ರೆಡ್ಡಿ

ರೆಡ್ಡಿ: ಕುಮಾರಣ್ಣ ವಿಷ್ಯಾ ಗೊತ್ತಾ?
ಕುಮಾರಣ್ಣ: ಹೇಳಿದ್ರೆ ತಾನೇ ಗೊತ್ತಾಗೋದು.
ರೆಡ್ಡಿ: ಜಾಗ್ವಾರ್ ಮೂವಿಗಿಂತ ನನ್ಮಗಳ ಮದುವೆ ವಿಡಿಯೋ ನೋಡಿದ್ದಾರೆ.

ಮದುವೆಗೆ ಬನ್ನಿ ಸ್ನೇಹಿತರೇ

ಮದುವೆಗೆ ಬನ್ನಿ ಸ್ನೇಹಿತರೇ

ರೆಡ್ಡಿ: ಬನ್ನಿ...ಬನ್ನಿ...ಸ್ನೇಹಿತರೇ

ಡ್ರಾಮಾ ಜೂನಿರ್ಸ್ ಫೈನಲ್ ಗೆ ಎಂಟ್ರಿ ನೀಡಿದ್ದ ಅಚಿಂತ್ಯ: ಕಿಲ ಕಿಲ ನಾನು ಬರೋಕಿಲ್ಲ.

ಶ್ರೀರಾಮುಲು-ಜನಾರ್ದನ ರೆಡ್ಡಿ ಮಾತುಕತೆ

ಶ್ರೀರಾಮುಲು-ಜನಾರ್ದನ ರೆಡ್ಡಿ ಮಾತುಕತೆ

ಜನಾರ್ದನ ರೆಡ್ಡಿ: ಹೇ ರಾಮುಲು ನನ್ ಮಗಳ ಮದುವೆ ಬಗ್ಗೆ ಪ್ರೆಸ್ ನವರು ಕೇಳ್ದಾಗ ಏನ್ ಹೇಳ್ದೆ.
ರಾಮುಲು: ಅದೇ ನಾವು ಮದ್ಯಮ ವರ್ಗ, ಮಿಡ್ಲ್ ಕ್ಲಾಸ್ ಮದುವೆ ಇದು ಅಂದೆ.
ರೆಡ್ಡಿ: ನಾವು ಕೆಳ ವರ್ಗದವರು, ಭೂಮಿ ಕೆಳಗೆ ಇರ್ತಿವಿ ಮೈನ್ಸ್ ಹೋರಗಂಟ.

ರೈಡ್ ಆದ್ರೂ ಇಷ್ಟೊಂದು ದುಡ್ಡು

ರೈಡ್ ಆದ್ರೂ ಇಷ್ಟೊಂದು ದುಡ್ಡು

ಜಗ್ಗೇಶ್: ಸಿಬಿಐ ರೈಡ್ ಆದ್ರೂ ಇಷ್ಟೊಂದು ದುಡ್ಡು ಹೇಗೆ.
ರೆಡ್ಡಿ: ನೀವು ದುಡ್ಡು ಇಲ್ಲ ಅಂದ್ರೆ ಏನ್ಮಾತೀರಾ?
ಜಗ್ಗೇಶ್: ನಾನ್ ಸ್ವಾಮಿ ಆಗ್ತೀನಿ
ರೆಡ್ಡಿ: ನಾನು ಭೂಮಿ ಅಗಿತೀನಿ...

1992 ರ ಕಾಲದಲ್ಲಿ

1992 ರ ಕಾಲದಲ್ಲಿ

ರವಿಚಂದ್ರನ್ ಹಾಗೂ ಹಂಸಲೇಖ ಸೇರಿ 1992 ರ ಕಾಲದಲ್ಲಿಯೇ ಇಂತಃ ಮದುವೆ ಆಹ್ವಾನ ಪತ್ರಿಕೆ ಮಾಡಿದ್ದಾರೆ ಗುರು.

ಪಬ್ಲಿಕ್ ಟಿವಿ ರಂಗನಾಥ್

ಪಬ್ಲಿಕ್ ಟಿವಿ ರಂಗನಾಥ್

ಪಬ್ಲಿಕ್ ಟಿವಿ ರಂಗನಾಥ್:ಇದು ಯಾರ ದುಡ್ಡು. ಇಷ್ಟೊಂದುಹಣ ಹೇಗ್ಮಾಡಿದ್ರಿ...ಒಂದೇಶಬ್ಧದಲ್ಲಿ ಹೇಳಿ.
ರೆಡ್ಡಿ: ಮೈನ್(ಗಣಿ)..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
janardhana reddy daughters marriage invitation video. Here is some trolls which are tells story about reddy daughters marriage invitation.
Please Wait while comments are loading...