ರೈಲು ಪ್ರಯಾಣಿಕರೇ ಗಮನಿಸಿ: ಈ ಮಾರ್ಗದಲ್ಲಿ ರೈಲು ವೇಳಾಪಟ್ಟಿ ಬದಲಾವಣೆ!

ಭಾರತೀಯ ರೇಲ್ವೆ ಇಡೀ ಜಗತ್ತಿನಲ್ಲೇ ದೊಡ್ಡ ಮಾರ್ಗ ಹೊಂದಿರುವ ಹಾಗೂ ಅಚ್ಚುಕಟ್ಟು ವ್ಯವಸ್ಥೆ ಹೊಂದಿರುವ ರೇಲ್ವೆ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಅದರಲ್ಲೂ ಪ್ರತಿನಿತ್ಯವೂ ಕೋಟ್ಯಂತರ ಭಾರತೀಯರು ರೈಲ್ವೆ ಪ್ರಯಾಣವನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಹೀಗೆ ಭಾರತೀಯ ಸಂಪರ್ಕ ಸಾಧನದಲ್ಲಿ ರೇಲ್ವೆ ಇಲಾಖೆ ಒಂದು ಮಹತ್ವದ ದಾರಿಯಾಗಿದೆ. ಈ ನಡುವೆ ತುರ್ತು ಕಾಮಗಾರಿ, ಮಾರ್ಗ ಬದಲಾವಣೆ ಕಾರಣಕ್ಕೆ ರೈಲು ವಿಳಂಬ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ. ರೈಲುಗಳ ವೇಳಾಪಟ್ಟಿ ಬದಲಾವಣೆ ಬಗ್ಗೆ ಮಾಹಿತಿಗೆ ಮುಂದೆ ಓದಿ.

ನೈರುತ್ಯ ರೈಲ್ವೆ ವಿಭಾಗ ವ್ಯಾಪ್ತಿಯ ಬಾಗಲಕೋಟೆ-ಮುಗಳೊಳ್ಳಿ & ಆಲಮಟ್ಟಿ-ಜಡ್ರಾಮಕುಂಟಿ ನಿಲ್ದಾಣಗಳ ಮಧ್ಯೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿ ಇರುವ ಕಾರಣ ಈ ಕೆಳಗಿನ ರೈಲುಗಳು ತಡವಾಗಿ ಪ್ರಾರಂಭ ಆಗಲಿವೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

Train Timings Has Been Changed In These Date Of April 2024 At Karnataka State

1). ಏಪ್ರಿಲ್ 12 ರಿಂದ 14 ರವರೆಗೆ ವಿಜಯಪುರದಿಂದ ಹೊರಡುವ ರೈಲು ಸಂಖ್ಯೆ 06920 ವಿಜಯಪುರ To ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು 45 ನಿಮಿಷ ತಡವಾಗಿ ಹೊರಡಲಿದೆ.

2). ಏಪ್ರಿಲ್ 12 ರಿಂದ 14 ರವರೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17330 ಎಸ್ಎಸ್ಎಸ್ ಹುಬ್ಬಳ್ಳಿ To ವಿಜಯವಾಡ ಡೈಲಿ ಎಕ್ಸ್ ಪ್ರೆಸ್ ರೈಲು 60 ನಿಮಿಷ ತಡವಾಗಿ ಹೊರಡಲಿದೆ.

ರೈಲುಗಳ ಮಾರ್ಗ ಬದಲಾವಣೆ

ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲು ಬದಲಾದ ಮಾರ್ಗದ ಮೂಲಕ ಸಂಚಾರ ನಡೆಸಲಿವೆ ಅಂತಾ ದಕ್ಷಿಣ ಮಧ್ಯ ರೈಲ್ವೆಯೂ ಪ್ರಯಾಣಿಕರಿಗೆ ಇದೀಗ ಮಹತ್ವದ ಸೂಚನೆ ನೀಡಿದೆ.

Train Timings Has Been Changed In These Date Of April 2024 At Karnataka State

1). ಏಪ್ರಿಲ್ 22 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12890 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು To ಟಾಟಾನಗರ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಎಂದು ಈ ಮೂಲಕ ಮಾಹಿತಿ ನೀಡಲಾಗಿದೆ.

2). ಏಪ್ರಿಲ್ 16, 18 ಮತ್ತು 23 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12836 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು To ಹಟಿಯಾ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲುಗಳು ನಿಯಂತ್ರಣದ ಬಗ್ಗೆ ಮಾಹಿತಿ

ಏಪ್ರಿಲ್ 10 ರಿಂದ 16 ರವರೆಗೆ ಜಲಗಾಂವ್ To ಮನ್ಮಾಡ್ ಭಾಗದ ನಡುವಿನ 3ನೇ ಮಾರ್ಗಕ್ಕೆ ಸಂಬಂಧಿಸಿದಂತೆ ಚಾಲಿಸಗಾಂವ್ ಯಾರ್ಡ್ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆ ಇಲಾಖೆ ಸೂಚನೆ ನೀಡಿದೆ.

1). ಏಪ್ರಿಲ್ 15 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ-ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ ಒಟ್ಟು 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

2). ಏಪ್ರಿಲ್ 15 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 145 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ಮಾಹಿತಿಯನ್ನ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+