ಕನಕಪುರಕ್ಕೆ ಬೆಣ್ಣೆ, ಬಿಡದಿಗೆ ಸುಣ್ಣ! ಟೌನ್‌ಶಿಪ್‌-ನೈಸ್‌ ಅಕ್ರಮದಲ್ಲಿ ಡಿಕೆಶಿ ನೇರ ಶಾಮೀಲು: ಹೆಚ್‌ಡಿಕೆ ಸ್ಫೋಟಕ ಆರೋಪ

ಬೆಂಗಳೂರು: ಕನಕಪುರದಲ್ಲಿ ಜಮೀನು ಮಾರಾಟ ಮಾಡಬೇಡಿ ಎಂದು ಹೇಳುತ್ತೀರಿ. ಆದರೆ ಬಿಡದಿಯಲ್ಲಿ ಭೂಮಿಯನ್ನು ಕಿತ್ತುಕೊಳ್ಳಲು ಬರುತ್ತೀರಿ. ಬಿಡದಿ ರೈತರು ಏನು ಪಾಪ ಮಾಡಿದ್ದರು? ಮಿಸ್ಟರ್ ಶಿವಕುಮಾರ್, ಇವತ್ತು ಬಿಡದಿ ರೈತರು ಕೃಷಿಭೂಮಿ ಹೊರಟಿದ್ದೀರಾ.. ಈ ಪಾಪಕ್ಕೆ ನೀವು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು. ಇದರಲ್ಲಿ ಎರಡು ಮಾತೇ ಇಲ್ಲ. ಅದೇ ರೀತಿ ನೈಸ್ ಯೋಜನೆ ದೇವೇಗೌಡರ ಕನಸಿನ ಕೂಸು ಎಂಬುವುದರಲ್ಲಿ ಅಸತ್ಯವಿಲ್ಲ. ಆದರೆ ಆ ಎರಡು ಕೂಸುಗಳನ್ನು ನೀವು ಹೀಗೆಲ್ಲಾ ಬೆಳೆಸಿ ಹಾಳು ಮಾಡಿದಿರಿ ಎಂಬುದು ನಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಗೊತ್ತು. ಇಡೀ ದೇಶವೇ ಈ ದರೋಡೆಯನ್ನು ನೋಡುತ್ತಿದೆ. ಇತ್ತೀಚೆಗೆ ರಾಜ್ಯ ಹೈಕೋರ್ಟ್ ಏನೇನು ಅಭಿಪ್ರಾಯ ವ್ಯಕ್ತಪಡಿಸಿದೆ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

Township-NICE Scam DK Shivakumar Directly Involved Alleges HD Kumaraswamy

ಮೊನ್ನೆ ಸದನದಲ್ಲಿ ಅತಿವಿನಯ ತೋರಿಸಿಕೊಂಡು ಭಾಷಣ ಮಾಡಿದ್ದನ್ನು ನೋಡಿದೆ. ದೇವೇಗೌಡರ ದೂರದೃಷ್ಟಿ, ಕುಮಾರಸ್ವಾಮಿ ದೂರದೃಷ್ಟಿ ಬಗ್ಗೆ ಉದ್ದುದ್ದ ಭಾಷಣ ಮಾಡಿದಿರಿ. ನಮ್ಮಿಬ್ಬರ ಕೆಲಸಗಳ ಬಗ್ಗೆ ಸದನದ ಒಳಗೆ ಹೇಳಿಕೆ ನೀಡಿದಿರಿ. ಹಾಗಿದ್ದರೂ ಹೊರಗೆ ನಿಂತು ಸಾಕ್ಷಿಗುಡ್ಡೆಗಳ ಬಗ್ಗೆ ಕೇಳುತ್ತೀರಿ! ನಿಮ್ಮ ಸಾಕ್ಷಿ ಗುಡ್ಡೆ ಕಾಣುತ್ತಿದೆಯಲ್ಲ, ನೈಸ್ ರಸ್ತೆಯಲ್ಲಿ ಮತ್ತು ಬಿಡದಿ ಟೌನ್ಶಿಪ್ ಹೆಸರಿನಲ್ಲಿ! ಇನ್ನೆಷ್ಟು ಅಕ್ರಮಗಳನ್ನು ಎಸುಗುತ್ತೀರಿ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ.ಶಿವಕುಮಾರ್? ಬೇನಾಮಿ ಕಂಪನಿಗಳನ್ನು ಸೃಷ್ಟಿ ಮಾಡಿಕೊಂಡು ಹೇಗೆ ಆ ಯೋಜನೆಯನ್ನು ಟೇಕ್ ಓವರ್ ಮಾಡಲು ಹೊರಟಿದ್ದೀರಿ ಎಂಬುದು ನನಗೆ ಗೊತ್ತಿಲ್ಲದ ವಿಷಯವಲ್ಲ. ರೈತರ ಭೂಮಿಯನ್ನು ಬೇರೆ ಕಂಪನಿಗೆ ಕೊಡಲು ರೆಡ್ ಕಾರ್ಪೆಟ್ ಹಾಕಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್? ಅಂದು ಬಿಎಂಐಸಿಪಿಗೆ ಅಧ್ಯಕ್ಷರಾಗಿ ನೀವು ಏನೆಲ್ಲ ಅಕ್ರಮಗಳು ಎಸೆಗಿದಿರಿ, ಯಾರು ಯಾರ ಜೊತೆ ಶಾಮೀಲಾಗಿ ಎಷ್ಟೆಲ್ಲಾ ದಂಧೆಗಳನ್ನು ನಡೆಸಿದಿರಿ ಎಂಬುದು ನನಗೆ ಗೊತ್ತಿದೆ.

ಚೌಕಟ್ಟು ಒಪ್ಪಂದ (ಫ್ರೇಮ್ ವರ್ಕ್ ಅಗ್ರಿಮೆಂಟ್) ಮತ್ತು ಯೋಜನಾ ತಾಂತ್ರಿಕ ಒಪ್ಪಂದವನ್ನು ಉಲ್ಲಂಘಿಸಿ ಎಷ್ಟೆಲ್ಲ ಅಕ್ರಮಗಳನ್ನು ಎಸಗಿದಿರಿ ಎಂಬುದು ಗೊತ್ತಿದೆ. ಇಂತಹ ಕೆಟ್ಟ ಯೋಗ್ಯತೆ ಹೊಂದಿರುವ ನೀವು ನನ್ನನ್ನು ಮತ್ತು ದೇವೇಗೌಡರನ್ನು ಪ್ರಶ್ನೆ ಮಾಡುವ ಧೈರ್ಯ ತೋರಿಸುತ್ತೀರಿ. ನಾಚಿಕೆಯಾಗಲ್ಲವೇ ನಿಮಗೆ ಎಂದು ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸರ್ಕಾರ ಭಂಡತನ ಪ್ರದರ್ಶನ ಮಾಡುತ್ತಿದೆ. ಬಿಡದಿ ಟೌನ್ ಶಿಪ್ ಮತ್ತು ನೈಸ್ ಯೋಜನೆಯ ಮೂಲಕ ಈ ಸರ್ಕಾರ ಖಾಸಗಿ ವ್ಯಕ್ತಿಗಳ ಜೊತೆ ಕುಮ್ಮಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ದೂರಿದರು. ಕಾಂಗ್ರೆಸ್ ನಾಯಕರು ನಮಗೆ ಎರಡು ಪ್ರಶ್ನೆ ಮುಂದಿಟ್ಟಿದ್ದಾರೆ. ಬಿಡದಿ ಟೌನ್ ಶಿಪ್ ಮತ್ತು‌ ನೈಸ್ ಯೋಜನೆ ಪಿತಾಮಹರು ಕುಮಾರಸ್ವಾಮಿ ಮತ್ತು ದೇವೇಗೌಡರು ಎಂದು ಹೇಳುತ್ತಿದ್ದಾರೆ. ಆದರೆ, ಈ ವೇದಿಕೆಯಿಂದ ಕಾಂಗ್ರೆಸ್ ನಾಯಕರಿಗೆ ನೇರ ಸವಾಲು ಹಾಕುತ್ತೇನೆ.

ಬಿಡದಿ ಟೌನ್ ಶಿಪ್ ಯೋಜನೆ ಮತ್ತು ನೈಸ್ ಯೋಜನೆಗಳ ಬಗ್ಗೆ ಏನೇನು ಆಗಿದೆ, ಶುರುವಾಗಿದ್ದೆಲ್ಲಿ? ಈಗ ಬಂದು ನಿಂತಿರುವುದು ಎಲ್ಲಿ? ಎಂಬ ಬಗ್ಗೆ ಕೂಲಂಕಶವಾಗಿ ಚರ್ಚೆ ಮಾಡಲು ತಯಾರಿದ್ದೇನೆ. ಮೊನ್ನೆ ಫ್ರೀಡಂ ಹಬ್ಬ ಮಾಡಿದರಲ್ಲಾ.. ಅಲ್ಲಿಯ ಚರ್ಚೆ ಮಾಡೋಣ. ಚರ್ಚೆ ಬಯಸುವವರು ಬಂದರೆ ನಾನು ಬರಲು ಸಿದ್ಧನಿದ್ದೇನೆ ಎಂದು ಅವರು ಚಾಲೆಂಜ್ ಮಾಡಿದರು.

ನೈಸ್ ಯೋಜನೆ ನುಂಗಲು ಹೊರಟ ಮುಖ್ಯಮಂತ್ರಿ

ಎಲ್ಲವನ್ನೂ ಸರ್ವನಾಶ ಮಾಡುತ್ತಿದೆ ಈ ಸರ್ಕಾರ. ನೈಸ್ ಭೂಮಿ ಅನ್ನು ನುಂಗಿದ್ದಾಯಿತು, ಈಗ ಬೇನಾಮಿ ಕಂಪನಿಗಳನ್ನು ಸೃಷ್ಟಿ ಮಾಡಿಕೊಂಡು ಇಡೀ ಯೋಜನೆಯನ್ನೇ ಕಬಳಿಸಲು ಹೊರಟಿದ್ದೀರಿ. ಬಿಡದಿಯಲ್ಲಿ ಫಲವತ್ತಾದ ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ. ಎರಡು ಯೋಜನೆಗಳನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಒತ್ತೆಯಿಡಲು ಹೊರಟಿದ್ದೀರಿ.

ಜನರ ರಕ್ತ, ಬೆವರು, ಅವರ ಕಷ್ಟದ ಬೆಲೆ ನಿಮಗೆ ಗೊತ್ತಾಗುವುದು ಹೇಗೆ? ಪಾರಂಪರಿಕ ಕಟ್ಟಡ ಕುಮಾರ ಕೃಪ ಅತಿಥಿ ಗೃಹವನ್ನೇ ಸರ್ವನಾಶ ಮಾಡಿದವರು ನೀವು. ಕೆಂಗಲ್ ಹನುಮಂತಯ್ಯ ನವರು ಕಟ್ಟಿದ ವಿಧಾನಸೌಧವನ್ನು ಹಾಳು ಮಾಡಲು ಹೊರಟವರು ನೀವು. ನಿಮ್ಮಂತವರಿಗೆ ರೈತರ ಕಷ್ಟಕಾರ್ಪಣ್ಯಗಳು ತಿಳಿಯುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+