ದೂಧ್‌ಸಾಗರಕ್ಕೆ ಹೋಗುವ ಪ್ರಯಾಣಿಕರೇ ಎಚ್ಚರ: ರೈಲ್ವೇ ಪೋಲೀಸರಿಂದ ಸಿಗುತ್ತೆ ಬಸ್ಕಿ ಹೊಡೆಯುವ ಶಿಕ್ಷೆ!

ಕರ್ನಾಟಕ-ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ಅದ್ಭುತ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹಾಗಂತ ನೀವೇನಾದ್ರೂ ದೂಧ್ ಸಾಗರ್ ನೋಡೋಕೆ ಹೋದ್ರೋ ಬಸ್ಕಿ ಹೊಡೆಯೋಕೆ ಸಿದ್ಧರಿರಬೇಕಾಗುತ್ತದೆ. ಹೌದು, ಭಾನುವಾರ ದೂಧ್ ಸಾಗರ್ ಜಲಪಾತ ನೋಡಲು ಹೋದವರಿಗೆ ರೈಲ್ವೆ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟಿದ್ದಾರೆ.

ಮೈನಾಪಿ ಜಲಪಾತದಲ್ಲಿ ಇಬ್ಬರು ಸಾವನ್ನಪ್ಪಿದ ದುರಂತ ಘಟನೆಯ ನಂತರ ಅಧಿಕಾರಿಗಳು ಇತ್ತೀಚೆಗೆ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳು ಮತ್ತು ಅಭಯಾರಣ್ಯಗಳಿಗೆ ಪ್ರವೇಶವನ್ನು ನಿಷೇಧಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ಪ್ರವಾಸಿಗರಿಗೆ ಈ ನಿಷೇಧದ ಬಗ್ಗೆ ತಿಳಿದಿರಲಿಲ್ಲ.

Tourists Stranded, Railway Police Punish Trekkers at Dudhsagar Waterfall

ವಾಸ್ಕೋ ಮತ್ತು ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬಂದ ಪ್ರವಾಸಿಗರು ದೂಧ್ ಸಾಗರಕ್ಕೆ ತೆರಳುವಾಗ ಅರಣ್ಯ ಅಧಿಕಾರಿಗಳು ಅವರನ್ನು ಮುಂದುವರೆಯದಂತೆ ತಡೆದರು. ಭಾನುವಾರ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗೋವಾದ ಜನಪ್ರಿಯ ದೂಧಸಾಗರ್ ಜಲಪಾತ ನೋಡಲು ಬಂದರು ಸಾಧ್ಯವಾಗಲಿಲ್ಲ, ಪೊಲೀಸರು ಪ್ರವೇಶ ನಿರಾಕರಿಸಿದ್ದರಿಂದ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು.

ಬಸ್ಕಿ ಹೊಡೆಯುವ ಶಿಕ್ಷೆ

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ದೂಧಸಾಗರ್ ಜಲಪಾತಕ್ಕೆ ಭೇಟಿಗೆ ನಿಷೇಧವಿದ್ದರು ಲೆಕ್ಕಿಸದೆ ರೈಲ್ವೆ ಹಳಿ ಮುಖಾಂತರ ಚಾರಣಕ್ಕೆ ಬಂದವರಿಗೆ ರೈಲ್ವೇ ಪೊಲೀಸರು ಶಿಕ್ಷೆ ನೀಡಿದರು. ಚಾರಣಿಗರಿಗೆ ಬಸ್ಕಿ ಹೊಡೆಯುವಂತೆ ಮಾಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಸದ್ಯ ರೈಲ್ವೆ ಪೊಲೀಸರು ಮಾಡಿದ್ದು ಸರಿಯಾ, ತಪ್ಪಾ ಎನ್ನುವ ಚರ್ಚೆ ನಡೆಯುತ್ತಿದೆ.

ಪದೇ ಪದೇ ಮನವಿ ಮಾಡಿದರು ಪ್ರವಾಸಿಗರು ಲೆಕ್ಕಿಸದೇ ರೈಲ್ವೆ ಹಳಿಯ ಮೇಲೆ ಚಾರಣಕ್ಕೆ ಬರುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಈ ರೀತಿಯ ಶಿಕ್ಷೆ ಕೊಡುವುದರಿಂದ ಉಳಿದವರು ನಿಯಮ ಮೀರಲು ಹೆದರುತ್ತಾರೆ ಎನ್ನಲಾಗಿದೆ. ಆದರೆ ಪ್ರವಾಸಿಗರಿಗೆ ಅವಮಾನ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೂಧ್‌ಸಾಗರ್ ಜಲಪಾತವು ಮಳೆಗಾಲದಲ್ಲಿ ತನ್ನ ಅದ್ಭುತ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ, ಗೋವಾದಲ್ಲಿ ಭಾರೀ ಮಳೆಯಿಂದಾಗಿ ಜಲಪಾತ ಭೋರ್ಗರೆಯುತ್ತಿದ್ದು ಅಪಾಯಕಾರಿಯಾಗಿದೆ.

ರೈಲಿನಲ್ಲಿ ಪ್ರಯಾಣ ಮಾಡುವಾಗ ದೂಧಸಾಗರ ಜಲಪಾತದ ಸೌಂದರ್ಯವನ್ನು ಆನಂದಿಸಲು ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ದೂಧ್‌ಸಾಗರ್ ಅಥವಾ ಬ್ರಗಾಂಜಾ ಘಾಟ್‌ನ ಇತರ ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಪಾಲಿಸಲು ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಂದ ಸಹಕಾರವನ್ನು ಕೋರಿದ್ದಾರೆ.

ಮಳೆ ಅಬ್ಬರ ಕಡಿಮೆಯಾದ ನಂತರ ಚಳಿಗಾಲದಲ್ಲಿ ಜಲಪಾತ ನೋಡಲು ಪ್ರವೇಶ ನೀಡಲಾಗುತ್ತದೆ. ಅದುವರೆಗೂ ನೀವು ಈ ಭಾಗದಲ್ಲಿ ಚಾರಣ ಮಾಡುವುದು ಕೂಡ ಅಪಾಯಕಾರಿ. ಜಲಪಾತ ಆಳವಿರುವುದರಿಂದ ಪ್ರವಾಸಿಗರ ಪ್ರಾಣಕ್ಕೂ ಕುತ್ತು ಬರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+