ಚಿಕ್ಕಮಗಳೂರು: ಲಕ್ಕವಳ್ಳಿ ಡ್ಯಾಂನಲ್ಲಿ ಈಜಲು ಹೋಗಿ ಪ್ರವಾಸಿ ಮರಣ
ಚಿಕ್ಕಮಗಳೂರು, ಆಗಸ್ಟ್ 11: ದಾವಣಗೆರೆಯಿಂದ ಚಿಕ್ಕಮಗಳೂರಿಗೆ ಗೆಳೆಯರೊಟ್ಟಿಗೆ ಪ್ರವಾಸಕ್ಕೆ ಬಂದ ಯುವಕನೊಬ್ಬ ಈಜಲು ಹೋಗಿ ಮುಳುಗಿ ಸಾವನ್ನಪ್ಪರುವ ಘಟನೆ ನಡೆದಿದೆ.
ಮೃತ ದುರ್ದೈವಿ ಬಸವರಾಜು (40) ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಬಲದಂಡೆ ನಾಲೆಯಲ್ಲಿ ಈಜಲು ತೆರಳಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ದಾವಣಗೆರೆ ಮೂಲದ ಬಸವರಾಜು ಐವರು ಸ್ನೇಹಿತರೊಡನೆ ಪ್ರವಾಸಕ್ಕೆ ಆಗಮಿಸಿದ್ದರು. ಲಕ್ಕವಳ್ಳಿ ಡ್ಯಾಂ ನಿಂದ ದಾವಣಗೆರೆ ನೀರು ಸರಬರಾಜಾಗುವ ಬಲ ದಂಡೆ ಕಾಲುವೆ ನೋಡಿ ಬಂದು ಡ್ಯಾಂನ ಪಕ್ಕದಲ್ಲೆ ಗೆಳೆಯರೆಲ್ಲಾ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ನೇಹಿತರು ಬೇಡವೆಂದರೂ ತಾವು ಈಜಲು ಹೋಗುವುದಾಗಿ ಬಸವರಾಜ್ ತಿಳಿಸಿ ಹೋಗಿದ್ದಾರೆ.

ಈಜಾಡುತ್ತಿದ್ದಾಗ ನೋಡ ನೋಡುತ್ತಿದ್ದಂತೆ ಬಸವರಾಜು ನೀರಿನಲ್ಲಿ ಮುಳುಗಿದ್ದಾರೆ. ಅವರು ನೀರಿನಲ್ಲಿ ಮುಳುಗಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಲಕ್ಕವಳ್ಳಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಶವಕ್ಕಾಗಿ ಶೋಧ ನಡೆಸಿದ್ದಾರೆ.












Click it and Unblock the Notifications