ಕರ್ನಾಟಕ, ಭಾರತದ ಇಂದಿನ ಸುದ್ದಿಗಳು, ತಪ್ಪದೇ ಓದಿ

ಬೆಂಗಳೂರು, ಅಕ್ಟೋಬರ್ 16 : ಬೆಂಗಳೂರು ನಗರದಲ್ಲಿ ಇಂದು ಕಟ್ಟಡ ಕುಸಿತ ದುರಂತವೊಂದು ನಡೆದಿದೆ. ಮೂರು ಅಂತಸ್ತಿನ ಕಟ್ಟಡ ಮಂಜಾನೆ ಕುಸಿದುಬಿದ್ದಿದ್ದು, 7 ಜನರು ಮೃತಪಟ್ಟಿದ್ದಾರೆ. ಮೂರು ವರ್ಷದ ಸಂಜನಾ ಎಂಬ ಮಗುವನ್ನು ರಕ್ಷಣೆ ಮಾಡಲಾಗಿದೆ.

ಸುದ್ದಿ ಎರಡು : ಕರ್ನಾಟಕದ ಶಾಸಕರಿಗೆ ಚಿನ್ನದ ಬಿಸ್ಕತ್ ಭಾಗ್ಯ ಕೈ ತಪ್ಪಿದೆ. ವಿಧಾನಸೌಧದ ವಜ್ರ ಮಹೋತ್ಸವದ ಅಂಗವಾಗಿ ಶಾಸಕರಿಗೆ ತಲಾ 50,000 ಮೌಲ್ಯದ ಚಿನ್ನದ ಬಿಸ್ಕತ್‌, ಸಿಬ್ಬಂದಿಗೆ ತಲಾ 5,000 ಮೌಲ್ಯದ ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇಂದು ಇಂತಹ ಪ್ರಸ್ತಾಪವಿಲ್ಲ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದರು.

ಸುದ್ದಿ ಮೂರು :ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 25 ಪ್ರಯಾಣಿಕರು ಅಸ್ವಸ್ಥಗೊಳ್ಳಲು ರೈಲಿನಲ್ಲಿ ನೀಡಲಾಗಿದ್ದ ಉಪಹಾರ ಕಾರಣವಲ್ಲ ಎಂದು ಕೇಂದ್ರ ರೈಲ್ವೆ ಸಮಿತಿ ಸ್ಪಷ್ಟನೆ ನೀಡಿದೆ. ರೈಲಿನಲ್ಲಿ ನೀಡಲಾಗಿದ್ದ ಉಪಹಾರದ ಗುಣಮಟ್ಟ ಸಮರ್ಪಕವಾಗಿದೆ ಎಂದು ಭಾರತೀಯ ರೈಲ್ವೆಯ ಆಂತರಿಕ ವಿಚಾರಣೆ ಸಮಿತಿ ವರದಿ ಹೇಳಿದೆ.

ಸುದ್ದಿ ನಾಲ್ಕು : ಆರುಷಿ ತಲ್ವಾರ್ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರುಷಿ ಪೋಷಕರಾದ ಡಾ. ರಾಜೇಶ್ ತಲ್ವಾರ್ ಹಾಗೂ ಅವರ ನೂಪುರ್ ತಲ್ವಾರ್ ಅವರು ಸೋಮವಾರ ದಾಸ್ನಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಪ್ರಕರಣದಲ್ಲಿ ಹೈಕೋರ್ಟ್ ಇಬ್ಬರನ್ನು ಖುಲಾಸೆಗೊಳಿಸಿತ್ತು.

ಬೆಂಗಳೂರು ಕಟ್ಟಡ ದುರಂತ

ಬೆಂಗಳೂರು ಕಟ್ಟಡ ದುರಂತ

ಬೆಂಗಳೂರಿನಲ್ಲಿ ನಡೆದ ಕಟ್ಟಡ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ 5 ಲಕ್ಷ ಪರಿಹಾರ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ದುರಂತದಲ್ಲಿ ಮೃತಪಟ್ಟ ಅಶ್ವಿನಿ ಮತ್ತು ಶರವಣ ದಂಪತಿಯ ಸಂಜನಾ (3) ಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಟ್ಟಗಾಯಗಳಾಗಿರುವ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.

ಆರುಷಿ ತಲ್ವಾರ್ ಪೋಷಕರು ಬಿಡುಗಡೆ

ಆರುಷಿ ತಲ್ವಾರ್ ಪೋಷಕರು ಬಿಡುಗಡೆ

ಪುತ್ರಿ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರುಷಿ ತಲ್ವಾರ್ ಪೋಷಕರಾದ ಡಾ. ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಅವರು ಸೋಮವಾರ ದಾಸ್ನಾ ಜೈಲಿನಿಂದ ಬಿಡುಗಡೆಗೊಂಡರು. ಹೈಕೋರ್ಟ್ ಆದೇಶ ಪ್ರತಿ ಜೈಲಿಗೆ ತಲುಪುವುದು ತಡವಾದ ಕಾರಣ ಬಿಡುಗಡೆ ವಿಳಂಬವಾಯಿತು.

ತೇಜಸ್ ಪ್ರಕರಣಕ್ಕೆ ಆಹಾರ ಕಾರಣವಲ್ಲ

ತೇಜಸ್ ಪ್ರಕರಣಕ್ಕೆ ಆಹಾರ ಕಾರಣವಲ್ಲ

ಗೋವಾ-ಮುಂಬೈ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನೀಡುವ ಆಹಾರದ ಗುಣಮಟ್ಟ ಉತ್ತಮವಾಗಿದೆ. ಇಬ್ಬರು ಮಕ್ಕಳು ಬೋಗಿಯೊಳಗೆ ವಾಂತಿ ಮಾಡಿದ್ದರಿಂದ ಗಾಳಿ ಕಲುಷಿತಗೊಂಡು ಇತರೆ ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ ಎಂದು ಕೇಂದ್ರ ರೈಲ್ವೆ ಸಮಿತಿ ಹೇಳಿದೆ. ಭಾನುವಾರ ರೈಲಿನ 24 ಪ್ರಯಾಣಿಕರು ಅಸ್ವಸ್ಥಗೊಂಡಿದ್ದರು. ಇದಕ್ಕೆ ಆಹಾರದ ಗುಣಮಟ್ಟ ಕಾರಣ ಎಂಬ ಸುದ್ದಿ ಹಬ್ಬಿತ್ತು.

ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪಷ್ಟನೆ

ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪಷ್ಟನೆ

ವಿಧಾನಸೌಧದ ವಜ್ರ ಮಹೋತ್ಸವದ ಸವಿನೆನಪಿಗಾಗಿ ಶಾಸಕರಿಗೆ ತಲಾ 50 ಸಾವಿರ ರೂ. ಮೌಲ್ಯದ ಚಿನ್ನದ ಬಿಸ್ಕತ್, ವಿಧಾನಸೌಧದ ಸಿಬ್ಬಂದಿಗೆ ತಲಾ 5 ಸಾವಿರ ರೂ. ಮೌಲ್ಯದ ಬೆಳ್ಳಿತಟ್ಟೆ ಉಡುಗೊರೆಯಾಗಿ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಇಂತಹ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೀಪಾವಳಿಗೆ ಸಿದ್ಧತೆ

ದೀಪಾವಳಿಗೆ ಸಿದ್ಧತೆ

ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ಸಿದ್ಧತೆ ಆರಂಭಗೊಂಡಿದೆ. ಸೋಮವಾರ ಕೋಲ್ಕತ್ತಾದಲ್ಲಿ ದೀಪಾವಳಿಗೆ ಲಡ್ಡು ತಯಾರು ಮಾಡುತ್ತಿರುವುದು ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು. (ಪಿಟಿಐ ಚಿತ್ರ)

ಕಾಂಗ್ರೆಸ್‌ ಅಧ್ಯಕ್ಷರು ಬದಲು

ಕಾಂಗ್ರೆಸ್‌ ಅಧ್ಯಕ್ಷರು ಬದಲು

2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್ ಮಹತ್ವದ ಬದಲಾವಣೆ ಮಾಡಿದೆ. 15 ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಸೋಮವಾರ ಎಐಸಿಸಿ ಈ ಕುರಿತು ಆದೇಶ ಹೊರಡಿಸಿದೆ.

ಹೇಮಮಾಲಿನಿ ಜೀವನ ಚರಿತ್ರೆ ಬಿಡುಗಡೆ

ಹೇಮಮಾಲಿನಿ ಜೀವನ ಚರಿತ್ರೆ ಬಿಡುಗಡೆ

ಬಾಲಿವುಡ್ ನಟಿ ಹೇಮಮಾಲಿನಿ ಅವರ ಜೀವನ ಚರಿತ್ರೆ 'ಬಿಯಾಂಡ್ ದಿ ಡ್ರೀಂ ಗರ್ಲ್' ಪುಸ್ತಕವನ್ನು ನಟಿ ದೀಪಿಕಾ ಪಡುಕೋಣೆ ಬಿಡುಗಡೆ ಮಾಡಿದರು. ಸ್ಟಾರ್ ಡಸ್ಟ್ ಸಂಪಾದಕ ಮತ್ತು ನಿರ್ಮಾಪಕ ರಾಮ್ ಕಮಲ್ ಮುಖರ್ಜಿ ಈ ಪುಸ್ತಕ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+