ಕರ್ನಾಟಕದಲ್ಲಿ ಅತಿ ಹೆಚ್ಚು ಸೊಂಕಿತರಿರುವ ಟಾಪ್ 10 ಜಿಲ್ಲೆಗಳಿವು
ಬೆಂಗಳೂರು, ಮೇ 7: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಹರಡಿದವರ ಸಂಖ್ಯೆ 700ರ ಗಡಿ ದಾಟಿದೆ. ಇಂದು 12 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ 21 ಜಿಲ್ಲೆಗಳಿಗೆ ಕೊರೊನಾ ಒಕ್ಕರಿಸಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಚಿತ್ರದುರ್ಗ ಹಾಗೂ ಕೊಡಗು ಜಿಲ್ಲೆಗಳು ಅತಿ ಕಡಿಮೆ ಕೊರೊನಾ ಸೋಂಕಿತರನ್ನು ಹೊಂದಿವೆ. 14 ಜಿಲ್ಲೆಗಳಲ್ಲಿ ಎರಡಕ್ಕಿಯನ್ನು ದಾಟಿದೆ. 30 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 366 ಜನ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ.
ದಾವಣಗೆರೆ, ಕಲಬುರಗಿ, ಬಾದಾಮಿಯಲ್ಲಿ ಇಂದು ತಲಾ 3 ಕೊರೊನಾ ಕೇಸ್
ಕರ್ನಾಟಕದಲ್ಲಿ ಅತಿ ಹೆಚ್ಚು ಕೊರೊನಾ ಸೊಂಕಿತರನ್ನು ಹೊಂದಿರುವ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ.

ಅತಿ ಹೆಚ್ಚು ಪ್ರಕರಣಗಳ ಜಿಲ್ಲೆಗಳು
ಬೆಂಗಳೂರು ನಗರ (156), ಮೈಸೂರು (88), ಬೆಳಗಾವಿ (72), ಕಲಬುರಗಿ (67), ಬಾಗಲಕೋಟೆ (51) ಜಿಲ್ಲೆಗಳು ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿವೆ. ನಂಬರ್ ಒನ್ ಸ್ಥಾನದಲ್ಲಿ ಇರುವ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಹೆಚ್ಚಿನ ಸಾವು ಸಂಭವಿಸಿದೆ. ಬೆಂಗಳೂರಿನ 6 ಸೋಂಕಿತರು ಕೊರೊನಾದಿಂದ ಮರಣ ಹೊಂದಿದ್ದಾರೆ. ಕಲಬುರಗಿಯಲ್ಲಿಯೂ 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಟಾಪ್ 10 ಜಿಲ್ಲೆಗಳು
ಬೆಂಗಳೂರು ನಗರದಲ್ಲಿ 156, ಮೈಸೂರಿನಲ್ಲಿ 88, ಬೆಳಗಾವಿಯಲ್ಲಿ 72, ಕಲಬುರಗಿಯಲ್ಲಿ 67, ಬಾಗಲಕೋಟೆಯಲ್ಲಿ 51 ವಿಜಯಪುರದಲ್ಲಿ 48, ದಾವಣಗೆರೆಯಲ್ಲಿ 47, ಮಂಡ್ಯದಲ್ಲಿ 28, ಬೀದರ್‌ನಲ್ಲಿ 22, ದಕ್ಷಿಣ ಕನ್ನಡದಲ್ಲಿ 22 ಸೋಂಕಿತರು ಇದ್ದಾರೆ. ಇವು ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಟಾಪ್ 10 ಜಿಲ್ಲೆಗಳಾಗಿವೆ. ವಿಜಯಪುರ, ದಕ್ಷಿಣ ಕನ್ನಡ ಹಾಗೂ ದಾವಣಗೆರೆಯಲ್ಲಿ ತಲಾ ಮೂರು ಮಂದಿ ಸಾವನಪ್ಪಿದ್ದಾರೆ.
ಕೊರೊನಾ: ರಾಮನಗರದಲ್ಲಿ ಆರ್ಯ ವೈಶ್ಯ ಸಮಾಜದಿಂದ ರಕ್ತದಾನ

ಕಡಿಮೆ ಕೇಸ್ ಹೊಂದಿರುವ ಜಿಲ್ಲೆಗಳು
ಕೊಡಗು, ಚಿತ್ರದುರ್ಗ, ಹಾವೇರಿ, ಗದಗ, ಉಡುಪಿ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳು ಅತಿ ಕಡಿಮೆ ಕೊರೊನಾ ಕೇಸ್‌ಗಳನ್ನು ಹೊಂದಿವೆ. ಈ ಜಿಲ್ಲೆಗಳಲ್ಲಿ ಒಂದಕ್ಕಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚಿತ್ರದುರ್ಗ ಹಾಗೂ ಕೊಡಗು ಕೇವಲ ಒಬ್ಬ ಸೋಂಕಿತನನ್ನು ಹೊಂದಿವೆ. ಹಾವೇರಿಯಲ್ಲಿ 2 ಹಾಗೂ ಉಡುಪಿಯಲ್ಲಿ 3 ಪ್ರಕರಣಗಳು ಈವರೆಗೆ ಕಂಡು ಬಂದಿವೆ.

ಕೊರೊನಾ ಈ ಜಿಲ್ಲೆಗಳಿಗೆ ಬಂದಿಲ್ಲ
ಕರ್ನಾಟಕದ ಜಿಲ್ಲೆಗಳಲ್ಲಿ 21 ಜಿಲ್ಲೆಗಳಿಗೆ ಕೊರೊನಾ ವೈರಸ್ ಸೋಂಕು ಹರಡಿದೆ. ವಿಶ್ವದ ತುಂಬ ಕೊರೊನಾ ಹಬ್ಬಿದರೂ, ಈವರೆಗೆ ಕರ್ನಾಟಕದ ಕೆಲವು ಜಿಲ್ಲೆಗಳು ಕೊರೊನಾದಿಂದ ದೂರ ಇವೆ. ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೋಲಾರ, ಕೊಪ್ಪಳ ಜಿಲ್ಲೆಗಳಲ್ಲಿ ಈವರೆಗೆ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.