ಟಿಪ್ಪು ಜಯಂತಿ:ಸರ್ಕಾರ ಸೇರು,ಪ್ರತಿಪಕ್ಷ ಬಿಜೆಪಿ ಸವ್ವಾಸೇರು!

ಬೆಂಗಳೂರು, ನವೆಂಬರ್ 10: ಪರ, ವಿರೋಧದ ನಡುವೆ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಒಂದೆಡೆ ಬಿಜೆಪಿ ಟಿಪ್ಪು ಜಯಂತಿ ಆಚರಣೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರೆ ಇನ್ನೊಂದೆಡೆ ಕಾಂಗ್ರೆಸ್ ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ ಎಂದು ಹಠ ಹಿಡಿದಿವೆ. ಈ ಎರಡು ಪಕ್ಷಗಳ ನಡುವಿನ ತಿಕ್ಕಾಟದಲ್ಲಿ ಜೆಡಿಎಸ್ ಯಾವುದೇ ಬೇಡ ಎಂದು ತಟಸ್ಥ ನಡೆಯನ್ನು ತೋರುತ್ತಿದೆ.

ಟಿಪ್ಪು ಜಯಂತಿ ವಿರೋಧಿಸಿ ಬೆಂಗಳೂರು, ಚಿತ್ರದುರ್ಗ, ಕೊಡಗು, ರಾಮನಗರ, ನೆಲಮಂಗಲ, ತುಮಕೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ. ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕೊಡಗಿನಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ.

Tipu Jayanti celebrating across the state:LIVE

ಮುನ್ನೆಚ್ಚರಿಕೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಇನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಯಾಗಿದೆ. ಚಿತ್ರದುರ್ಗದಲ್ಲಿ ಏಳು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳನ್ನು ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ.

Nov 10, 2018, 2:21 pm IST

ಟಿಪ್ಪು ಸುಲ್ತಾನ್ ಒಬ್ಬ ಅಪ್ಪಟ ಕನ್ನಡಿಗ-ಸತೀಶ್ ಜಾರಕಿಹೊಳಿ
Nov 10, 2018, 2:18 pm IST

ಟಿಪ್ಪು ಸುಲ್ತಾನ್‌ಗೆ ತನ್ನದೇ ಆದ ಇತಿಹಾಸವಿದೆ, ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಬದ್ಧವಾಗಿದೆ-ಡಿಕೆ ಶಿವಕುಮಾರ್
Nov 10, 2018, 1:57 pm IST

ಅಗತ್ಯ ಬಿದ್ದರೆ ದೆಹಲಿಯಲ್ಲೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ- ರೋಷನ್ ಬೇಗ್
Nov 10, 2018, 1:52 pm IST

ಸಮಾಜವನ್ನು ಛಿದ್ರ ಮಾಡುವುದು ಬಿಜೆಪಿಯವರು, ನಾವಲ್ಲ- ಸಿದ್ದರಾಮಯ್ಯ
Nov 10, 2018, 1:50 pm IST

ದೇಶವನ್ನು ಪ್ರೀತಿಸದ ಎಲ್ಲರೂ ಮತಾಂಧರು- ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ಹೇಳಿಕೆ
Nov 10, 2018, 1:49 pm IST

ಡಿಕೆ ಶಿವಕುಮಾರ್ ಭಾಷಣ ವೇಳೆ ಜೈಕಾರ ಕೂಗಿದ ಸಾರ್ವಜನಿಕರು
Nov 10, 2018, 1:38 pm IST

ಬಾದಾಮಿಯಲ್ಲಿ ಟಿಪ್ಪು ಜಯಂತಿಗೆ ನೀರಸ ಪ್ರತಿಕ್ರಿಯೆ
Nov 10, 2018, 1:37 pm IST

ಟಿಪ್ಪು ಸುಲ್ತಾನ್ ದೇಶಕ್ಕಾಗಿ ಮಕ್ಕಳನ್ನೇ ತ್ಯಾಗ ಮಾಡಿದ್ದಾನೆ-ಡಿಕೆಶಿ
Nov 10, 2018, 1:29 pm IST

ಟಿಪ್ಪು ಸುಲ್ತಾನ್ ಭಾರತದ ಆಸ್ತಿ, ಮತಕ್ಕಾಗಿ ನಾವು ಟಿಪ್ಪು ಜಯಂತಿ ಆಚರಿಸುತ್ತಿಲ್ಲ-ಡಿಕೆ ಶಿವಕುಮಾರ್
Nov 10, 2018, 1:16 pm IST

ಯಾರನ್ನು ಮೆಚ್ಚಿಸಲು ಟಿಪ್ಪು ಜಯಂತಿ ಮಾಡುತ್ತಿಲ್ಲ, ನಾನು ರಾಮನಗರ, ಬಳ್ಳಾರಿ ಜಿಲ್ಲಾಸಚಿವ ಅಲ್ಲಿ ಕಾರ್ಯಕ್ರಮಕ್ಕೆ ಹೋಗಬೇಕಿತ್ತು, ಸ್ನೇಹಿತರ ಒತ್ತಡಕ್ಕೆ ಇಲ್ಲೇ ಉಳಿದೆ-ಡಿಕೆ ಶಿವಕುಮಾರ್
Nov 10, 2018, 1:14 pm IST

ಕೊಡಗಿನಲ್ಲಿ ಅಷ್ಟೊಂದು ಪ್ರತಿಭಟನೆ ಮಾಡ್ತಿದೀರಾ, ಪ್ರವಾಹ ಬಂದಾಗ ಹಣ ಬಿಡುಗಡೆ ಮಾಡಿದ್ದೀರಾ-ಎಚ್‌ಡಿ ರೇವಣ್ಣ
Nov 10, 2018, 1:13 pm IST

ಅವನ್ಯಾರೋ ಸಿದ್ದರಾಮಯ್ಯ ಮತಾಂಧ ಎಂದು ಹೇಳಿದ್ದಾರೆ ನಾವು ಟಿಪ್ಪು ಆಚರಣೆ ಮಾತ್ರ ಮಾಡಿಲ್ಲ, ಅದರ ಜೊತೆಗೆ 13 ಜಯಂತಿಗಳನ್ನು ಆಚರಿಸಿದ್ದೇವೆ- ಸಿದ್ದರಾಮಯ್ಯ
Nov 10, 2018, 1:09 pm IST

ಟಿಪ್ಪು ಜಯಂತಿ ವಿರೋಧಿಸಿದ 56 ಜನರು ವಶಕ್ಕೆ
Nov 10, 2018, 1:07 pm IST

ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರ ಬಂಧನ
Nov 10, 2018, 1:02 pm IST

ಪೊಲೀಸರ ಜೊತೆ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಾಗ್ವಾದ
Nov 10, 2018, 1:02 pm IST

ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ
Nov 10, 2018, 1:02 pm IST

ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಗೈರು
Nov 10, 2018, 1:02 pm IST

ಸಚಿವ ಡಿಕೆ ಶಿವಕುಮಾರ್ ಟಿಪ್ಪು ಜಯಂತಿ ಉದ್ಘಾಟನೆ
Nov 10, 2018, 1:02 pm IST

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುತ್ತಿರುವ ಟಿಪ್ಪು ಜಯಂತಿ
Nov 10, 2018, 1:01 pm IST

ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+