Tiger Claw: ನಟ ಜಗ್ಗೇಶ್‌ಗೆ ಬಿಗ್ ರಿಲೀಫ್ ನೀಡಿ ಹೈಕೋರ್ಟ್
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕದಲ್ಲಿ ಹುಲಿ ಉಗುರು ಧರಿಸಿದವರ ವಿರುದ್ಧ ಅರಣ್ಯಾಧಿಕಾರಿಗಳು ಸಮರ ಸಾರಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಮತ್ತು ನಟ ಜಗ್ಗೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅವರಿಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
ಹುಲಿ ಉಗುರು ಧರಿಸಿದ್ದರ ಬಗ್ಗೆ ಜಗ್ಗೇಶ್ ಅವರ ಹೇಳಿಕೆ ವಿಡಿಯೋ ಆಧರಿಸಿ ಅರಣ್ಯಾಧಿಕಾರಿಗಳು ಅವರ ಮನೆ ಶೋಧಿಸಿದ್ದರು. ಉಲಿ ಉಗುರು ಪೆಂಡೆಂಟ್ ಅನ್ನು ವಶಕ್ಕೆ ಪಡೆದಿದ್ದು, ನೋಟಿಸ್ ಜಾರಿ ಮಾಡಿದ್ದರು. ಮನೆ ಶೋಧಿಸಿದ ಅರಣ್ಯಾಧಿಕಾರಿಗಳಿಗಳ ಕ್ರಮ ಪ್ರಶ್ನಿಸಿ ಜಗ್ಗೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅರಣ್ಯಾಧಿಕಾರಿಗಳ ನೋಟಿಸ್‌ಗೆ ತಡೆ ನೀಡಿ ಸೋಮವಾರ ಆದೇಶಿಸಿದೆ.

ಇತ್ತೀಚೆಗೆ ಹುಲಿ ಉಗುರಿನ ಧರಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಜಗ್ಗೇಶ್ ಜಾರಿ ಮಾಡಿದ್ದರು. ಈ ನೋಟಿಸ್ ರದ್ದುಪಡಿಸಬೇಕು ಮತ್ತು ತಮ್ಮ ಮನೆ ಶೋಧ ನಡೆಸಿರುವುದನ್ನು ಕಾನೂನು ಬಾಹಿರ ಕ್ರಮ ಎಂದು ಘೋಷಿಸಬೇಕು ಕೋರಿ ನಟ ಜಗ್ಗೇಶ್ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಂಚಾರ ಅರಣ್ಯ ತಂಡ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಅರ್ಜಿಯಲ್ಲಿ ಅವರು ಪ್ರತಿವಾದಿ ಮಾಡಿದ್ದರು.
ಅ.25ರಂದು ನೋಟಿಸ್, ಅಂದೆ ಮನೆ ಶೋಧ
ಹುಲಿ ಉಗುರು ಧರಿಸಿದ್ದರ ಬಗ್ಗೆ ಬೆಂಗಳೂರಿನ ಅರಣ್ಯಾಧಿಕಾರಿಗಳು ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡಿ ಎಂದು ಸೂಚಿಸಿ ಜಗ್ಗೇಶ್ ಅವರಿಗೆ ಕಳೆದ ಅಕ್ಟೋಬರ್ 25 ರಂದು ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅಲ್ಲದೇ ಅಂದೇ ನಟ ಜಗ್ಗೇಶ್ ಮಲ್ಲೇಶ್ವರಂ ನಿವಾಸಕ್ಕೆ ಭೇಟಿ ನೀಡಿ ಅಧಿಕಾರಿಗಳು ಶೋಧಿಸಿದ್ದರು. ಮನೆಯನ್ನೆಲ್ಲ ತಡಕಾಡಿ ಹುಲಿ ಉಗುರು ವಶಕ್ಕೆ ಪಡೆದಿದ್ದರು.
ಅರಣ್ಯಾಧಿಕಾರಿಗಳ ಈ ಕ್ರಮ ಪ್ರಶ್ನಿಸಿ ಜಗ್ಗೇಶ್ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಜಗ್ಗೇಶ್ ಅವರ ಮನವಿ ಪುರಸ್ಕರಿಸಿದೆ. ಅರಣ್ಯಾಧಿಕಾರಿಗಳಿಗೆ ಹಿನ್ನಡೆ ಆಗಿದೆ.












Click it and Unblock the Notifications