ಬೆಂಗಳೂರಿನ ಮೂವರಲ್ಲಿ ಬ್ರಿಟನ್‌ನ ಹೊಸ ಕೊರೊನಾವೈರಸ್ ಪತ್ತೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಬೆಂಗಳೂರು, ಡಿಸೆಂಬರ್ 29: ಬ್ರಿಟನ್‌ನಿಂದ ಹಿಂದಿರುಗಿದ ಆರು ಜನರಲ್ಲಿ ಇಂದು ಹೊಸ ರೂಪಾಂತರ ಕೊರೊನಾವೈರಸ್ ಪತ್ತೆಯಾಗಿ ಸುದ್ದಿಯಾಗಿತ್ತು. ಈ ಆರು ಪ್ರಕರಣಗಳಲ್ಲಿ ಮೂರು ಕರ್ನಾಟಕದಲ್ಲಿ ಪತ್ತೆಯಾಗಿದೆ.
ಹೌದು, ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಸ್ಪಷ್ಟಪಡಿಸಿದ್ದು, ಯುಕೆಯಿಂದ ಹಿಂದಿರುಗಿದ್ದ ಮೂವರಲ್ಲಿ ಈ ಹೊಸ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಾಗಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಗುರುತಿಸಿದ್ದೇವೆ ಮತ್ತು ಅವರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಜೊತೆಗೆ ಆರೋಗ್ಯವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಬ್ರಿಟನ್‌ನ ಈ ಹೊಸ ಕೊರೊನಾವೈರಸ್ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮೂರು, ಹೈದರಾಬಾದ್‌ನ ಸಿಸಿಎಂಬಿಯಲ್ಲಿ 2 ಮತ್ತು ಪುಣೆಯ ಎನ್‌ಐವಿಯಲ್ಲಿ ಒಬ್ಬರಲ್ಲಿ ಪತ್ತೆಯಾಗಿದೆ.

ಈಗಾಗಲೇ ಕೇಂದ್ರ ಸರ್ಕಾರವು ಬ್ರಿಟನ್‌ಗೆ ತಾತ್ಕಾಲಿಕವಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ್ದು, ವಿದೇಶದಿಂದ ಯಾರೇ ಬಂದರೂ ಪರೀಕ್ಷೆ ಕಡ್ಡಾಯವಾಗಿದೆ. ಈಗಾಗಲೇ ಭಾರತ ಸೇರಿದಂತೆ 50ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಹಾರಾಟ ನಿಲ್ಲಿಸಿವೆ.












Click it and Unblock the Notifications