Leopard cubs: ಮೈಸೂರು ಜಮೀನಲ್ಲಿ ಚಿರತೆ ಮರಿಗಳು ಪತ್ತೆ, ಒಂದು ಅಪರೂಪದ ಮರಿ: Video
ಮೈಸೂರು, ಡಿಸೆಂಬರ್ 14: ಬೆಂಗಳೂರು ಸೇರಿದಂತೆ ಕಾಡಂಚಿನ ಪ್ರದೇಶಗಳಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುವುದು, ಮನುಷ್ಯರ ಮೇಲೆ ಇನ್ನಿಲ್ಲದಂತೆ ದಾಳಿ ಮಾಡಿ ಹಾವಳಿ ಇಡುವುದು ಸಾಮಾನ್ಯ. ಆದರೆ ಇಲ್ಲೊಂದು ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ. ಆದರೆ ಇದಲ್ಲೇನು ವಿಶೇಷತೆ ಅಂತಿರಾ? ವಿಶೇಷತೆ ಇದೆ. ಪತ್ತೆಯಾದ ಚಿರತೆ ಮರಿಗಳ ಪೈಕಿ ಒಂದು ಅಪರೂಪ ಚಿರತೆ ಮರಿ ಪತ್ತೆಯಾಗಿದೆ ಎಂಬುದೇ ವಿಶೇಷ.
ಹೌದು, ಮೈಸೂರಿನ ಆಯರಹಳ್ಳಿ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಜಮೀನಿನ ರೈತರಿಗೆ ಸಿಕ್ಕಿವೆ. ಆ ಚಿರತೆ ಮರಿಗಳನ್ನು ರೈತರು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೂರು ಚಿರತೆ ಮರಿಗಳ ಪೈಕಿ ಎರಡು ಸಾಮಾನ್ಯ ಬಣ್ಣದಾದರೆ ಒಂದು ಅಪರೂಪದ ಕಪ್ಪು ಬಣ್ಣದ ಚಿರತೆ ಮರಿ ಪತ್ತೆ ಆಗಿದೆ. ಈ ಅಪರೂಪದ ಚಿರತೆ ಮರಿ ಕಂಡು ಇದನ್ನು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಂದಿನಂತೆ ಕಬ್ಬಿನ ಗದ್ದೆಗೆ ಬಂದಿದ್ದ ರೈತರು ಚಿರತೆ ಮರಿಗಳ ಕಿರುಚಾಟ ಕಂಡು ಬೆಚ್ಚಿ ಬಿದ್ದಿದ್ದಾರೆ. ನಂತರ ಮರಿಗಳ ತಾಯಿ ಚಿರತೆ ಇಲ್ಲದ್ದನ್ನು ಕಂಡು ಮೂರು ಮರಿಗಳನ್ನು ರಕ್ಷಿಸಿದ್ದಾರೆ. ಒಂದು ಬಾಕ್ಸ್ ನಲ್ಲಿ ಒಂದೊಂದೆ ಚಿರತೆ ಮರಿಗಳನ್ನು ರೈತರು ರಕ್ಷಣೆ ಮಾಡಿದ ವಿಡಿಯೋ ನೀವು ನೋಡಬಹುದು. ಈ ವಿಡಿಯೋ ಅನ್ನು ಪರಿಸರ ಪರಿವಾರ ಇನ್ಸ್‌ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ.
ಅರಣ್ಯ ಅಧಿಕಾರಿಗಳಿಗೆ ಮರಿಗಳ ಹಸ್ತಾಂತರ
ಮೊದಲು ಎರಡು ಸಾಮಾನ್ಯ ಬಣ್ಣದ ಚಿರತೆ ಮರಿಗಳನ್ನು ಇಡುವ ರೈತರು, ಇದು ಅಪರೂಪದ ಚಿರತೆ ಮರಿ ಎನ್ನುತ್ತಲೇ ಕಪ್ಪು ಬಣ್ಣದ ಚಿರತೆ ಮರಿಯನ್ನು ಆ ಬಾಕ್ಸ್‌ನಲ್ಲಿಡುವ ದೃಶ್ಯಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ಮೂರು ಮರಿಗಳನ್ನು ರಕ್ಷಣೆ ಮಾಡಿರುವ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಿಗಳನ್ನು ಒಪ್ಪಿಸಿದ್ದಾರೆ.

ಕರ್ನಾಟಕದ ವಿವಿಧ ಕಡೆಗಳಲ್ಲಿ ಈ ರೀತಿ ಚಿರಿತೆ ಮರಿಗಳ ಪತ್ತೆ ಘಟನೆ ಆಗಾಗ ನಡೆಯುತ್ತಲೇ ಇರುತ್ತವೆ. ಇದರಲ್ಲೇನು ಎನ್ನುವ ಪ್ರಶ್ನೆ ಕೆಲವರಿಗೆ ಮೂಡಬಹುದು. ಇದರಲ್ಲಿ ವಿಶೇಷವೆಂದರೆ ಸಿಕ್ಕಿರುವ ಮೂರು ಚಿರತೆ ಮರಿಗಳಲ್ಲಿ ಎರಡು ಸಾಮಾನ್ಯ ಬಣ್ಣದ್ದಾರೆ. ಮತ್ತೊಂದು ಮರಿ ಮಾತ್ರ ಕಪ್ಪು (Black panther) ಬಣ್ಣದ್ದಾಗಿದೆ. ಈ ಕಪ್ಪು ಚಿರತೆ ಮರಿ ಅಪರೂಪ, ಎಲ್ಲ ಕಾಡುಗಳಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ ಎನ್ನಲಾಗುತ್ತಿದೆ.
ಅಳಿವಿನಂಚಿನ ಕಪ್ಪು ಬಣ್ಣದ ಹುಲಿ
ಭಾರತದ ಮಟ್ಟಿಗೆ ಕಪ್ಪು ಬಣ್ಣದ ಬ್ಲಾಕ್ ಪ್ಯಾಂಥರ್/ ಕಪ್ಪು ಚಿರತೆ ಅಳಿವಿನಂಚಿನ ಹುಲಿಯಾಗಿದೆ. ಇವುಗಳ ಸಂಖ್ಯೆಯಲ್ಲಿ ಇಳಿಕೆ ಆಗಿದ್ದು, ಅವು ಕಾಣಿಸುವುದೇ ಅಪರೂಪ. ಅಲ್ಲೊಂದು ಇಲ್ಲೊಂದು ಕಾಣಸಿಗುತ್ತವೆ. ಇಂತಹ ಹೊತ್ತಿನಲ್ಲಿ ಕಪ್ಪು ಬಣ್ಣದ ಚಿರತೆ ಮರಿ ಸಿಕ್ಕಿರುವುದಕ್ಕೆ ಅರಣ್ಯಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.











Click it and Unblock the Notifications