BC Patil: ಬಿ.ಸಿ. ಪಾಟೀಲ್ ಅಳಿಯ ಯಾರು? ಆತ್ಮ**ಗೆ ಶರಣಾಗಿದ್ದು ಯಾಕೆ?
ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಸಂಪಾದಿಸಿ, ನಂತರ ಶಾಸಕರಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಕೂಡ ಪಡೆದಿದ್ದ ಬಿ.ಸಿ. ಪಾಟೀಲ್ ಅವರ ಕುಟುಂಬಕ್ಕೆ ಇಂದು ಭೀಕರ ಸುದ್ದಿ ಎದುರಾಗಿದೆ. ಅಂದಹಾಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಅಳಿಯ ಅಂದ್ರೆ ಮಗಳ ಗಂಡ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಹೀಗೆ ಆಗಲು ಕಾರಣ ಏನು? ಬನ್ನಿ ತಿಳಿಯೋಣ, ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.
12 ವರ್ಷಗಳ ಹಿಂದೆ ಬಿ.ಸಿ.ಪಾಟೀಲ್ ಮಗಳ ಜೊತೆ ಮದುವೆ ಆಗಿದ್ದ ದಾವಣಗೆರೆ ತಾಲೂಕಿನ ಕತ್ತಲಗೇರಿ ಗ್ರಾಮದ ನಿವಾಸಿ ಪ್ರತಾಪ್ ಕುಮಾರ್ ಕೆ.ಜಿ. ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿ.ಸಿ. ಪಾಟೀಲ್ ಅವರ ಹಿರಿಯ ಪುತ್ರಿ ಸೌಮ್ಯಾ ಅವರನ್ನು ಮದುವೆ ಆಗಿದ್ದ ಪ್ರತಾಪ್ ಕುಮಾರ್ ಕೆ.ಜಿ. ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಬಿ.ಸಿ. ಪಾಟೀಲ್ ಮನೆ ಅಳಿಯ ಆಗಿದ್ದ ಪ್ರತಾಪ್ ಕುಮಾರ್ ಕೆ.ಜಿ. ಅವರು, ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಎಲ್ಲಾ ವ್ಯವಹಾರ ನೋಡಿಕೊಳ್ತಾ ಇದ್ದರಂತೆ.

ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ?
ಮದುವೆ ಆದ ನಂತರ ಹಿರೇಕೆರೂರಿಗೆ ಬಂದು ಮೃತ ಪ್ರತಾಪ್ ಕುಮಾರ್ ಕೆ.ಜಿ. ಅವರು ಬಿಸಿ ಪಾಟೀಲ್ ಅವರ ಕುಟುಂಬದ ಜೊತೆಗೆ ವಾಸ ಇದ್ದರಂತೆ. ಅಲ್ಲದೆ ಬಿಸಿ ಪಾಟೀಲ್ ಅವರ, ಎಲ್ಲಾ ರಾಜಕೀಯ ಕೆಲಸಗಳನ್ನ ನಿರ್ವಹಣೆ ಮಾಡ್ತಾ ಇದ್ದರು ಎಂಬ ಮಾಹಿತಿ ಸಿಗುತ್ತಿದೆ. ಈ ನಡುವೆ ಇಂದು ಹೆದ್ದಾರಿ ಸಮೀಪ ಆತ್ಮಹತ್ಯೆಗೆ ಶರಣಾಗಿರುವ ಆರೋಪವು ಕೇಳಿಬಂದಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಮತ್ತೊಂದು ಕಡೆ ಈ ಘಟನೆಯ ಬೆನ್ನಲ್ಲೇ ಬಿಸಿ ಪಾಟೀಲ್ ಕುಟುಂಬಕ್ಕೆ ತೀವ್ರ ಆಘಾತ ಎದುರಾಗಿದೆ.
ಬಿಸಿ ಪಾಟೀಲ್ & ವಿಜಯೇಂದ್ರ ಭೇಟಿ
ಮತ್ತೊಂದು ಕಡೆ ಅಳಿಯನ ಸಾವಿನ ಸುದ್ದಿ ತಿಳಿದು, ಶಿವಮೊಗ್ಗಕ್ಕೆ ತೆರಳಿದ ಬಿ.ಸಿ. ಪಾಟೀಲ್ ಅವರಿಗೆ ಈಗ ಕುಟುಂಬದ ಸದಸ್ಯರು ಜೊತೆಯಾಗಿದ್ದಾರೆ. ಹಿರೇಕೆರೂರಿನ ಬಿ.ಸಿ. ಪಾಟೀಲ್ ಅವರ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಸ್ಥಳೀಯ ನಾಯಕರು ಕೂಡ ಸಾಂತ್ವನ ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ, ರೇಣುಕಾಚಾರ್ಯ & ಸ್ಥಳೀಯ ಬಿಜೆಪಿ ನಾಯಕರು ಹಾಗೂ ಮುಖಂಡರು ಇದೀಗ ಬಿಸಿ ಪಾಟೀಲ್ ಅವರಿಗೆ ಸಾಂತ್ವನ ಹೇಳಿದ್ದಾರೆ.












Click it and Unblock the Notifications