ಅರಣ್ಯ ಇಲಾಖೆಯಲ್ಲಿ 800 ಹುದ್ದೆ ಭರ್ತಿ, ಕಾಂಗ್ರೆಸ್ ಹೇಳಿದ್ದೇನು?
ನಿರುದ್ಯೋಗ ನಿವಾರಣೆಗೆ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. ಆದರೂ ಕೆಲಸ ಸಿಗುತ್ತಿಲ್ಲ & ದಿನದಿಂದ ದಿನಕ್ಕೆ ನಿರುದ್ಯೋಗ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಇದೀಗ ಇದೇ ನಿರುದ್ಯೋಗದ ವಿಚಾರ ಕಾಂಗ್ರೆಸ್ & ಬಿಜೆಪಿ ನಡುವೆ ದೊಡ್ಡ ತಿಕ್ಕಾಟಕ್ಕೆ ಕೂಡ ದಾರಿ ಮಾಡಿಕೊಟ್ಟಿದೆ. ಹಾಗಾದ್ರೆ ಅಸಲಿಗೆ ಆಗಿದ್ದೇನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಯಾವುದೇ ವಿಚಾರ ಇದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೊದಲು ಫೈಟಿಂಗ್ ಶುರು ಆಗುತ್ತೆ. ಅದರಲ್ಲೂ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬಂದಂತೆ ಬಿಜೆಪಿ & ಕಾಂಗ್ರೆಸ್ ನಡುವೆ ಮಾತಿನ ಮಹಾಯುದ್ಧ ಆರಂಭವಾಗಿದೆ. ಒಂದು ಕಡೆ ಬಿಜೆಪಿ ಶ್ರೀರಾಮ ಮಂದಿರ ಮತ್ತಿತರ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ ಕೂಡ ಬಿಜೆಪಿಯ ವಿರುದ್ಧ ಹೊಸ ಹೊಸ ಅಸ್ತ್ರ ಪ್ರಯೋಗ ಮಾಡ್ತಿದೆ. ಈಗ, ನಿರುದ್ಯೋಗ ಅಸ್ತ್ರ ಪ್ರಯೋಗ ಮಾಡಿದೆ ಕಾಂಗ್ರೆಸ್.

800 ಹುದ್ದೆ ಭರ್ತಿಗೆ ಕ್ರಮ
ಹೌದು, ಹಿಂದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ಖಾಲಿ ಹುದ್ದೆ ಭರ್ತಿ ಬಗ್ಗೆ ಹೇಳಿಕೆ ನೀಡಿದ್ದರು. ಸುಮಾರು 800 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಈಗ ಅದೇ ವಿಚಾರ ಮುಂದಿಟ್ಟುಕೊಂಡು, ಬಿಜೆಪಿ ವಿರುದ್ಧ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಸುಮಾರು 4000 ಹುದ್ದೆ ಖಾಲಿ ಇದ್ದು ಈ ಪೈಕಿ 800 ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿರುವ ಬಗ್ಗೆ ಅರಣ್ಯ ಸಚಿವರು ತಿಳಿಸಿದ್ರು. ಹಾಗಾದ್ರೆ ಕಾಂಗ್ರೆಸ್ ಈ ವಿಚಾರ ಪ್ರಸ್ತಾಪ ಮಾಡಿ ಈಗ ಹೇಳಿರುವುದು ಏನು ಗೊತ್ತೆ?
ಬಿಜೆಪಿ ಅವಧಿಯಲ್ಲಿ ಖಾಲಿ ಇರುವ...
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ಅವಧಿಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಿಂತ ಹುದ್ದೆಗಳನ್ನು ಮಾರಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ ತೋರಿಸಲಾಗಿತ್ತು! ಚುನಾವಣೆಗೂ ಮುನ್ನ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ನಮ್ಮ ವಾಗ್ದಾನದಂತೆ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅರಣ್ಯ ಇಲಾಖೆಯಲ್ಲಿ 800 ಹುದ್ದೆಗಳಿಗೆ ನೇಮಕಾತಿಗೆ ಕ್ರಮ ಕೈಗೊಳ್ಳುವ ಮೂಲಕ ಸಚಿವ @eshwar_khandre ಅವರು ಇಲಾಖೆಯ ಆಡಳಿತ ಯಂತ್ರವನ್ನು ಚುರುಕುಗೊಳಿಸುತ್ತಿದ್ದಾರೆ.' ಎಂದಿದೆ ಕಾಂಗ್ರೆಸ್
ಬಿಜೆಪಿ ಅವಧಿಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಿಂತ ಹುದ್ದೆಗಳನ್ನು ಮಾರಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ ತೋರಿಸಲಾಗಿತ್ತು!
— Karnataka Congress (@INCKarnataka) January 11, 2024
ಚುನಾವಣೆಗೂ ಮುನ್ನ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ನಮ್ಮ ವಾಗ್ದಾನದಂತೆ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಅರಣ್ಯ… pic.twitter.com/wxELfORj0l
ಜೋರಾಗುತ್ತಿದೆ ಕಾಂಗ್ರೆಸ್ VS ಬಿಜೆಪಿ ಫೈಟ್
ಒಟ್ನಲ್ಲಿ ಕಾಂಗ್ರೆಸ್ & ಬಿಜೆಪಿ ನಡುವೆ ಕರ್ನಾಟಕ ರಾಜಕೀಯ ಅಖಾಡದಲ್ಲಿ ಕಿಚ್ಚು ಹೊತ್ತಿದ್ದು. ಕಿಚ್ಚು ತಣ್ಣಗಾಗಲು ಲೋಕಸಭೆ ಚುನಾವಣೆ ಮುಗಿಯಬೇಕು. ಅಲ್ಲಿಯ ತನಕ, ಇಬ್ಬರ ನಡುವೆ ಇದೇ ರೀತಿ ಫೈಟಿಂಗ್ ಮುಂದುವರಿದು ಭರ್ಜರಿ ಡೈಲಾಗ್ ಕೇಳಬೇಕಾಗಿ ಬರಬಹುದು ಅಂತಾರೆ ಜನ. ಈ ಮೂಲಕ ಕೆಲ ತಿಂಗಳು ಬಾಕಿ ಇರುವಾಗ ಕರ್ನಾಟಕದಲ್ಲಿ, ಲೋಕಸಭೆ ಚುನಾವಣೆ ಅಖಾಡ ರಂಗೇರಿದೆ. ಹಾಗೇ ತಿಕ್ಕಾಟ ಮತ್ತಷ್ಟು ಜೋರಾಗುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications