ರಾಕಿಭಾಯ್ ಯಶ್ ಶ್ರೀರಾಮ ಮಂದಿರದ ಬಗ್ಗೆ ಹೇಳಿದ್ದೇನು?

ಶತಕೋಟಿ ಹಿಂದೂಗಳ ಕನಸು ನಿನ್ನೆ ಈಡೇರಿದ್ದು, ಅದ್ಧೂರಿಯಾಗಿ ಅಯೋಧ್ಯೆ ಭೂಮಿಗೆ ಶ್ರೀರಾಮನ ಆಗಮನ ಆಗಿದೆ. ನಿನ್ನೆ ಶ್ರೀರಾಮ ಮಂದಿರ ಉದ್ಘಾಟನೆ ಆಗಿದೆ. ಹೀಗಿದ್ದಾಗಲೇ ಸಂಭ್ರಮ ಕಣ್ತುಂಬಿಕೊಳ್ಳಲು ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್‌ನಿಂದ ದೊಡ್ಡ ದೊಡ್ಡ ನಟ & ನಟಿಯರೇ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ನಟ ಯಶ್ ಅವರಿಗೆ, ಆಹ್ವಾನ ಇದ್ದರೂ ಬಂದಿಲ್ಲ ಎಂಬ ಮಾತು ಹರಿದಾಡಿತ್ತು. ಆದರೆ ಶ್ರೀರಾಮನ ಬಗ್ಗೆ ಇದೀಗ ನಟ ಯಶ್ ಏನ್ ಹೇಳಿದ್ದಾರೆ ಗೊತ್ತೆ?

ದೇಶಕ್ಕೆ ದೇಶವೇ ರಾಮನ ಹೆಸರಿನಲ್ಲಿ ಮಿಂದು ಹೋಗಿದ್ದು, ದೀಪ ಬೆಳಗಿಸಿ ಸಂಭ್ರಮಿಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ನಿನ್ನೆ ಮೇಳೈಸಿತ್ತು. ಇದೇ ವೇಳೆ ನಟ ಯಶ್ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಯಾಕೆ..? ಎಂಬ ಬಗ್ಗೆ ಚರ್ಚೆ ಜೋರಾಗಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅದರ ಜೊತೆಯಲ್ಲೇ ನಟ ಯಶ್ ಅವರು ಶ್ರೀರಾಮ ಗುಣಗಾನ ಮಾಡಿದ್ದಾರೆ. ಹಾಗಾದರೆ ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಆಗಿ ಮಿಂಚಿದ್ದ ನಟ ಯಶ್ ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಹೇಳಿದ್ದು ಏನು ಗೊತ್ತೆ?

This How The KGF Star Yash Reacted Over The Lord Ram Mandir Inauguration At Ayodhya

ಮರ್ಯಾದ ಪುರುಷನ ಬಗ್ಗೆ ಯಶ್...

ಹೌದು, ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹಲವಾರು ಬಾಲಿವುಡ್ ನಟ & ನಟಿಯರು ಹಾಜರಿದ್ದರು. ಇಷ್ಟು ಮಾತ್ರವಲ್ಲದೆ ಭಾರತದ ವಿವಿಧ ಸಿನಿ ರಂಗದ ನಟ ಮತ್ತು ನಟಿಯರು ಹಾಜರಿದ್ದರು. ಅದೇ ರೀತಿ ಕನ್ನಡಿಗ ಯಶ್ ಅವರು ಕೂಡ ಕಾರ್ಯಕ್ರಮಕ್ಕೆ ಹೋಗ್ತಾರೆ ಎನ್ನಲಾಗಿತ್ತು. ಆದರೆ ಅದು ನೆರವೇರಿಲ್ಲ, ಹೀಗಿದ್ದಾಗ ನಟ ಯಶ್ ಗೈರಾಗಿದ್ದು ಏಕೆ? ಎಂಬ ಪ್ರಶ್ನೆ ಮೂಡಿರುವಾಗಲೇ ನಟ ಯಶ್ ಈಗ ಮರ್ಯಾದ ಪುರುಷ ಶ್ರೀರಾಮನ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಶ್ರೀರಾಮನ ಬಗ್ಗೆ ಯಶ್ ಹೇಳಿದ್ದೇನು?

ಅಂದಹಾಗೆ ಈಗ ವಿಶೇಷವಾಗಿ ಟ್ವೀಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನಿಗೆ ನಮನ: ಧಾರ್ವಿುಕ ಜೀವನದ ದ್ಯೋತಕ ಉದಾಹರಣೆ ಮೂಲಕ ಮುನ್ನಡೆಸು, ಸಂಬಂಧಗಳಿಗೆ ಪೂಜ್ಯಭಾವನೆ, ಪ್ರತಿಕೂಲತೆಯಲ್ಲೂ ದೃಢತೆ ಮತ್ತು ಮಿತಿ ಇಲ್ಲದ ಸಹಾನುಭೂತಿ. ಇದು ನಮಗೆಲ್ಲರಿಗೂ ನಿಜಕ್ಕೂ ಮಹಾಕಾವ್ಯದ ದಿನವಾಗಿದೆ. ಜೈ ಶ್ರೀ ರಾಮ್, ಎಂದು ನಟ ಯಶ್​ ಅವರು ಸ್ಪೆಷಲ್ ಟ್ವೀಟ್ ಮಾಡಿದ್ದಾರೆ. ಹಾಗೇ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಸಿನಿಮಾ ಶೂಟಿಂಗ್‌ನಲ್ಲಿ ಇರುವ ಕಾರಣ, ಅನಿವಾರ್ಯವಾಗಿ ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನಲಾಗಿದೆ.

ಯಶ್-19 ಅಬ್ಬರ ಬಲು ಜೋರು

'ಕೆಜಿಎಫ್-1' ತನ್ನ ಕೆಪಾಸಿಟಿ ತೋರಿಸಿತ್ತು, ನಂತರ 2022ರಲ್ಲಿ 'ಕೆಜಿಎಫ್-2' 1000 ಕೋಟಿ ಕ್ಲಬ್ ಸೇರಿ ಅಬ್ಬರಿಸಿತ್ತು. ಕೆಜಿಎಫ್-2 ಬಳಿಕ ಯಶ್ ಅವರ ಯಾವುದೇ ಸಿನಿಮಾಗಳು ಅನೌನ್ಸ್ ಆಗಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಸಖತ್ ಕುತೂಹಲದಿಂದ ಕಾಯ್ತಾ, ಯಶ್-19 ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದರು. ಹೀಗಿದ್ದಾಗ ಸರಿಯಾಗಿ ಒಂದೂವರೆ ತಿಂಗಳ ಹಿಂದಷ್ಟೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಭರ್ಜರಿ ಘೋಷಣೆ ಹೊರಡಿಸಿದ್ದರು ರಾಕಿಂಗ್ ಸ್ಟಾರ್. ಹೀಗೆ, ಯಶ್-19 ಸಿನಿಮಾಗೆ 'ಟಾಕ್ಸಿಕ್' ಎಂಬ ಟೈಟಲ್ ಇಡಲಾಗಿತ್ತು.

This How The KGF Star Yash Reacted Over The Lord Ram Mandir Inauguration At Ayodhya

ಯಶ್-19 'ಟಾಕ್ಸಿಕ್' ಫಸ್ಟ್ ಲುಕ್‌ನ ನೋಡುತ್ತಿದ್ದರೆ, ನಟ ಯಶ್ ಬೇರೆ ಏನೋ ದೊಡ್ಡದಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣ ರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಈ ಸಮಯಕ್ಕೆ ನಟ ಯಶ್ ಅವರು ಶ್ರೀರಾಮ ಮಂದಿರದ ಬಗ್ಗೆಯೂ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+