ಈ ಶಾಸಕರ ವಿರುದ್ಧ ಮಹಿಳಾ ದೌರ್ಜನ್ಯ ಕೇಸ್ ಗಳಿವೆ!
ಬೆಂಗಳೂರು, ಏಪ್ರಿಲ್ 20: ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ.
ಅಸೋಸಿಯೇಷನ್ ಡೆಮಾಕ್ರಾಟಿಕ್ ರಿಫರ್ಮ್ಸ್ ವಿಶ್ಲೇಷಣೆಯಂತೆ ದೇಶದ ಸಂಸದರು, ಶಾಸಕರು ಸಲ್ಲಿಸಿರುವ 4,896ಕ್ಕೂ ಅಧಿಕ ಅಫಿಡವಿಟ್ ನಂತೆ 4,845ಕ್ಕೂ ಅಧಿಕ ಮಂದಿ ವಿರುದ್ಧ ಕೇಸುಗಳಿವೆ.

ಸಂಸದರು ಸಲ್ಲಿಸಿರುವ 776 ಅಫಿಡವಿಟ್ ಗಳಲ್ಲಿ 768 ಮಂದಿ ಹಾಗೂ 4120 ಶಾಸಕರ ಪೈಕಿ 4077 ಶಾಸಕರ ವಿರುದ್ಧ ಪ್ರಕರಣಗಳಿವೆ.
ದೇಶದ 1580 ಸಂಸದರು ಹಾಗೂ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 48 ಮಂದಿ ಮಾತ್ರ ಮಹಿಳಾ ದೌರ್ಜನ್ಯ ಕೇಸ್ ಎದುರಿಸುತ್ತಿದ್ದೇವೆ ಎಂದು ನಮೂದಿಸಿದ್ದಾರೆ.
ಮಹಿಳಾ ದೌರ್ಜನ್ಯ ಕೇಸ್ ಎದುರಿಸುತ್ತಿರುವವರ ಪೈಕಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಸಂಸದ/ಶಾಸಕರಿದ್ದಾರೆ. ಮಹಾರಾಷ್ಟ್ರದಲ್ಲಿ 12, ಪಶ್ಚಿಮ ಬಂಗಾಲದಲ್ಲಿ 11, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ 5 ಮಂದಿ ತಮ್ಮ ವಿರುದ್ಧ ಮಹಿಳಾ ದೌರ್ಜನ್ಯ ಕೇಸ್ ಗಳಿವೆ ಎಂದು ಘೋಷಿಸಿದ್ದಾರೆ.
ಪಕ್ಷಾವಾರು ಲೆಕ್ಕಾಚಾರ: ಬಿಜೆಪಿ ಸಂಸದರು/ಶಾಸಕರು 12, ಶಿವಸೇನಾ 7, ಎಐಟಿಸಿ 6 ಸಂಸದ/ಶಾಸಕರು ತಮ್ಮ ವಿರುದ್ಧ ಮಹಿಳಾ ದೌರ್ಜನ್ಯ ಕೇಸ್ ಗಳಿವೆ ಎಂದು ಘೋಷಿಸಿದ್ದಾರೆ.
ಕಳೆದ ವರ್ಷ 5 ವರ್ಷಗಳಲ್ಲಿ ತಮ್ಮ ವಿರುದ್ಧ ಮಹಿಳಾ ದೌರ್ಜನ್ಯ ಕೇಸ್ ಗಳುಳ್ಳ 18 ಸ್ವತಂತ್ರ ಅಭ್ಯರ್ಥಿಗಳು ಲೋಕಸಭೆ/ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ವಿಧಾನಸಭೆಗೆ ಸುಮಾರು 100ಕ್ಕೂ ಮಂದಿ ಸ್ಪರ್ಧಿಸಿದ್ದಾರೆ.












Click it and Unblock the Notifications