ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರಿದ ಪ್ರಮುಖರು ಇವರು
ಬೆಂಗಳೂರು, ಏಪ್ರಿಲ್ 21: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿದ್ದು, ಹಲವಾರು ನಾಯಕರು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಅವರ ವಿವರ ಇಲ್ಲಿದೆ.
ಮೊದಲಿಗೆ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಆನಂದ್ ಮಾಳಗಿ ಅವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಅದರಂತೆ ರಾಯಭಾಗದಲ್ಲಿ ಕಾಂಗ್ರೆಸ್ ತೊರೆದ ಪ್ರದೀಫ್ ಮಾಳಗಿ ಅವರು ಜೆಡಿಎಸ್ ಸೇರಿದ್ದಾರೆ. ಸವದತ್ತಿ ಎಲ್ಲಮ್ಮ ಕ್ಷೇತ್ರದಲ್ಲಿ ಸೌರವ್ ಅನಂದ ಚೋಪ್ರಾ ಅವರು ಕೂಡ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ಅಲ್ಲದೆ ಬಾಲಕೋಟೆಯಿಂದ ಡಾ. ದೇವರಾಜ ಪಾಟೀಲ್ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಅದರಂತೆ ಬಸವನ ಬಾಗೇವಾಡಿಯಲ್ಲಿ ಸೋಮನಗೌಡ ಪಾಟೀಲ್, ಜೇವರ್ಗಿಯಲ್ಲಿ ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ, ಶಹಪುರದಲ್ಲಿ ಗುರುಲಿಂಗಪ್ಪಗೌಡ, ಯಾದಗಿರಿಯಲ್ಲಿ ಎಬಿ ಮಾಲಕರೆಡ್ಡಿ, ಬೀದರ್‌ನಲ್ಲಿ ಸೂರ್ಯಕಾಂತ ನಾಗರಪಳ್ಳಿ ಅವರು ಜೆಡಿಎಸ್‌ಗೆ ಪಕ್ಷಾಂತರಗೊಂಡಿದ್ದಾರೆ.
ಇನ್ನು ಕೊಪ್ಪಳದಿಂದ ಚಂದ್ರಶೇಖರ್, ನವಲಗುಂದದಲ್ಲಿ ಕಾಳಪ್ಪ ನಾಗಪ್ಪ ಗಡ್ಡಿ, ಹಳಿಯಾಳದಲ್ಲಿ ಎಸ್‌ಎಲ್ ಗೋಟ್ನೇಕರ್, ಕಾರವಾರದಲ್ಲಿ ಚೈತ್ರ ಕೊಟ್ಟರ್, ಕುಮಟಾದಲ್ಲಿ ಸೂರಜ್ ಸೋನಿ ನಾಯಕ್, ಹಾನಗಲ್‌ನಲ್ಲಿ ಮನೋಹರ್ ತಾಹಸೀಲ್ದಾರ್, ಹಗರಿಬೊಮ್ಮನಹಳ್ಳಿಯಲ್ಲಿ ನೇಮಿರಾಜ್ ನಾಕಯ್, ಬಳ್ಳಾರಿ ನಗರದಲ್ಲಿ ಅನಿಲ್ ಲಾಡ್, ಕೂಡ್ಲಿಗಿಯಲ್ಲಿ ಕೋಡಿಹಳ್ಳಿ ಭೀಮಪ್ಪ, ಚಿತ್ರದುರ್ಗದಲ್ಲಿ ರಘು ಆಚಾರ್, ಹೊಸದುರ್ಗದಲ್ಲಿ ಎಂ ತಿಪ್ಪೇಸ್ವಾಮಿ, ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದಲ್ಲದೆ ಮೂಡಿಗೆರೆಯಲ್ಲಿ ಎಂಪಿ ಕುಮಾರಸ್ವಾಮಿ, ಕಡೂರಿನಲ್ಲಿ ವೈಎಸ್‌ವಿ ದತ್ತಾ, ಬೆಂಗಳೂರು ದಕ್ಷಿಣದಲ್ಲಿ ರಾಜಗೋಪಲ ರೆಡ್ಡಿ, ಅರಸೀಕೆರೆಯಲ್ಲಿ ಎನ್‌ಆರ್ ಸಂತೋಷ್, ಅರಕಲಗೂಡಿನಲ್ಲಿ ಎ ಮಂಜು, ಮಂಗಳೂರು ನಗರ ಉತ್ತರದಲ್ಲಿ ಮೋಯ್ದಿನ್ ಬಾವಾ, ವರುಣಾದಲ್ಲಿ ಡಾ.ಭಾರತಿ ಶಂಕರ್ ಅವರು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ.












Click it and Unblock the Notifications