ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲ!
ಬೆಂಗಳೂರು,ಡಿಸೆಂಬರ್ 22: I.N.D.I. ಮೈತ್ರಿಕೂಟದಲ್ಲಿ ಕಿಚಡಿ ಪಕ್ಷಗಳು ಲೋಕಸಭಾ ಚುನಾವಣೆಗೂ ಮುನ್ನವೇ ಛಿದ್ರವಾಗಿವೆ. ಇದರಲ್ಲಿ ಪ್ರಧಾನಿ ಅಭ್ಯರ್ಥಿಗಳು ಆಗುವವರಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲ ಎಂದು ರಾಜ್ಯ ಬಿಜೆಪಿ ಹೇಳಿದೆ.
I.N.D.I. ಮೈತ್ರಿಕೂಟದಲ್ಲಿ ಕಿಚಡಿ ಪಕ್ಷಗಳು ಲೋಕಸಭಾ ಚುನಾವಣೆಗೂ ಮುನ್ನವೇ ಛಿದ್ರವಾಗಿವೆ. ಇದರಲ್ಲಿ ಪ್ರಧಾನಿ ಅಭ್ಯರ್ಥಿಗಳು ಆಗುವವರಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಇಲ್ಲ:
— BJP Karnataka (@BJP4Karnataka) December 22, 2023
▪️ಮಲ್ಲಿಕಾರ್ಜುನ್ ಖರ್ಗೆಗೆ ಕ್ಷೇತ್ರವಿಲ್ಲ
▪️ಪ್ರಿಯಾಂಕಾ ವಾದ್ರಾಗೆ ಕ್ಷೇತ್ರವಿಲ್ಲ
▪️ರಾಹುಲ್ ಗಾಂಧಿಗೆ ಕೇರಳದಲ್ಲೂ ಕ್ಷೇತ್ರವಿಲ್ಲ
▪️ಸೋನಿಯಾ ಗಾಂಧಿ…
▪️ಮಲ್ಲಿಕಾರ್ಜುನ್ ಖರ್ಗೆಗೆ ಕ್ಷೇತ್ರವಿಲ್ಲ
▪️ಪ್ರಿಯಾಂಕಾ ವಾದ್ರಾಗೆ ಕ್ಷೇತ್ರವಿಲ್ಲ
▪️ರಾಹುಲ್ ಗಾಂಧಿಗೆ ಕೇರಳದಲ್ಲೂ ಕ್ಷೇತ್ರವಿಲ್ಲ
▪️ಸೋನಿಯಾ ಗಾಂಧಿ ಸ್ಪರ್ಧಿಸುವುದೇ ಇಲ್ಲ

ಇಂಡಿ ಕೂಟದಲ್ಲಿ ಒಗ್ಗಟ್ಟು ಇಲ್ಲ, ಪ್ರಧಾನಿ ಅಭ್ಯರ್ಥಿಯೂ ಇಲ್ಲ.ನಿಗಮ ಮಂಡಳಿ ವಿಚಾರ ಕಾಂಗ್ರೆಸ್ ಕ್ಕೆ ಕಲೆಕ್ಷನ್‌ನ ಹೊಸ ಮಾರ್ಗ ತೆರೆದಿದೆ. ಬಿಕ್ಕಟ್ಟಿನ ನಡುವೆ ಶಾಸಕರಿಂದಲೂ ಕಾರ್ಯಕರ್ತರಿಂದಲೂ ಇಡುಗಂಟು ಮಾತ್ರ ಬಿಡದೇ ಬರುತ್ತಿರುವ ಕಾರಣ ಬಿಕ್ಕಟ್ಟು ಬಿಕ್ಕಟ್ಟಾಗಿಯೇ ಇರಲಿ ಎಂಬುದು ಕಾಂಗ್ರೆಸ್ ನಾಯಕರ ಮಹದಾಸೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಲೂಟಿ ಮಾಡಲೆಂದೇ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಆದಾಯದ ಮೂಲಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದೆ. ಬೆಲೆ ಏರಿಕೆಯಿಂದಾಗಿ ಈಗಾಗಲೇ ಕನ್ನಡಿಗರು ರೋಸಿ ಹೋಗಿದ್ದರೂ ಮತ್ತೆ ನೀರಿಗೂ ಸುಂಕ ಹೆಚ್ಚಿಸುವ ಮೂಲಕ ಬರದ ಬಾಸುಂಡೆ ಮೇಲೆ ಬರೆ ಹಾಕಿದೆ #ATMSarkara. ಗೃಹ ಬಳಕೆಯ ನೀರಿಗೆ ಪ್ರತಿ MCFTಗೆ ₹320 ಹಾಗೂ ಕೈಗಾರಿಕೆಗಳಿಗೆ ಪ್ರತಿ MCFTಗೆ ₹1.5 ಲಕ್ಷದಿಂದ ₹3 ಲಕ್ಷದವರೆಗೂ ನೀರಿನ ದರ ಏರಿಕೆ ಮಾಡಿದೆ. ವಿದ್ಯುತ್ ದರ ಏರಿಕೆಯಿಂದ ಬೇಸತ್ತು ಈಗಾಗಲೇ ಕೈಗಾರಿಕೆಗಳು ರಾಜ್ಯದಿಂದಲೇ ಎತ್ತಂಗಡಿ ಆಗಿರುವಾಗ ಅಳಿದುಳಿದ ಕೈಗಾರಿಕೆಗಳನ್ನು ಮುಚ್ಚಿಸಲು ತುಘಲಕ್ ಸರ್ಕಾರ ಇಂಥ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications