Shivaraj Kumar: ಬದುಕನ್ನ ಅನುಭವಿಸುವುದೇ ನಿಜವಾದ ಕಿಕ್: ನಟ ಶಿವರಾಜ್ ಕುಮಾರ್ ಹೀಗೆ ಹೇಳಿದ್ಯಾಕೆ?
ಹುಬ್ಬಳ್ಳಿ, ನವೆಂಬರ್ 26: ಬದುಕನ ಸಾರ ನಿಜವಾಗಿಯೂ ಸಂಭ್ರಮಿಸುವುದರಲ್ಲೇ ಕಿಕ್ ಇದೆ. ಅದನ್ನು ಬಿಟ್ಟು ಮಾದಕವಸ್ತು ವ್ಯಸನಕ್ಕೆ ಯಾರೂ ದಾಸರಾಗಬಾರದು ಎಂದು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಲಹೆ ನೀಡಿದರು.
ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹು-ಧಾ ಪೊಲೀಸ್ ಕಮಿಷನರೇಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವ್ಯಸನ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಜನ್ಮ ದೇವರು ನೀಡುವ ಅಮೂಲ್ಯವಾದ ಉಡುಗೊರೆ. ಅದನ್ನು ಜವಾಬ್ದಾರಿಯಿಂದ ಕಾಪಾಡಿ ಕೊಳ್ಳಬೇಕು. ಅದಕ್ಕಾಗಿ ಮಾದಕವಸ್ತು ವ್ಯಸನದಿಂದ ದೂರವಿರುವುದು ಒಳ್ಳೆಯದು. ನೀವು ಎಚ್ಚೆತ್ತುಕೊಂಡು, ಸ್ನೇಹಿತರಿಗೂ ಜಾಗೃತಿ ಮೂಡಿಸಬೇಕು. ಅಗತ್ಯ ಸಂದರ್ಭದಲ್ಲಿ ಪೊಲೀಸರಿಗೂ ಮಾಹಿತಿ ನೀಡಬೇಕು ಎಂದು ಶಿವರಾಜ್ ಕುಮಾರ್ ಅವರು ಸಲಹೆ ನೀಡಿದರು.

'ನಶೆಯನ್ನು ಯಾವುದೋ ವಸ್ತುವಿನಲ್ಲಿ ಹುಡುಕುವ ಬದಲು ಗೆಳೆತನ, ಸಂಬಂಧ, ಓದು, ಕ್ರೀಡೆಯಲ್ಲಿ ಹುಡುಕಬೇಕು. ಪ್ರಾಮಾಣಿಕವಾಗಿ ಬದುಕುವ ರೀತಿಯಲ್ಲೂ ನಶೆ ಇದೆ. ಮಾದಕ ವಸ್ತು ವ್ಯಸನದಿಂದ ಬದುಕು ಹಾಳಾಗುತ್ತದೆ. ತಂದೆ-ತಾಯಿ ಆಸೆ ಈಡೇರಿಸಲು ಶ್ರಮಿಸಬೇಕು. ಒಳ್ಳೆತನಕ್ಕೆ ಹೋರಾಡಬೇಕು. ಸಂತೋಷದಿಂದ ಬದುಕಬೇಕು' ಎಂದು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಿವಿಮಾತು ಹೇಳಿದರು.
ಯಾವುದೇ ಕಾರಣಕ್ಕೋ ವಿದ್ಯಾರ್ಥಿಗಳು ಯುವ ಸಮೂಹ ದಾರಿ ತಪ್ಪಬಾರದು. ಸ್ನೇಹ ಸಂಬಂಧ ಅತ್ಯಂತ ಪವಿತ್ರವಾಗಿದದ್ದು ಅದು ಸ್ನೇಹತಕ್ಕೆ ದೊಡ್ಡ ಬೆಲೆ ಇದೆ. ನಾನು ಇಲ್ಲಿ ಒಳ್ಳೆಯ ಸ್ನೇಹಿತನಾಗಿ ಬಂದಿದ್ದೇನೆ. ಅದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಇರಬಹುದು, ತಾವು ಇರಬಹುದು. ಆದ್ದರಿಂದ ಯಾವುದೇ ರೀತಿಯ ಜೀವನ ಹಾಳು ಮಾಡಿಕೊಳ್ಳಬೇಡಿ ನಟ ಶಿವರಾಜ್‌ಕುಮಾರ್ ಅವರು ಹೇಳಿದರು.
ಇನ್ನೂ ಈ ವೇಳೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾತನಾಡಿ, 'ಮಾದಕ ವಸ್ತು ವ್ಯಸನವೆಂಬುದು ಗೆದ್ದಲಹುಳದಂತೆ ವ್ಯಕ್ತಿಯ ಬದುಕನ್ನೇ ನಾಶ ಮಾಡುತ್ತದೆ' ಎಂದರು. ಇನ್ನೂ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಕಾಲೇಜಿನ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. ಈ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಅವರು ಹಾಡು ಹಾಡಿ, 'ಟಗರು' ಹಾಡಿಗೆ ನೃತ್ಯ ಮಾಡಿ ರಂಜಿಸಿದರು. ಅಲ್ಲದೇ ವಿದ್ಯಾರ್ಥಿಗಳು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು.
ನಮ್ಮ ಕುಟುಂಬಕ್ಕೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಹಾಗೂ ಅವರ ತಾಯಿ ಸಿದ್ದರೂಢ ಮಠದಲ್ಲಿ ಬೆಳೆದಿದ್ದಾರೆ. ಹೀಗಾಗಿ ಹುಬ್ಬಳ್ಳಿ ನಮಗೆ ಹೊಸದೇನಲ್ಲ. ಆಗಾಗ ಬಂದು ಹೋಗುತ್ತಿರುತ್ತೇವೆ. ಈ ಭಾಗದಲ್ಲೂ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ. ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಲ್ಲ ಅಂತಾ ಭಾವಿಸೋದು ಬೇಡ. ಮಹದಾಯಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಆಗಮಿಸಲಿದ್ದೇವೆ. ಕನ್ನಡ ಚಿತ್ರರಂಗದ ಬಗ್ಗೆ ಈ ಭಾಗದಲ್ಲಿರುವ ಕೊರಗು ನೀಗಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ನಾವೆಲ್ಲ ಒಗ್ಗಟ್ಟಾಗಿ ಈ ಭಾಗದಲ್ಲೂ ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭರವಸೆ ನೀಡಿದರು.











Click it and Unblock the Notifications