ನಿಜಗುಣಂದ ಶ್ರೀಗಳಿಗೆ ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳು
ಕಿತ್ತೂರು, ಸೆಪ್ಟೆಂಬರ್ 9: ಕಿತ್ತೂರು ತಾಲೂಕಿನ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಪತ್ರ ಬಂದಿದೆ. ಆಗಸ್ಟ್ 8ರಂದು ಪತ್ರ ಬಂದಿದ್ದು, ನಂತರ ಬೆಳಕಿಗೆ ಬಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಸ್ವಾಮೀಜಿಗಳಿಗೆ 2020 ರಲ್ಲಿ ಇದೇ ರೀತಿಯ ಬೆದರಿಕೆ ಪತ್ರ ಬಂದಿತ್ತು. ಇತ್ತೀಚಿನ ಪತ್ರವು ಅನಾಮಧೇಯ ವ್ಯಕ್ತಿಯು 2020 ರಲ್ಲಿ ನೀನು ಬದುಕುಳಿದಿರಬಹುದು, ಆದರೆ ಅವರು 2023 ರಲ್ಲಿ ಬದುಕುವುದಿಲ್ಲ ಮತ್ತು ಅವರ ಕೊನೆಯ ಆಚರಣೆಗಳಿಗೆ ಸಿದ್ಧರಾಗಿರಲು ನಿನ್ನ ಭಕ್ತಾಧಿಗಳಿಗೆ ಹೇಳು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರವು ಹಿಂದೂ ದೇವತೆಗಳನ್ನು "ನಿಂದನೆ" ಮಾಡುವುದು "ಪಾಪ" ಮತ್ತು "ಓಂ ಶ್ರೀ ಕಾಳಿಕಾದೇವಿ" ಎಂದು ಬರೆಯಲಾಗಿದೆ. ಪತ್ರವನ್ನು ಕೈಯಿಂದ ಬರೆದು ಕವರ್‌ನಲ್ಲಿ ಕಳುಹಿಸಲಾಗಿದೆ. ನಿಜಗುಣಾನಂದ ಸ್ವಾಮೀಜಿ ಅವರು ಬಸವೇಶ್ವರರ ತತ್ವಗಳನ್ನು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಅವರ ಪ್ರವಚನಗಳು ಮೂಢನಂಬಿಕೆ ಆಚರಣೆಗಳು ಮತ್ತು ಮೂರ್ತಿ ಪೂಜೆಗೆ ವಿರುದ್ಧವಾಗಿವೆ.
2020ರಲ್ಲಿ ಹತ್ಯೆ ಮಾಡುವುದಾಗಿ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಇದೀಗ ಮತ್ತೆ ಜೀವ ಬೇದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಜೀವ ಬೆದರಿಕೆ ಪತ್ರ ಬರೆದಿದ್ದಾರೆ. ಜೀವ ಬೆದರಿಕೆ ಪತ್ರದ ಬಗ್ಗೆ ಈವರೆಗೂ ದೂರು ದಾಖಲಿಸಿಕೊಳ್ಳದೇ ಕಿತ್ತೂರು ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಶ್ರೀ, ಪ್ರಮುಖ ಲಿಂಗಾಯತ ಸ್ವಾಮೀಜಿಗಳಲ್ಲಿ ಒಬ್ಬರು. ದಶಕಗಳಿಂದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾಗಿದ್ದಾರೆ. ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲವನ್ನು ಕೇಂದ್ರವಾಗಿಸಿಕೊಂಡು ತಮ್ಮ ವಿಚಾರಗಳನ್ನು ಬಿತ್ತಿತ್ತು ಬಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀಗಳು ಚಿತ್ರದುರ್ಗ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಗಳಿಂದ ಪತ್ರ ಬರುತ್ತಿವೆ. ಸಾವಿನ ಬಗ್ಗೆ ನನಗೆ ಯಾವುದೇ ಭಯವಿಲ್ಲ. ಆದರೆ ಸಮಾಜಕ್ಕೆ ನಮ್ಮ ಸೇವೆ ನಿಂತು ಹೋಗುತ್ತೆ ಎಂಬ ಚಿಂತೆ ಇದೆ. ಸರ್ಕಾರ ಆದಷ್ಟು ಬೇಗ ಇದರ ಹಿಂದೆ ಇದ್ದವರನ್ನು ಪತ್ತೆ ಹಚ್ಚಬೇಕು. ರಾಜ್ಯದಲ್ಲಿ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾಗಿದೆ. ಈಗ ಕೊಲೆ ಬೆದರಿಕೆ ಬರುತ್ತಿರುವುದರಿಂದ ನನಗೆ ಆತಂಕ ಹುಟ್ಟಿಸಿದೆ.
ಕ್ಷೇತ್ರದ ಶಾಸಕರು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಸರ್ಕಾರಕ್ಕೆ ನಾನು ಮನವಿ ಮಾಡುವುದಿಲ್ಲ, ಇದು ಸರ್ಕಾರದ ಕೆಲಸ. ನಾನು ಒಬ್ಬನೇ ಮಠದಲ್ಲಿ ಇರುತ್ತೇನೆ, ಹೀಗಾಗಿ ಆತಂಕ ಶುರುವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications