Breaking: ಬಡ್ತಿ ಮೀಸಲಾತಿ ಜಾರಿಗೆ ಸರ್ಕಾರ ಆದೇಶ
ಬೆಂಗಳೂರು, ಫೆಬ್ರವರಿ 27: ಪರಿಶಿಷ್ಟ ಜಾತಿ, ಪಂಗಡ ಸೇರಿ ಹಿಂದುಳಿದ ಸಮುದಾಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಬಡ್ತಿ ಮೀಸಲಾತಿ ಕಾಯ್ದೆಯನ್ನು ಇಂದಿನಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಿದೆ.
ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದ್ದರೂ ಸಹ ಬಹು ಕಾಲದಿಂದ ಜಾರಿ ಮಾಡದೆ ಮೀನಾ-ಮೇಷ ಎಣಿಸಲಾಗುತ್ತಿತ್ತು. ಆದರೆ ಕುಮಾರಸ್ವಾಮಿ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಆದೇಶ ಹೊರಡಿಸಿದೆ.
ಬಡ್ತಿ ಮೀಸಲಾತಿಯನ್ನು ಸುಪ್ರಿಂ ಕೋರ್ಟ್ 2017 ರಲ್ಲಿ ರದ್ದು ಮಾಡಿತ್ತು. ಆ ನಂತರ ಸಿದ್ದರಾಮಯ್ಯ ಅವಧಿಯಲ್ಲಿ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರಪತಿಗಳ ಅಂಕಿತ ಪಡೆಯಲಾಗಿತ್ತು. ಆದರೆ ಜಾರಿ ಮಾಡಿರಲಿಲ್ಲ.

ಆದರೆ ಈಗ ಕುಮಾರಸ್ವಾಮಿ ಸರ್ಕಾರವು ಸಂಪುಟದಲ್ಲಿ ಕಾಯ್ದೆಗೆ ಒಪ್ಪಿಗೆ ಪಡೆದು ಜಾರಿಗೊಳಿಸಿದೆ. ತ್ವರಿತವಾಗಿ ಜಾರಿ ಆಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸುಪ್ರಿಂಕೋರ್ಟ್‌ನಲ್ಲಿ ಬಡ್ತಿ ಮೀಸಲಾತಿ ರದ್ದಾದ ಬಳಿಕ ಎಸ್‌ಸಿ, ಎಸ್‌ಟಿ ನೌಕರರಿಗೆ ಹಿಂಬಡ್ತಿ ಆಗಿತ್ತು. ಆದರೆ ಈಗ ಮತ್ತೆ ಅವರಿಗೆ ಬಡ್ತಿ ದೊರೆಯಲಿದೆ. ಅದೂ ಸಹ ತ್ವರಿತವಾಗಿ ದೊರೆಯಲಿದೆ.












Click it and Unblock the Notifications